ಮುಂಬೈ: ಸಾರ್ವಜನಿಕರ ಒತ್ತಾಯದ ಮೇರೆಗೆ ಮಾರ್ಚ್ 28ರಿಂದ ದೂರದರ್ಶನದಲ್ಲಿ ಮರುಪ್ರಸಾರಗೊಳ್ಳುತ್ತಿರುವ ರಾಮಾಯಣ ಈಗಾಗಲೇ ಪ್ರಸಾರವಾದ ಮೊದಲ 4 ಎಪಿಸೋಡ್ಗಳನ್ನು ಬರೋಬ್ಬರಿ 93.3 ಮಿಲಿಯನ್ ಜನರು ವೀಕ್ಷಣೆ ಮಾಡಿದ್ದಾರೆ. ಏಪ್ರಿಲ್ 16ರಂದು ಪ್ರಸಾರಗೊಂಡಿರುವ ರಾಮಾಯಣದ ಎಪಿಸೋಡ್ವೊಂದನ್ನ ಬರೋಬ್ಬರಿ 7.7 ಕೋಟಿ ಜನರು ವೀಕ್ಷಿಸಿದ್ದು, ಹೊಸ ದಾಖಲೆ ನಿರ್ಮಾಣಗೊಂಡಿದೆ.
ಮರು ಪ್ರಸಾರಗೊಂಡು ಇತಿಹಾಸ ಬರೆದ ರಾಮಾಯಣ... ಒಂದೇ ದಿನ 7.7 ಕೋಟಿ ಜನರಿಂದ ವೀಕ್ಷಣೆ!
ದೇಶದಲ್ಲಿ ಲಾಕ್ಡೌನ್ ಆದೇಶ ಮುಂದುವರಿದಿರುವ ಕಾರಣ ಈ ಹಿಂದೆ ಫೇಮಸ್ ಆಗಿದ್ದ ಕೆಲವೊಂದು ಪ್ರಸಿದ್ಧ ಧಾರಾವಾಹಿಗಳು ದೂರದರ್ಶನದಲ್ಲಿ ಮರುಪ್ರಸಾರವಾಗುತ್ತಿದ್ದು, ಅದರಲ್ಲಿ ರಮಾನಂದ್ ಸಾಗರ್ ಅವರ ರಾಮಾಯಣ ಕೂಡ ಒಂದಾಗಿದೆ.
ರಾಮಚರಿತ ಮಾನಸ ಆಧಾರಿತ ವಾಲ್ಮೀಕಿ ರಾಮಾಯಣದ ಹಾಗೂ ತುಳಿಸಿದಾಸ್ ಅವರ ಜೀವನ ಆಧಾರಿತ ಧಾರಾವಾಹಿ ಇದಾಗಿದ್ದು, ರಮಾನಂದ್ ಸಾಗರ್ ಅವರು ಒಟ್ಟು 78 ಎಪಿಸೋಡ್ಗಳನ್ನ ಮಾಡಿದ್ದರು. 1987-88ರ ಇಸಿವಿಯಲ್ಲಿ ದೂರದರ್ಶನದಲ್ಲಿ ಪ್ರಸಾರಗೊಳ್ಳುತ್ತಿದ್ದ ಈ ಐತಿಹಾಸಿಕ ಧಾರವಾಹಿ ತದನಂತರ ಇದೀಗ ಮತ್ತೊಮ್ಮೆ ಪ್ರಸಾರಗೊಳ್ಳುತ್ತಿದ್ದು, ಜನರ ಮನದಲ್ಲಿ ಹಸಿರಾಗಿ ಉಳಿದುಕೊಂಡಿದೆ. ಒಟ್ಟಾಗಿ ರಾಮಾಯಣ ಧಾರಾವಾಹಿ ಬರೋಬ್ಬರಿ 91 ಮಿಲಿಯನ್ ಜನರು ವೀಕ್ಷಣೆ ಮಾಡಿರುವುದಾಗಿ ಪ್ರಸಾರ ಭಾರತಿ ಮಾಹಿತಿ ನೀಡಿದೆ.
ಏಪ್ರಿಲ್ 3ರ ಅಂತ್ಯದ ವೇಳೆಗೆ ಡಿಡಿ ನ್ಯಾಷನಲ್ ಬರೋಬ್ಬರಿ 1,59,623 ಅಂಕಗಳೊಂದಿಗೆ ನಂಬರ್ 1 ಸ್ಥಾನದಲ್ಲಿದೆ. ಖಾಸಗಿ ವಾಹಿನಿಗಳ ಮುಂದೆ ತನ್ನ ಜನಪ್ರಿಯತೆ ಕಳೆದುಕೊಂಡಿದ್ದ ದೂರದರ್ಶನ ಇದೀಗ ಮತ್ತೊಮ್ಮೆ ತನ್ನ ಛಾಪು ಮೂಡಿಸುತ್ತಿದೆ.