ರಾಂಚಿ: ಸಿಬಿಎಸ್ಇ 10ನೇ ತರಗತಿ ಫಲಿತಾಂಶ ಪ್ರಕಟಗೊಂಡಿದೆ. ದೇಶಾದ್ಯಂತ ಶೇ. 88.78ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದ ವಿದ್ಯಾರ್ಥಿನಿಯೊಬ್ಬಳು ಈ ಪರೀಕ್ಷೆಯಲ್ಲಿ ಗಣಿತ ಹಾಗೂ ಸಮಾಜ ವಿಜ್ಞಾನ ವಿಭಾಗದಲ್ಲಿ 100ಕ್ಕೆ 100ರಷ್ಟು ಅಂಕಗಳನ್ನು ಪಡೆದುಕೊಂಡಿದ್ದಾಳೆ.
ಜಾರ್ಖಂಡ್ನ ರಾಂಚಿಯ ಜವಾಹರ್ ವಿದ್ಯಾ ಮಂದಿರದಲ್ಲಿ ವ್ಯಾಸಂಗ ಮಾಡಿದ ಅನನ್ಯಾ ಸಿಂಗ್ ಈ ಸಾಧನೆ ಮಾಡಿದ್ದಾರೆ. ಉಳಿದಂತೆ ಇಂಗ್ಲಿಷ್ನಲ್ಲಿ 97 ಅಂಕ, ಹಿಂದಿ ಹಾಗೂ ಕಂಪ್ಯೂಟರ್ ವಿಷಯದಲ್ಲಿ 98 ಅಂಕ ಗಳಿಸಿದ್ದು, ಒಟ್ಟು ಫಲಿತಾಂಶ ಶೇ. 98.8ರಷ್ಟಾಗಿದೆ.
ಈ ಕುರಿತ ಪ್ರತಿಕ್ರಿಯಿಸಿರುವ ಅನನ್ಯಾ ಸಿಂಗ್, ತಾಯಿ ಹಾಗೂ ತಂದೆಗೆ ಗೆಲುವಿನ ಗೌರವ ಸಲ್ಲಿಸಿದ್ದಾರೆ. ಪ್ರತಿದಿನ 12 ಗಂಟೆಗಳ ಕಾಲ ಅಭ್ಯಾಸ ಮಾಡ್ತಿದ್ದು, ಮುಂದಿನ ದಿನಗಳಲ್ಲಿ ವೈದ್ಯೆಯಾಗುವ ಬಯಕೆ ಹೊಂದಿದ್ದಾಳೆ.
ಈ ಸಲದ ಪರೀಕ್ಷೆಯಲ್ಲಿ ದೇಶಾದ್ಯಂತ ಶೇ. 93.31ರಷ್ಟು ವಿದ್ಯಾರ್ಥಿನಿಯರು ಪಾಸ್ ಆಗಿದ್ದಾರೆ.