ಕರ್ನಾಟಕ

karnataka

ETV Bharat / bharat

ದೇಶದ ಮೊದಲ ಫೈವ್​​ ಸ್ಟಾರ್ ಕ್ಯಾಬ್​ ಡ್ರೈವರ್... ಮಂಗಳಮುಖಿಯರಿಗೆ ಮಾದರಿ ಈ ರಾಣಿ! - cab driver

ಮಂಗಳಮುಖಿ ರಾಣಿ ಕಿನ್ನರ್​​ ಎಂಬುವರು ಭಾರತದ ಮೊದಲ 5 ಸ್ಟಾರ್ ಊಬರ್ ಕ್ಯಾಬ್ ಡ್ರೈವರ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಭಿಕ್ಷೆ ಬೇಡದೇ ರಾಣಿ ಕಿನ್ನಾರ ಸ್ವಾಭಿಮಾನದ ಜೀವನ ನಡೆಸುವ ಮೂಲಕ ಮಂಗಳಮುಖಿಯರಿಗೆ ಮಾದರಿಯಾಗಿದ್ದಾರೆ.

ಮಂಗಳಮುಖಿ ಕ್ಯಾಬ್ ಡ್ರೈವರ್

By

Published : Sep 23, 2019, 7:55 PM IST

Updated : Sep 23, 2019, 8:11 PM IST

ಭುವನೇಶ್ವರ್​ (ಒಡಿಶಾ):ಮಂಗಳಮುಖಿಯರು ನಿತ್ಯ ರಸ್ತೆ, ನಿಲ್ದಾಣ, ರೈಲ್ವೆ ಪ್ಲಾಟ್​ ಫಾರ್ಮ್​​, ಮಾರುಕಟ್ಟೆ, ಬೀದಿಗಳಲ್ಲಿ ಭಿಕ್ಷೆ ಬೇಡಿ ಬದುಕು ಸಾಗಿಸುತ್ತಿರುವುದನ್ನು ನೋಡಿರಬಹುದು. ಆದರೆ, ಈ ಮಂಗಳಮುಖಿ ದೇಶದಲ್ಲೇ ಮೊದಲ ಫೈವ್​ ಸ್ಟಾರ್​​ ಕ್ಯಾಬ್​ ಡ್ರೈವರ್​ ಎಂಬ ಹೆಮ್ಮೆಗೆ ಪಾತ್ರರಾಗಿದ್ದಾರೆ.

ಒಡಿಶಾದ ರಾಣಿ ಕಿನ್ನರ​ ಎಂಬುವರು 5 ಸ್ಟಾರ್ ಉಬರ್​ ಕ್ಯಾಬ್​ ಡ್ರೈವರ್​ ಆಗಿದ್ದು, ಸ್ವಾವಲಂಬನೆ ಬದುಕು ಕಟ್ಟಿಕೊಂಡಿದ್ದಾರೆ. ಇವರು ಆರಂಭದಲ್ಲಿ ಆಟೋ ರಿಕ್ಷಾ ಓಡಿಸುತ್ತಿದ್ದರು, ಆದರೆ ಇವರ ಆಟೋದಲ್ಲಿ ತೆರಳಲು ಜನರು ಹಿಂಜರಿಯುತ್ತಿದ್ದರು. ಜನರು ಇವರನ್ನು ಆಟೋ ರಿಕ್ಷಾ ಡ್ರೈವರ್​​ ಆಗಿ ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಬಳಿಕ ಪುರಿಯಲ್ಲಿ ನಡೆದ ಪವಿತ್ರ ರಥಯಾತ್ರೆಯಲ್ಲಿ ಆಂಬುಲೆನ್ಸ್​ ಚಾಲಕಿಯಾಗಿ ಕಾರ್ಯನಿರ್ವಹಿಸಿದ್ದರು.

ಹೀಗೆ ರಾಣಿಯವರು ಸಮಾಜದಲ್ಲಿ ಜನರಿಂದ ತಿರಸ್ಕೃತಗೊಂಡಾಗ ಇವರ ಬೆಂಬಲಕ್ಕೆ ನಿಂತಿದ್ದು ಓರ್ವ ಮಾಜಿ ಓಲಾ ಕ್ಯಾಬ್​ ಚಾಲಕ. ಆತ ರಾಣಿಗೆ ಮತ್ತೆ ಡ್ರೈವರ್​​ ವೃತ್ತಿಗೆ ಮರಳಲು ನೆರವಾಗಿದ್ದ. ಓಲಾ ಕಡೆಯಿಂದ ನಡೆದ ಸಂದರ್ಶನದಲ್ಲಿ ಯಶಸ್ಸು ಕಂಡ ರಾಣಿ, ಬಳಿಕ ತಮ್ಮದೇ ಸ್ವಂತ ಕಾರು ಖರೀದಿಸಿದ್ದು, ಸಮಾಜದಲ್ಲಿನ ಇತರ ಅನೇಕ ಲೈಂಗಿಕ ಅಲ್ಪಸಂಖ್ಯಾತರಿಗೆ ಮಾದರಿಯಾಗಿದ್ದಾರೆ.

ದೇಶದ ಮೊದಲ ಫೈವ್ ಸ್ಟಾರ್ ಕ್ಯಾಬ್​ ಡ್ರೈವರ್ ರಾಣಿ

ಈ ಬಗ್ಗೆ ಮಾತನಾಡಿರುವ ರಾಣಿ, '2016ರಲ್ಲಿ ನಾನು ಆಟೋ ಚಾಲಕಿಯಾಗಿ ಕಾರ್ಯ ಆರಂಭಿಸಿದ್ದೆ ಆದರೆ, ನನ್ನ ಆಟೋ ಹತ್ತುವ ಮನಸ್ಸು ಮಾಡುತ್ತಿರಲಿಲ್ಲ. ಬಳಿಕ 2017ರಲ್ಲಿ ನನಗೆ ಪುರಿ ರಥೋತ್ಸವದಲ್ಲಿ ಆಂಬುಲೆನ್ಸ್​ ಡ್ರೈವರ್​ ಆಗುವ ಅವಕಾಶ ದೊರೆಯಿತು' ಎಂದು ಹೇಳಿದ್ದಾರೆ.

ಇನ್ನು ರಾಣಿಯವರ ಸ್ವಂತಿಕೆಯ ಜೀವನ ಎಲ್ಲರ ಪ್ರಶಂಸೆಗೆ ಪಾತ್ರವಾಗಿದ್ದು, 'ನಾನೂ ಕೂಡ ರಾಣಿಯವರ ದಾರಿಯಲ್ಲೇ ತೆರಳಲು ನಿರ್ಧರಿಸಿದ್ದೇನೆ. ನಾವು ಕ್ಯಾಬ್​​ ಡ್ರೈವರ್​ ಆದರೆ ನಮ್ಮ ಜೊತೆ ಪ್ರಯಾಣಿಸುವುದು ಸುರಕ್ಷಿತ ಎಂಬ ಭಾವನೆ ಮಹಿಳೆಯರಲ್ಲಿ ಮೂಡುತ್ತದೆ. ಅಲ್ಲದೆ, ರಾತ್ರಿ ವೇಳೆ ಪುರುಷರಿಗಿಂತ ನಮ್ಮೊಂದಿಗೆ ಪ್ರಯಾಣ ಮಾಡುವುದೇ ಹೆಚ್ಚು ಸುರಕ್ಷಿತ. ರಾಣಿಯವರಂತೆಯೇ ನಾನೂ ಕೂಡ ಕ್ಯಾಬ್​ ಡ್ರೈವರ್​ ಆಗುತ್ತೇನೆ' ಎಂದು ಮತ್ತೋರ್ವ ಮಂಗಳಮುಖಿ ಸ್ನೇಹಶ್ರೀ ಕಿನ್ನರ್​ ಹೇಳುತ್ತಾರೆ.

ಒಟ್ಟಾರೆ ಉಬರ್​ ಕ್ಯಾಬ್​ ಡ್ರೈವರ್ ಆಗಿರುವ ಒಡಿಶಾದ ಮಂಗಳಮುಖಿ ರಾಣಿ ಕಿನ್ನರ್​ ಅವರ ಸ್ವಾವಲಂಬಿ ಬದುಕು ಇತರರಿಗೆ ಮಾದರಿಯಾಗಿದೆ.

Last Updated : Sep 23, 2019, 8:11 PM IST

ABOUT THE AUTHOR

...view details