ಹೈದರಾಬಾದ್: ಆಗಸ್ಟ್ 5 ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ 'ಶುಭ' ದಿನವಾಗಿದೆ. ಏಕೆಂದರೆ ಈ ನಿರ್ದಿಷ್ಟ ದಿನಾಂಕದಂದು ಕೆಲವು ಪ್ರಮುಖ ನಿರ್ಧಾರಗಳನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ. ಅಯೋಧ್ಯೆಯಲ್ಲಿ ರಾಮ ಮಂದಿರದ 'ಭೂಮಿ ಪೂಜೆ' ಅದೇ ದಿನಾಂಕದಂದು ನಡೆಯುತ್ತಿರುವುದು ವಿಶೇಷ.
ಅಯೋಧ್ಯೆ ರಾಮ ಮಂದಿರದ ಭೂಮಿ ಪೂಜೆ:
ಆಗಸ್ಟ್ 5, 2020ರಂದು 500 ವರ್ಷಗಳ ವಿವಾದ ಅಂತ್ಯಗೊಳ್ಳಲಿದೆ. ಈ ವಿಷಯದ ಬಗ್ಗೆ ದೇಶವು ಹಲವಾರು ಹಿಂಸಾಚಾರ ಮತ್ತು ವಿಭಜನೆಯ ನಿದರ್ಶನಗಳನ್ನು ಕಂಡಿದೆ. ಸುಪ್ರೀಂ ಕೋರ್ಟ್ ತೀರ್ಪಿನ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 5ರಂದು ಅಯೋಧ್ಯೆಯ ರಾಮ ಮಂದಿರದ ಭೂಮಿ ಪೂಜೆ ಮತ್ತು ಅಡಿಪಾಯ ಹಾಕುವ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಧಾರ್ಮಿಕ ಆಚರಣೆಯ ದಿನಾಂಕ ಮತ್ತು ಸಮಯವನ್ನು ವೈದಿಕ ಪ್ರಕ್ರಿಯೆಯ ಪ್ರಕಾರ ನಿರ್ಧರಿಸಲಾಗಿದ್ದರೂ, ಬಿಜೆಪಿಗೆ ಆಗಸ್ಟ್ 5 ಶುಭ ದಿನವಾಗಿದೆ.
ಆರ್ಟಿಕಲ್ 370 ರದ್ದು:
ಇದೊಂದು 'ಐತಿಹಾಸಿಕ ನಡೆ'. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಆಗಸ್ಟ್ 5, 2019ರಂದು ಸಂವಿಧಾನದ 370ನೇ ವಿಧಿ ಅನ್ವಯ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಂಡಿತು. ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಎಂದು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಲಾಗಿದೆ. ಈ ಕ್ರಮದಿಂದ ಬಿಜೆಪಿ ತನ್ನ 'ಒಂದು ರಾಷ್ಟ್ರ, ಒಂದು ಸಂವಿಧಾನ' ಕನಸನ್ನು ನನಸಾಗಿಸಿತು. ಆಗಸ್ಟ್ 5 ದಿನಾಂಕವನ್ನೇ ಏಕೆ ನಿರ್ಧರಿಸಲಾಯಿತು ಎಂಬುದು ಕಾಕತಾಳೀಯ.
ಮೊಘಲ್ಸರಾಯ್ ನಿಲ್ದಾಣದ ಮರುನಾಮಕರಣ: