ನವದೆಹಲಿ:ಕೋವಿಡ್ ಸೋಂಕಿಗೆ ತುತ್ತಾಗಿ ನಿನ್ನೆಯಷ್ಟೇ ವಿಧಿವಶರಾದ ರಾಜ್ಯಸಭಾ ನೂತನ ಸದಸ್ಯ ಅಶೋಕ್ ಗಸ್ತಿ ಅವರಿಗೆ ರಾಜ್ಯಸಭೆಯಲ್ಲಿಂದು ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಅಶೋಕ್ ಗಸ್ತಿ ನಿಧನಕ್ಕೆ ರಾಜ್ಯಸಭೆಯಲ್ಲಿ ಶ್ರದ್ಧಾಂಜಲಿ - ರಾಜ್ಯಸಭಾ ಸಭಾಪತಿ ಎಂ.ವೆಂಕಯ್ಯನಾಯ್ಡು
ರಾಜ್ಯಸಭಾ ನೂತನ ಸದಸ್ಯ ಅಶೋಕ್ ಗಸ್ತಿ ಅವರ ನಿಧನಕ್ಕೆ ಇಂದು ರಾಜ್ಯಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಭಾಪತಿ ಎಂ.ವೆಂಕಯ್ಯ ನಾಯ್ಡು ಗಸ್ತಿ ಅವರ ಸಾವಿನ ಸುದ್ದಿಯನ್ನು ಕಲಾಪಕ್ಕೆ ತಿಳಿಸಿದರು. ಬಳಿಕ ಮೃತರ ಗೌರವಾರ್ಥವಾಗಿ 2 ನಿಮಿಷ ಮೌನಾಚರಣೆ ಮಾಡಲಾಯಿತು.
ಅಶೋಕ್ ಗಸ್ತಿ ಅವರ ನಿಧನದ ಸುದ್ದಿಯನ್ನು ಕಲಾಪಕ್ಕೆ ತಿಳಿಸಿದ ಸಭಾಪತಿ ಎಂ.ವೆಂಕಯ್ಯ ನಾಯ್ಡು, ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ಹಾಲಿ ಸದಸ್ಯರಾದ ಅಶೋಕ್ ಗಸ್ತಿ ಅವರ ನಿಧನದ ಸುದ್ದಿ ಅತ್ಯಂತ ದುಃಖಕರವಾಗಿದೆ ಎಂದು ಹೇಳಿದರು. ಮೃತರ ಗೌರವಾರ್ಥವಾಗಿ 2 ನಿಮಿಷ ಸದನದಲ್ಲಿ ಮೌನಾಚರಣೆ ಮಾಡಲಾಯಿತು. ಇದೇ ವೇಳೆ ಸಭಾಪತಿಗಳು ಗಸ್ತಿ ಅವರ ಸಾಧನೆಯನ್ನು ಕಲಾಪಕ್ಕೆ ತಿಳಿಸಿದರು.
ನಿನ್ನೆಯಷ್ಟೇ ಉಪ ರಾಷ್ಟ್ರಪತಿಯೂ ಆಗಿರುವ ಎಂ.ವೆಂಕಯ್ಯ ನಾಯ್ಡು ಸಿಎಂ ಯಡಿಯೂರಪ್ಪ ಅವರಿಗೆ ದೂರವಾಣಿ ಕರೆ ಮಾಡಿ ಅಶೋಕ ಗಸ್ತಿ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದರು. ಉಪ ರಾಷ್ಟ್ರಪತಿಯವರ ಕಾರ್ಯದರ್ಶಿ ಗಸ್ತಿ ಅವರ ನಿಧನ ಸುದ್ಧಿಯನ್ನು ಟ್ವೀಟ್ ಮೂಲಕ ತಿಳಿಸಿದ್ದರು.