ಕರ್ನಾಟಕ

karnataka

ETV Bharat / bharat

ಕೊರೊನಾ ಹೋರಾಟಕ್ಕೆ 20 ಕೋಟಿ ರೂ. ದೇಣಿಗೆ ನೀಡಿದ ರಾಮೋಜಿ ರಾವ್​

ದೇಶದೆಲ್ಲೆಡೆ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್​ 19 ವಿರುದ್ಧದ ಹೋರಾಟಕ್ಕೆ ರಾಮೋಜಿ ಗ್ರೂಪ್​ ಕೈ ಜೋಡಿಸಿದೆ. ಸಂಸ್ಥೆಯ ಅಧ್ಯಕ್ಷರು ಮತ್ತು ಪ್ರತಿಷ್ಠಿತ ಈನಾಡು ದಿನಪತ್ರಿಕೆಯ ಮುಖ್ಯಸ್ಥರಾಗಿರುವ ರಾಮೋಜಿ ರಾವ್​ ಅವರು ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಿಗೆ ತಲಾ 10 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.

ರಾಮೋಜಿ ರಾವ್​
ರಾಮೋಜಿ ರಾವ್​

By

Published : Apr 1, 2020, 9:35 AM IST

Updated : Apr 1, 2020, 9:59 AM IST

ಹೈದರಾಬಾದ್​ :ರಾಮೋಜಿ ಗ್ರೂಪ್​ ಆಫ್​ ಕಂಪನಿಗಳ ಅಧ್ಯಕ್ಷರು ಮತ್ತು ಪ್ರತಿಷ್ಠಿತ ಈನಾಡು ದಿನಪತ್ರಿಕೆಯ ಮುಖ್ಯಸ್ಥರಾಗಿರುವ ರಾಮೋಜಿ ರಾವ್ ಅವರು ಕೊರೊನಾ ನಿಯಂತ್ರಣಕ್ಕಾಗಿ​ ತೆಲಂಗಾಣ ಹಾಗೂ ಆಂಧ್ರಪ್ರದೇಶದ ಮುಖ್ಯಮಂತ್ರಿ ಪರಿಹಾರ ನಿಧಿಗೆ ತಲಾ 10 ಕೋಟಿ ರೂ. ಹಣ ದೇಣಿಗೆ ನೀಡಿದ್ದಾರೆ.

ದೇಶೆದೆಲ್ಲೆಡೆ ಲಾಕ್​ಡೌನ್​ ಘೋಷಣೆಯಾಗಿರುವುದರಿಂದ ಮುಖ್ಯಮಂತ್ರಿಗಳನ್ನು ನೇರವಾಗಿ ಭೇಟಿ ಮಾಡಲು ಸಾಧ್ಯವಾಗದ ಕಾರಣ ಆನ್​ಲೈನ್​ ಬ್ಯಾಂಕಿಂಗ್​ ಮೂಲಕ ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಣ ವರ್ಗಾಯಿಸಿರುವುದಾಗಿ ರಾಮೋಜಿ ರಾವ್​ ತಿಳಿಸಿದ್ದಾರೆ.

ಹಾಗೆಯೇ ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿರುವ ಎರಡು ರಾಜ್ಯದ ಮುಖ್ಯಮಂತ್ರಿಗಳ ಕಾಳಜಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎರಡೂ ತೆಲುಗು ರಾಜ್ಯಗಳ ಜನತೆಗೆ ತಮ್ಮ ಆರೋಗ್ಯ ಕಾಪಾಡಿಕೊಳ್ಳುವಂತೆ ವಿನಂತಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಮಾರ್ಚ್​ 24 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಹಿರಿಯ ಪತ್ರಕರ್ತರು ನಡೆಸಿದ್ದ ಸಂವಾದದಲ್ಲಿ ಕೋವಿಡ್​-19 ನಿಯಂತ್ರಣಕ್ಕೆ ಹಲವು ಅಮೂಲ್ಯ ಸಲಹೆಗಳನ್ನು ರಾಮೋಜಿ ರಾವ್​ ನೀಡಿದ್ದರು.

ಔಷಾಧಾಲಯ ಉದ್ಯಮ ವಿಚಾರದಲ್ಲಿ ಸಾಂಕ್ರಾಮಿಕ ರೋಗದಿಂದ ಪ್ರತಿಕೂಲ ಪರಿಣಾಮ ಬೀರಿದ ಎರಡು ರಾಷ್ಟ್ರಗಳಾದ ಇಟಲಿ ಮತ್ತು ಚೀನಾದಂತಹ ದೇಶಗಳ ಅನುಭವದಿಂದ ಭಾರತ ಕಲಿಯಬೇಕೆಂದು ರಾಮೋಜಿ ರಾವ್ ಅವರು ಪ್ರಧಾನಮಂತ್ರಿಗಳಿಗೆ ಒತ್ತಾಯಿಸಿದ್ದರು.

Last Updated : Apr 1, 2020, 9:59 AM IST

ABOUT THE AUTHOR

...view details