ಅಯೋಧ್ಯೆ: ಭಕ್ತರ ಬೇಡಿಕೆಯ ಮೇರೆಗೆ ರಾಮ್‌ಲಲ್ಲಾ ಮೂರ್ತಿಯನ್ನು ಶೆಡ್‌ನಿಂದ ತೆಗೆದು ಫೈಬರ್‌ನಿಂದ ಮಾಡಿದ ತಾತ್ಕಾಲಿಕ ದೇವಾಲಯದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ.
ರಾಮ್ಲಲಾ ಮೂರ್ತಿ ತಾತ್ಕಾಲಿಕ ದೇವಾಲಯಕ್ಕೆ ಶಿಫ್ಟ್ ರಾಮ್‌ಲಲ್ಲಾ ಮೂರ್ತಿಯನ್ನು ಮಾರ್ಚ್. 25 ರ ಬೆಳಗ್ಗೆ ಅಯೋಧ್ಯೆಯ ತಾತ್ಕಾಲಿಕ ದೇವಸ್ಥಾನಕ್ಕೆ ಸ್ಥಳಾಂತರಗೊಳಿಸಲಾಯಿತು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಮ್‌ಲಲ್ಲಾ ಮೂರ್ತಿಗೆ ಪೂಜೆ ಸಲ್ಲಿಸಿದ್ರು.
ದೇವಾಲಯ ನಿರ್ಮಾಣದ ವೇಳೆ ಕಂಡುಬಂದ ಅವಶೇಷಗಳು ದೇವಾಲಯ ನಿರ್ಮಾಣದ ವೇಳೆ ಕಂಡುಬಂದ ಅವಶೇಷಗಳು ಸುಮಾರು 134 ವರ್ಷಗಳ ಹಳೆಯ ಅಯೋಧ್ಯ ದೇವಾಲಯ - ಮಸೀದಿ ವಿವಾದದ ಬಗ್ಗೆ ಸುಪ್ರೀಂಕೋರ್ಟ್ 9 ನವೆಂಬರ್ 2019 ರಂದು ತೀರ್ಪು ನೀಡಿತ್ತು. ಈ ತೀರ್ಪಿನಲ್ಲಿ 2.77 ಎಕರೆ ಅಯೋಧ್ಯೆಯ ಸಂಪೂರ್ಣ ವಿವಾದಿತ ಭೂಮಿಯನ್ನು ರಾಮನ ದೇವಾಲಯ ನಿರ್ಮಾಣಕ್ಕಾಗಿ ಅನುಮತಿ ನೀಡಿತ್ತು.
ರಾಮ್ಲಲಾ ಮೂರ್ತಿ ತಾತ್ಕಾಲಿಕ ದೇವಾಲಯಕ್ಕೆ ಶಿಫ್ಟ್ ಅಂದಿನಿಂದ ಅಯೋಧ್ಯೆಯಲ್ಲಿ ಶ್ರೀ ರಾಮನ ಭವ್ಯ ದೇವಾಲಯವನ್ನು ನಿರ್ಮಿಸುವ ಕೆಲಸ ಪ್ರಾರಂಭವಾಯಿತು. ನ್ಯಾಯಾಲಯದ ಆದೇಶದ ಪ್ರಕಾರ ಕೇಂದ್ರ ಸರ್ಕಾರವು ದೇವಾಲಯದ ನಿರ್ಮಾಣಕ್ಕಾಗಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸ್ಥಾಪಿಸಿತ್ತು. ದೇವಾಲಯವನ್ನು ನಿರ್ಮಿಸುವ ಕಾರ್ಯವೂ ಪ್ರಾರಂಭವಾಗಿದೆ. ಆದರೆ ಈ ಮಧ್ಯೆ ಕೊರೊನಾ ವೈರಸ್ ಬಂದ ಹಿನ್ನೆಲೆ ಈ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ.
ದೇವಾಲಯ ನಿರ್ಮಾಣದ ವೇಳೆ ಕಂಡುಬಂದ ಅವಶೇಷಗಳು ದೇವಾಲಯ ನಿರ್ಮಾಣದ ವೇಳೆ ಕಂಡುಬಂದ ಅವಶೇಷಗಳು ಬಾಬರಿ ಮಸೀದಿ - ರಾಮ್ ಜನ್ಮಭೂಮಿ ವಿವಾದದಲ್ಲಿ, ನಿರ್ಮೋಹಿ ಅಖಾರಾದ ಮಹಂತ್ ರಘುಬರ್ ದಾಸ್ 1885 ರಲ್ಲಿ ಮೊದಲ ಬಾರಿಗೆ ಫೈಜಾಬಾದ್ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅಲಹಾಬಾದ್ ಹೈಕೋರ್ಟ್‌ನ ತೀರ್ಪಿನ ವಿರುದ್ಧ ಸಲ್ಲಿಸಿದ ಹಿಂದೂ ಮತ್ತು ಮುಸ್ಲಿಂ ಕಡೆಯಿಂದ ಮೇಲ್ಮನವಿಗಳನ್ನು 2019 ರ ಆಗಸ್ಟ್ 6 ರಂದು ಸುಪ್ರೀಂಕೋರ್ಟ್‌ನ ಸಂವಿಧಾನ ಪೀಠ ವಿಚಾರಣೆ ಆರಂಭಿಸಿತು.
ದೇವಾಲಯ ನಿರ್ಮಾಣದ ವೇಳೆ ಕಂಡುಬಂದ ಅವಶೇಷಗಳು ದೇವಾಲಯ ನಿರ್ಮಾಣದ ವೇಳೆ ಕಂಡುಬಂದ ಅವಶೇಷಗಳು ಲಾಕ್ಡೌನ್ ಸಮಯದಲ್ಲಿ ದೇವಾಲಯದ ಸಂಕೀರ್ಣವನ್ನು ನೆಲಸಮ ಮಾಡಲಾಗಿದೆ. ಈ ಸಮಯದಲ್ಲಿ, ಅನೇಕ ವಿಗ್ರಹಗಳು, ಗುಮ್ಮಟಗಳು ಮತ್ತು ಸ್ತಂಭಗಳು ಕಂಡುಬಂದಿವೆ. ಈ ಅವಶೇಷಗಳನ್ನು ಟ್ರಸ್ಟ್‌ನ ಮೇಲ್ವಿಚಾರಣೆಯಲ್ಲಿ ಇರಿಸಲಾಗಿದೆ.
ರಾಮ್ಲಲಾ ಮೂರ್ತಿ ತಾತ್ಕಾಲಿಕ ದೇವಾಲಯಕ್ಕೆ ಶಿಫ್ಟ್ ರಾಮ್ಲಲಾ ಮೂರ್ತಿ ತಾತ್ಕಾಲಿಕ ದೇವಾಲಯಕ್ಕೆ ಶಿಫ್ಟ್ ದೇವಾಲಯ ನಿರ್ಮಾಣದ ವೇಳೆ ಕಂಡುಬಂದ ಅವಶೇಷಗಳು