ಕರ್ನಾಟಕ

karnataka

ETV Bharat / bharat

ಬಿಎಸ್​​​ಎಫ್​​​ ಡಿಜಿ ಆಗಿ ರಾಕೇಶ್​ ಅಸ್ತಾನ ನೇಮಕ - ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ

ಸಿಬಿಐನ ವಿಶೇಷ ನಿರ್ದೇಶರಾಗಿದ್ದ ಐಪಿಎಸ್ ಅಧಿಕಾರಿ ರಾಕೇಶ್ ಅಸ್ತಾನಾ ಅವರನ್ನು ಗಡಿ ಭದ್ರತಾ ಪಡೆ ಮುಖ್ಯಸ್ಥರಾಗಿ ನೇಮಕ ಮಾಡಲಾಗಿದೆ. ಸಿಬಿಐ ಮಾಜಿ ನಿರ್ದೇಶಕ ಅಲೋಕ್​ ವರ್ಮಾ ಮತ್ತು ರಾಕೇಶ್​ ಅಸ್ತಾನ ನಡುವಣ ಜಗಳ ಸುಪ್ರೀಂಕೋರ್ಟ್​ ಮೆಟ್ಟಿಲೇರಿ ಭಾರಿ ವಿವಾದಕ್ಕೀಡಾಗಿತ್ತು.

Rakesh Asthana appointed BSF chief, VSK Kaumudi MHA Special Secy
ಬಿಎಸ್​​​ಎಫ್​​​ ಡಿಜಿ ಆಗಿ ರಾಕೇಶ್​ ಆಸ್ತಾನ ನೇಮಕ

By

Published : Aug 18, 2020, 8:47 AM IST

ನವದೆಹಲಿ: ಸಿಬಿಐನ ಮಾಜಿ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ಅವರನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮಹಾನಿರ್ದೇಶಕರಾಗಿ ನೇಮಕ ಮಾಡಲಾಗಿದೆ.

ಈಗಾಗಲೇ ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ (ಬಿಎಸ್ಎಎಸ್) ನ ಉನ್ನತ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಸ್ತಾನ, ಗುಜರಾತ್ ಕೇಡರ್​​​ನ 1984ನೇ ಬ್ಯಾಚ್​​​​ನ ಐಪಿಎಸ್ ಅಧಿಕಾರಿಯಾಗಿದ್ದಾರೆ.

ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಮಹಾನಿರ್ದೇಶಕರಾಗಿಯೂ (ಡಿಜಿ)ಅಸ್ತಾನ ಹೆಚ್ಚುವರಿ ಉಸ್ತುವಾರಿ ವಹಿಸಲಿದ್ದಾರೆ. ಮಾರ್ಚ್ 11 ರಿಂದ ಬಿಎಸ್ಎಫ್ ಡಿಜಿ ಆಗಿ ಹೆಚ್ಚುವರಿ ಜವಾಬ್ದಾರಿ ನಿರ್ವಹಿಸುತ್ತಿದ್ದ ಎಸ್.ಎಸ್. ದೇಸ್ವಾಲ್ ಅವರ ಸ್ಥಾನವನ್ನ ಅಸ್ತಾನ ತುಂಬಲಿದ್ದಾರೆ.

ABOUT THE AUTHOR

...view details