ಕರ್ನಾಟಕ

karnataka

ETV Bharat / bharat

ರಾಜ್ಯಸಭಾ ಸದಸ್ಯ ಅಶೋಕ್‌ ಗಸ್ತಿ ನಿಧನ... ಪ್ರಧಾನಿ ಮೋದಿ ಸೇರಿ ಬಿಜೆಪಿ ನಾಯಕರಿಂದ ಸಂತಾಪ - ರಾಜ್ಯಸಭಾ ಸದಸ್ಯ ಅಶೋಕ್‌ ಗಸ್ತಿ

ಕಳೆದ ನಾಲ್ಕು ತಿಂಗಳ ಹಿಂದೆ ಬಿಜೆಪಿಯಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ಅಶೋಕ್​ ಗಸ್ತಿ(55) ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಮಣಿಪಾಲ್ ಆಸ್ಪತ್ರೆಯಲ್ಲಿ ಗಸ್ತಿ ಚಿಕಿತ್ಸೆ ಪಡೆಯುತ್ತಿದ್ದರು. ಅಶೋಕ್ ಗಸ್ತಿ ಬಹು ಅಂಗಾಂಗ ವೈಫಲ್ಯದಿಂದ ಕೂಡ ಬಳಲುತ್ತಿದ್ದರು.

Rajya Sabha MP Ashok Gasti
Rajya Sabha MP Ashok Gasti

By

Published : Sep 18, 2020, 12:46 AM IST

Updated : Sep 18, 2020, 2:08 AM IST

ಬೆಂಗಳೂರು:ಕಳೆದ ಕೆಲ ತಿಂಗಳ ಹಿಂದೆ ಬಿಜೆಪಿಯಿಂದ ರಾಜ್ಯಸಭೆಯಗೆ ಆಯ್ಕೆಯಾಗಿದ್ದ ಅಶೋಕ್​ ಗಸ್ತಿ(55) ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದು, ಪ್ರಧಾನಿ ಮೋದಿ ಸೇರಿದಂತೆ ವಿವಿಧ ಬಿಜೆಪಿ ಮುಖಂಡರು ಸಂತಾಪ ಸೂಚಿಸಿದ್ದಾರೆ. ಸೆಪ್ಟೆಂಬರ್ 2ರಂದು ಗಸ್ತಿ ಅವರಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿತ್ತು. ಬಳಿಕ ಅವರು ನಗರದ ಮಣಿಪಾಲ್​ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದರು.

ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ಕರ್ನಾಟಕದಲ್ಲಿ ಬಿಜೆಪಿ ಪಕ್ಷವನ್ನು ಬಲಪಡಿಸಲು ಶ್ರಮಿಸಿದ ಸಮರ್ಪಿತ ಕಾರ್ಯಕರ್ತ. ಬಳ್ಳಾರಿ ಜಿಲ್ಲೆಯವರಾದ ಅಶೋಕ್ ಗಸ್ತಿ ಸವಿತಾ ಸಮಾಜಕ್ಕೆ ಸೇರಿದ್ದವರು. ಆರ್​ಎಸ್ಎಸ್‍ನ ಶಿಸ್ತಿನ ಸಿಪಾಯಿ ಎಂದು ಹೆಸರುಗಳಿಸಿದ್ದ ಇವರು, ಕಳೆದ ನಾಲ್ಕು ತಿಂಗಳ ಹಿಂದೆ ರಾಜ್ಯಸಭೆಗೆ ಆಯ್ಕೆಯಾಗಿದ್ದರು.

ಪ್ರಧಾನಿ ಮೋದಿ ಸಂತಾಪ

ಸಮಾಜದ ಬಡ ಅಂಚಿನಲ್ಲಿರುವ ವರ್ಗಗಳನ್ನು ಸಬಲೀಕರಣಗೊಳಿಸುವ ಬಗ್ಗೆ ಅವರು ಉತ್ಸುಕರಾಗಿದ್ದರು. ಅವರು ತೀರಿಕೊಂಡಿದ್ದು ದುರದೃಷ್ಟಕರವಾಗಿದೆ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಓಂ ಶಾಂತಿ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಅಮಿತ್​ ಶಾ ಟ್ವೀಟ್​

ರಾಜ್ಯಸಭಾ ಸಂಸದ ಮತ್ತು ಕರ್ನಾಟಕದ ಬಿಜೆಪಿ ಹಿರಿಯ ಮುಖಂಡ ಅಶೋಕ್ ಗಸ್ತಿ ಅವರ ಅಕಾಲಿಕ ನಿಧನದ ಸುದ್ದಿಯಿಂದ ಆಘಾತ ಮತ್ತು ನೋವುಂಟಾಗಿದೆ. ಹಲವು ವರ್ಷಗಳಿಂದ ಅವರು ಸಂಘಟನೆ ಮತ್ತು ದೇಶಕ್ಕೆ ಅನೇಕ ರೀತಿಯಲ್ಲಿ ಸೇವೆ ಸಲ್ಲಿಸಿದ್ದಾರೆಂದು ಗಸ್ತಿ ಅವರ ಕೊಡುಗೆಯನ್ನು ಸ್ಮರಿಸುತ್ತಾ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂತಾಪ ಸೂಚಿಸಿದ್ದಾರೆ.

ಬಿ.ಎಲ್ ಸಂತೋಷ್ ಟ್ವೀಟ್​

ನಮ್ಮ ಪ್ರಾರ್ಥನೆಯು ಫಲ ನೀಡಲಿಲ್ಲ. ಮೊದಲ ಸುದ್ದಿ ಸುಳ್ಳು ಎಂದು ನಂಬಿದ್ದರೂ, ಅಂತಿಮವಾಗಿ ಅದೃಷ್ಟವು ಸುಳ್ಳು ಎಂದು ತಿಳಿದಿದ್ದೇ ಕೊನೆಗೆ ನಗುವನ್ನು ಬೀರಿತು. ರಾಜ್ಯಸಭೆಗೆಗೆ ಕೆಲ ತಿಂಗಳ ಹಿಂದೆಯಷ್ಟೇ ಹೊಸದಾಗಿ ಆಯ್ಕೆಯಾಗಿದ್ದ 55 ವರ್ಷದ ಆರ್​ಎಸ್​ಎಸ್ ಸದಸ್ಯ ಅಶೋಕ್ ಗಸ್ತಿ ಕೋವಿಡ್-19 ಸೋಂಕಿನಿಂದಾಗಿ ನಿಧನರಾದರು.ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಟ್ವೀಟ್​ ಮಾಡಿದ್ದಾರೆ.

ನಳಿನ್​ ಕುಮಾರ್ ಕಟೀಲ್​ ಟ್ವೀಟ್​

ನಮ್ಮ ಪಾಲಿಗೆ ಇದು ಬಹುದೊಡ್ಡ ಆಘಾತ. ಇತ್ತೀಚೆಗಷ್ಟೇ ರಾಜ್ಯಸಭಾ ಸದಸ್ಯರಾಗಿದ್ದ ಅಶೋಕ್ ಗಸ್ತಿ ಅವರು ದೈವಾಧೀನರಾಗಿದ್ದಾರೆ. ಅವರ ಆತ್ಮಕ್ಕೆ ಸದ್ಗತಿ ಸಿಗಲಿ ಮತ್ತು ಅವರ ಕುಟುಂಬಕ್ಕೆ ಈ ದು:ಖ ಭರಿಸುವ ಶಕ್ತಿ ಭಗವಂತ ನೀಡಲಿ. ಈ ಸಂಕಷ್ಟದ ಘಳಿಗೆಯಲ್ಲಿ ಅವರ ಕುಟುಂಬದೊಂದಿಗೆ ನಮ್ಮ ಪಕ್ಷ ಇರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದಾರೆ.

Last Updated : Sep 18, 2020, 2:08 AM IST

ABOUT THE AUTHOR

...view details