ಅಯೋಧ್ಯೆ (ಉತ್ತರ ಪ್ರದೇಶ):ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಮೇಲ್ವಿಚಾರಣೆಗಾಗಿ ಸುಪ್ರೀಂಕೋರ್ಟ್ ನಿರ್ದೇಶನದಂತೆ ಸ್ಥಾಪಿಸಲಾದ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಜುಲೈ 18 ರಂದು ಸಭೆ ಸೇರಿ ಮಂದಿರದ ವಿವಿಧ ಹಂತಗಳ ಕುರಿತು ಚರ್ಚಿಸುವ ಸಾಧ್ಯತೆ ಇದೆ.
ಜುಲೈ 18 ರಂದು ನಡೆಯುವ ಈ ಸಭೆಗೆ ಟ್ರಸ್ಟ್‌ನ ಎಲ್ಲ ಸದಸ್ಯರನ್ನು ಆಹ್ವಾನಿಸಲಾಗುವುದು. ಅವರೆಲ್ಲರೂ ಹಾಜರಾಗುವ ಸಾಧ್ಯತೆಯಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಈಟಿವಿ ಭಾರತ್‌ಗೆ ತಿಳಿಸಿದ್ದಾರೆ.
ಟ್ರಸ್ಟ್‌ನ ಅಧ್ಯಕ್ಷರಾಗಿ ಮಹಂತ್ ನೃತ್ಯ ಗೋಪಾಲ್ ದಾಸ್ ನೇತೃತ್ವದಲ್ಲಿ, ಟ್ರಸ್ಟ್‌ನ ಸದಸ್ಯರ ಪ್ರಧಾನ ಕಾರ್ಯದರ್ಶಿ ನಿರ್ಪೇಂದ್ರ ಮಿಶ್ರಾ, ಹೆಚ್ಚುವರಿ ಕೇಂದ್ರ ಗೃಹ ಕಾರ್ಯದರ್ಶಿ ಜ್ಞಾನೇಶ್ ಕುಮಾರ್ ಮತ್ತು ಉತ್ತರ ಪ್ರದೇಶ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನಿಶ್ ಅವಸ್ಥಿ ಈ ಸಮಿತಿಯಲ್ಲಿದ್ದಾರೆ.
ಇನ್ನುಳಿದಂತೆ ಟ್ರಸ್ಟ್ನಲ್ಲಿ ಹಿರಿಯ ವಕೀಲ ಕೆ. ಪ್ರಸನ್ನನ್, ಧಾರ್ಮಿಕ ಮುಖಂಡರುಗಳಾದಂತಹ ಗೋವಿಂದ್ ದೇವ್ ಗಿರಿ, ಸ್ವಾಮಿ ವಾಸುದೇವಾನಂದ್ ಸರಸ್ವತಿ, ಸ್ವಾಮಿ ವಿಶ್ವಪ್ರಸನ್ನ ತೀರ್ಥ, ಯುಗಪುರುಷ ಪರಮಾನಂದ ಗಿರಿ ಹಾಗೂ ಮಹಂತ್ ದೀನೇಂದ್ರ ದಾಸ್, ಆರ್ಎಸ್ಎಸ್ ಮುಖಂಡ ಅನಿಲ್ ಮಿಶ್ರಾ, ವಿಹೆಚ್ಪಿ ಮುಖಂಡ ಕಾಮೇಶ್ವರ್ ಚೌಪಾಲ್ ಇರಲಿದ್ದಾರೆ.