ಕರ್ನಾಟಕ

karnataka

ETV Bharat / bharat

ರಾಜ್ಯಸಭೆಯೂ ಗಣತಂತ್ರ ಚೈತನ್ಯದ ಮರುಪೂರಣ!! - ರಾಜ್ಯಸಭೆ ಸುದ್ದಿ

ನವೆಂಬರ್ 18, 2019 ರಂದು, ಸಂಸತ್ತಿನ ಮೇಲ್ಮನೆಯ ಈ ವರ್ಷದ ಚಳಿಗಾಲದ ಅಧಿವೇಶನವನ್ನು ನಡೆಸಲಾಯಿತು. ಈ ವರ್ಷದ ಅಧಿವೇಶನ ವಿಶೇಷವಾದುದು ಯಾಕೆಂದರೆ ಭಾರತ ಗಣರಾಜ್ಯದ 7 ದಶಕಗಳಲ್ಲಿ 1952 ರಲ್ಲಿ ಮೇಲ್ಮನೆಯ ಮೊದಲ ಸಭೆಯ ನಂತರ ಈ ಬಾರಿ ನಡೆದ ರಾಜ್ಯಸಭೆಯ ಅಧಿವೇಶನವು 250 ನೇ ಬಾರಿಯದು. ವಿಶ್ವದ ಒಟ್ಟು ಜನಸಂಖ್ಯೆಯ 1/7 ನೇ ಭಾಗವನ್ನು ಹಂಚಿಕೊಳ್ಳುವ ಭಾರತದ ನಾಗರಿಕರನ್ನು ಪ್ರತಿನಿಧಿಸುವ ರಾಜ್ಯಸಭೆಯು ತೆಗೆದುಕೊಳ್ಳುವ ನಿರ್ಧಾರಗಳು ಹಾಗೂ ನೀಡುವ ಮಾರ್ಗದರ್ಶನದಿಂದ ಸುಗಮ ಆಡಳಿತ ನಡೆಸಲಾಗುತ್ತದೆ. ಹೀಗಾಗಿ ದೇಶದ ಜನ ಜೀವನದ ಸುಗಮ ಕಾರ್ಯಕ್ಕಾಗಿ ವಿವಿಧ ಕಾನೂನು ಮಾರ್ಗಸೂಚಿಗಳನ್ನು ರೂಪಿಸುವಲ್ಲಿ ಮೇಲ್ಮನೆ ಪ್ರಮುಖ ಪಾತ್ರ ವಹಿಸುತ್ತದೆ.

ಸಾಂದರ್ಭಿಕ ಚಿತ್ರ

By

Published : Nov 19, 2019, 11:55 PM IST

ಮೇಲ್ಮನೆಯಲ್ಲಿ ತೆಗೆದುಕೊಳ್ಳುವ ಯಾವುದೇ ನಿರ್ಧಾರವು ಇಡೀ ರಾಷ್ಟ್ರದ ಸಾಮಾಜಿಕ, ಆರ್ಥಿಕ ಸ್ಥಿತಿಯನ್ನು ವಿನ್ಯಾಸಗೊಳಿಸುತ್ತದೆ ಎನ್ನುವ ಕಾರಣಕ್ಕಾಗಿ ಸಂವಿಧಾನದ ವಿನ್ಯಾಸಕರು ಮತ್ತು ಅದರ ಪ್ರಕ್ರಿಯೆಗಳು ಎರಡೂ ಮನೆಗಳ ಅಂದರೆ ಕೆಳ ಮತ್ತು ಮೇಲ್ಮನೆಗಳು ಅಂದರೆ ಲೋಕಸಭೆ ಮತ್ತು ರಾಜ್ಯಸಭೆಯ ಕಾರ್ಯಾಚರಣೆಯನ್ನು ಸ್ಪಷ್ಟವಾಗಿ ಗುರುತಿಸಿವೆ . ಲೋಕಸಭೆಯ ಸದಸ್ಯರು ಪ್ರತಿ 5 ವರ್ಷಗಳಿಗೊಮ್ಮೆ ದೇಶದ ನಾಗರಿಕರಿಂದ ಚುನಾಯಿತರಾಗುತ್ತಾರೆ ಮತ್ತು ಅವಧಿ ಮುಗಿಯುವ ಮೊದಲೇ ಸಂಸತ್ ವಿಸರ್ಜನೆಯಾಗುವ ಸಾಧ್ಯತೆಯಿರುತ್ತದೆ. ಆದರೆ ಒಮ್ಮೆ ಚುನಾಯಿತರಾದ / ನಾಮನಿರ್ದೇಶನಗೊಂಡ ರಾಜ್ಯಸಭಾ ಸದಸ್ಯರು ತಾವು ಸೇರಿದ ರಾಜ್ಯವನ್ನು ಅವರ ನಾಮನಿರ್ದೇಶನದ ಸಂಪೂರ್ಣ ಅಧಿಕಾರಾವಧಿಗೆ ಪ್ರತಿನಿಧಿತ್ವವು ಯಾವುದೇ ಅಡಚಣೆಯಿಲ್ಲದೆ ಮುಂದುವರೆಯುತ್ತದೆ. ಡಾ.ಬಿ.ಆರ್.ಅಂಬೇಡ್ಕರ್ ಅವರಂತಹ ಮಹಾನ್ ದೂರದೃಷ್ಟಿಯುಳ್ಳ ವ್ಯಕ್ತಿಗಳು ಅಷ್ಟೇ ದೂರದೃಷ್ಟಿಯುಳ್ಳ ಸಂವಿಧಾನವನ್ನು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವಕ್ಕಾಗಿ ವಿನ್ಯಾಸಗೊಳಿಸಿದ್ದಾರೆ.

ನಾವು ರಾಜ್ಯಸಭೆಯ ಇತಿಹಾಸದಲ್ಲಿ ಪ್ರವೇಶಿಸಿದ ಮೇ, 1952 ರಂದು ರಾಜ್ಯಸಭೆಯ ಮೊದಲ ಸಭೆಯ ಸಂದರ್ಭದಲ್ಲಿ ಆಗಿನ ಭಾರತದ ರಾಷ್ಟ್ರಪತಿಯವರಾದ ಡಾ.ಸರ್ವೇಪಲ್ಲಿ ರಾಧಕೃಷ್ಣನ್, “ಸಂಸತ್ತು ಕೇವಲ ಮಸೂದೆಗಳನ್ನು ಮತ್ತು ಕಾನೂನುಗಳನ್ನು ಅಂಗೀಕರಿಸುವ ಸ್ಥಳವಲ್ಲ ಅದು ದೇಶದ ಎಲ್ಲಾ ನಾಯಕರು ಮತ್ತು ಪ್ರತಿನಿಧಿಗಳಿಗೆ ಚರ್ಚಿಸಲು ಮತ್ತು ಸೌಹಾರ್ದಯುತ ಸನ್ನಿವೇಶಕ್ಕೆ ಬರಲು ಒಂದು ಸಾಮಾನ್ಯ ಮತ್ತು ಕಾರ್ಯಸಾಧ್ಯವಾದ ನೆಲವಾಗಿದೆ ” ಎಂದು ಹೇಳಿದ್ದರು. ಭಾರತದ ನಾಗರಿಕರಲ್ಲಿ ಶಾಂತಿಯುತ ಮತ್ತು ಸಾಮರಸ್ಯದ ಸಹಬಾಳ್ವೆ ಇರಬೇಕಾದರೆ, ರಾಜ್ಯಸಭೆಯ ಎಲ್ಲ ಸದಸ್ಯರು ಆಡಳಿತ ಪಕ್ಷವನ್ನು ಅಥವಾ ಪ್ರತಿಪಕ್ಷವನ್ನು ಪ್ರತಿನಿಧಿಸುತ್ತಾರೆಯೇ ಎಂಬುದನ್ನು ಲೆಕ್ಕಿಸದೆ ಜೊತೆಯಲ್ಲಿ ಬೆರೆತು ಕೆಲಸ ಮಾಡುವುದು ಸೂಕ್ತ ಎಂದು ಅವರು ಹೇಳಿದ್ದಾರೆ. ಸಂಸತ್ತಿನ ಮೇಲ್ ಮತ್ತು ಕೆಳಮನೆಗಳು ರಾಷ್ಟ್ರವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಆದಾಗ್ಯೂ ರಾಜ್ಯಸಭೆಯು ಅದನ್ನು ಸ್ಥಾಪಿಸಿದ ಕೇವಲ 2 ವರ್ಷಗಳಲ್ಲಿ ಎಂದರೆ 1954 ರಲ್ಲಿ ಮತ್ತು 1973 ರಲ್ಲಿಯೂ ನಾಮಕರಣದ ಬಗ್ಗೆ ವಿಮರ್ಶೆ ಮತ್ತು ಪ್ರತಿಕೂಲ ಟೀಕೆಗಳನ್ನು ಎದುರಿಸಿತು. 1971, 1972, 1975 ರ ವರ್ಷಗಳಲ್ಲಿಯೂ ಮತ್ತು 1981 ರಲ್ಲಿ ನಾಮಕರಣದ ಮೇಲಿನ ಆಕ್ಷೇಪಣೆಯನ್ನು ಪ್ರಸ್ತಾಪಿಸಲಾಗಿದೆ ಆದರೆ ಲೋಕಸಭೆಯು ಪ್ರತಿ ಸಂದರ್ಭದಲ್ಲೂ ಮುಂದೂಡಲ್ಪಟ್ಟಿದೆ.

ಕೆಲವೊಮ್ಮೆ ರಾಜ್ಯಸಭಾ ಮತ್ತು ಲೋಕಸಭೆಯು ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರೂ, ಎರಡೂ ಮನೆಗಳು ಸಾಮರಸ್ಯವನ್ನು ಕಾಪಾಡಿಕೊಂಡಿವೆ ಮತ್ತು ರಾಷ್ಟ್ರೀಯ ಅಭಿವೃದ್ಧಿಯನ್ನು ಸಮಾನಾಂತರವಾಗಿ ಹೆಗಲ ಮೇಲೆ ಹೊತ್ತುಕೊಳ್ಳುವ ಉದ್ದೇಶದಿಂದ ಒಗ್ಗೂಡಿವೆ. ಹೀಗಾಗಿ ರಾಷ್ಟ್ರದ ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿಹಿಡಿದಿವೆ. ಲೋಕಸಭೆಯಲ್ಲಿ ಒಮ್ಮೆ ಅಂಗೀಕರಿಸಲ್ಪಟ್ಟ ಮಸೂದೆ / ಕಾನೂನಿನ ಯಾವುದೇ ನಿರ್ಧಾರವು ಪ್ರಮಾಣಾನುಗುಣವಾಗಿ ಪ್ರಾತಿನಿಧ್ಯದೊಂದಿಗೆ ಬರುವ ರಾಜ್ಯಸಭಾ ಸದಸ್ಯರೊಂದಿಗೆ ಸಾಮರಸ್ಯದಿಂದ ಲೋಕಸಭೆ ಚರ್ಚಿಸಬೇಕಾಗುತ್ತದೆ ಮತ್ತು ಇದು ದೇಶದ ಹಿತಾಸಕ್ತಿಯನ್ನು ಸಮಯ ಮತ್ತು ಸನ್ನಿವೇಶಕ್ಕೆ ಅನುಗುಣವಾಗಿ ಕಾಪಾಡುತ್ತದೆ.

ಭಾರತದ ಮಾಜಿ ಪ್ರಧಾನಿ ಪಂ. ಜವಾಹರಲಾಲ್ ನೆಹರು ಸಂಸತ್ತಿನ ಪ್ರತಿಷ್ಠೆ ಮತ್ತು ಗೌರವವನ್ನು ಎತ್ತಿಹಿಡಿಯದಿದ್ದಲ್ಲಿ ಅದರ ಅಂತಿಮ ಫಲಿತಾಂಶವು ರಾಷ್ಟ್ರದ ಅತ್ಯುನ್ನತ ಪ್ರಜಾಪ್ರಭುತ್ವದ ಅವನತಿಯಾಗಿರುತ್ತದೆ ಎಂದು ಒಮ್ಮೆ ಅಭಿಪ್ರಾಯಪಟ್ಟಿದ್ದರು. ಅದಾಗ್ಯೂ ಈ ದಿನಗಳಲ್ಲಿ ಸದನಗಳನ್ನು ನಡೆಸುವ ಮಾರ್ಗದಲ್ಲಿ ಹೋಗಿ ಪರಿಶೀಲಿಸಿದರೆ ಸದನಗಳಿಗಾಗಿ ಸ್ಥಾಪಿಸಲಾದ ಎಲ್ಲಾ ತತ್ವಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಗಾಳಿಯಲ್ಲಿ ತೂರಲಾಗಿದೆ ಎಂಬುದು ಬಹಳ ಸ್ಪಷ್ಟವಾಗಿ ಕಾಣುತ್ತದೆ!! ಇದನ್ನು ಪ್ರತಿಬಿಂಬಿಸುವ ಹಲವು ನಿದರ್ಶನಗಳಿವೆ ಒಮ್ಮೆ ಒಂದು ಅಧಿವೇಶನದಲ್ಲಿ ಚರ್ಚೆಗಳು ಕೈಗೆಟುಕದೆ ಸದಸ್ಯರ ಸಭೆಯು ಸೃಷ್ಟಿಸಿದ ಗದ್ದಲವನ್ನು ನಿಯಂತ್ರಿಸಲಾಗದೆ ಆಗಿನ ಸ್ಪೀಕರ್ ಶಂಕರ್ ದಯಾಳ್ ಶರ್ಮಾ ಅವರು ಕಣ್ಣೀರು ಸುರಿಸಿದ್ದರು.

ಭಾರತದ ಮೊದಲ ಪ್ರಜೆ ಸ್ಥಾನದಿಂದ ಇತ್ತೀಚೆಗೆ ಕೆಳಗಿಳಿದ ಪ್ರಣಬ್ ಮುಖರ್ಜಿ ಕಳೆದ ವರ್ಷ ಹೇಳಿದ್ದು, 1969ರಲ್ಲಿ ಸಂಸತ್ತಿಗೆ ಕಾಲಿಟ್ಟಾಗಿನಿಂದ ಪಿ.ವಿ ನರಸಿಂಹ ರಾವ್ ಅವರಿಂದ ಜ್ಞಾನ ಮತ್ತು ಬುದ್ಧಿವಂತಿಕೆ, ಅಟಲ್ ಬಿಹಾರಿ ವಾಜಪೇಯಿವರ ಭಾಷಣ ಕೌಶಲ, ಮಧು ಲಿಮಾಯೆ ಮತ್ತು ಡಾ. ನಾಥ ಪೈ ಅವರ ಪೀಲುಮೋಡಿ ಮತ್ತು ಇಂದ್ರಜಿತ್ ಗುಪ್ತಾ ಅವರ ಹಾಸ್ಯ ಪ್ರವೃತ್ತಿ ಮತ್ತು ಗಮನಾರ್ಹ ಪ್ರತಿಕ್ರಿಯೆಗಳು ಹೀಗೆ ಪ್ರತಿಯೊಬ್ಬ ಸಂಸದೀಯ ಸದಸ್ಯರಿಂದಲೂ ಕಲಿಯುವ ಅದೃಷ್ಟ ನನಗೆ ದೊರೆತಿದೆ. ನೆನಯಬೇಕಾದವರು ಇನ್ನೂ ಸಾಕಷ್ಟು ಜನರಿದ್ದಾರೆ. ಇಂದು ಅಂತಹ ಮಹಾನ್ ಮತ್ತು ಪೂಜ್ಯ ವ್ಯಕ್ತಿತ್ವಗಳನ್ನು ಹೊಂದಿದ್ದ ಸಂಸತ್ತು ಈ ದಿನಗಳಲ್ಲಿ ನಡೆಯುತ್ತಿರುವ ಅಷ್ಟು ಯೋಗ್ಯವಲ್ಲದ ಚರ್ಚೆಗಳಿಂದಾಗಿ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದೆ. ಹೆಚ್ಚಿನ ಚರ್ಚೆಗಳನ್ನು ರಾಜಕೀಯ ಉದ್ದೇಶಗಳೊಂದಿಗೆ ಆಳವಾಗಿ ನಡೆಸಲಾಗುತ್ತಿದೆ, ಅದು ಯಾವಾಗಲೂ ಸಕಾರಾತ್ಮಕ ಫಲಿತಾಂಶವನ್ನು ನೀಡುವುದಿಲ್ಲ. ಸಂಸತ್ತನ್ನು ಚರ್ಚೆ, ಸಭ್ಯತೆ ಮತ್ತು ನಿರ್ಧಾರವನ್ನು ಸೂಚಿಸುವ 3 ಸೂತ್ರದ ಮೇಲೆ ಕಾರ್ಯನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ. ಇದೀಗ ನಾಲ್ಕನೇ ಸೂತ್ರವಾಗಿ ತೊಂದರೆಗೊಳಿಸುವುದು ಸೇರಿಕೊಂಡಿದೆ. ಇದು ಈ ದಿನಗಳಲ್ಲಿ ಎರಡೂ ಮನೆಗಳ ನಡವಳಿಕೆಯಲ್ಲಿ ಭಾರಿ ಅಸಮತೋಲನವನ್ನು ಸೃಷ್ಟಿಸುತ್ತಿದೆ.

ಇತ್ತೀಚಿನ ಅಧಿವೇಶನದಲ್ಲಿ ಮೇಲ್ಮನೆಯನ್ನು 35 ದಿನಗಳವರೆಗೆ ನಡೆಸಿ ಅಧಿವೇಶನಗಳಲ್ಲಿ 32 ಮಸೂದೆಗಳನ್ನು ಅಂಗೀಕರಿಸಲಾಗಿದೆ. ಕಳೆದ ಆಗಸ್ಟ್ ನಲ್ಲಿ ವೆಂಕಯ್ಯ ನಾಯ್ಡುವವರು ನೀಡಿದ ಹೇಳಿಕೆಯ ಪ್ರಕಾರ ಇದು ಕಳೆದ 17 ವರ್ಷಗಳಲ್ಲಿ ನಡೆದಿರುವ 52 ಅಧಿವೇಶನಗಳಲ್ಲಿ ಸದನದ ಅತ್ಯುತ್ತಮ ಪ್ರದರ್ಶನವಾಗಿದೆ. ರಾಜ್ಯಸಭಾ ಅಧ್ಯಕ್ಷ ಕೆ.ಆರ್.ನಾರಾಯಣನ್ ಅವರು ನೀಡಿರುವ ಹೇಳಿಕೆಯನ್ನು ಬಹಳ ಗೌರವದಿಂದ ಇಲ್ಲಿ ಗಮನಿಸಬೇಕಿದೆ, ರಾಜ್ಯಸಭೆಯು ಅತ್ಯುನ್ನತ ಮಟ್ಟದ ನಾಗರಿಕರ ಪ್ರಾತಿನಿಧ್ಯವಾಗಿದೆ ಮತ್ತು ಒಂದು ರೀತಿಯ ಸ್ವಯಂ-ಶಿಸ್ತು ಮುಖ್ಯ ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ಹೇಳಲಾಗುತ್ತದೆ ಇದು ಸದಸ್ಯರ ನಡುವೆ ಪಸರಿಸಿದೆ ಮತ್ತು ತಪ್ಪದೆ ಅನುಸರಿಸಲಾಗುತ್ತಿದೆ.

ಭಾರತೀಯ ಸಂವಿಧಾನದ 75 (3) ನೇ ವಿಧಿಯ ಪ್ರಕಾರ, ಸರ್ಕಾರವು ಕೇವಲ ಲೋಕಸಭೆಗೆ ಮಾತ್ರ ಜವಾಬ್ದಾರನಾಗಿರುತ್ತದೆ ಮತ್ತು ಉತ್ತರಿಸಬೇಕೇ ಹೊರತು ರಾಜ್ಯಸಭೆಯ ವಿಚಾರಣೆಗಳಿಗಲ್ಲ. ರಾಜ್ಯಸಭೆಗೆ ಸರ್ಕಾರವು ಹೊಣೆಗಾರನಾಗಿರುವ ನಿದರ್ಶನಗಳಲ್ಲಿದ್ದರೂ, ಅದರ ಚಟುವಟಿಕೆ ಸರ್ಕಾರದ ಅಸ್ತಿತ್ವದ ಮೇಲೆ ಪ್ರಭಾವ ಬೀರಬೇಕಾಗಿಲ್ಲ. ರಾಜ್ಯಸಭೆಯಲ್ಲಿ ಬಹುಮತವಿಲ್ಲದ ಸಂದರ್ಭಗಳಲ್ಲಿ, ಆಡಳಿತ ಪಕ್ಷಕ್ಕೆ, ಉಭಯ ಸದನಗಳ ನಡುವೆ ಸಾಂವಿಧಾನಿಕ ಸಂಬಂಧ ಇರುತ್ತದೆ. ಇದು ಕೆಲವೊಮ್ಮೆ ಎರಡೂ ಮನೆಗಳ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಬಹುದು. ಅಂತಹ ಸಮಯಗಳಲ್ಲಿ ಸದನದಲ್ಲಿ ಪರಿಚಯಿಸಲಾದ ಯಾವುದೇ ಮಸೂದೆಗಳ ಮೇಲೆ ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲ, ನಂತರ ಮನೆಯಲ್ಲಿ ಅಡ್ಡಿ ಉಂಟಾಗುತ್ತದೆ, ಇದು ರಾಷ್ಟ್ರದ ದೃಷ್ಟಿಯಲ್ಲಿ ನಕಾರಾತ್ಮಕ ಬೆಳವಣಿಗೆಗೆ ಕಾರಣವಾಗುತ್ತದೆ. ಯಾವುದೇ ಪಕ್ಷವು ಸಾರ್ವಜನಿಕರಲ್ಲಿ ಗೌರವ ಮತ್ತು ನಂಬಿಕೆಯ ಸರಿಯಾದ ಪಾಲನ್ನು ಪಡೆಯಬೇಕಾದರೆ, ಅದರ ಸದಸ್ಯರು ಸಂಸತ್ತಿನ ಒಳಗೆ ಮತ್ತು ಹೊರಗೆ ತಮ್ಮ ಶಿಷ್ಟಾಚಾರವನ್ನು ಎಲ್ಲಾ ಸಮಯದಲ್ಲೂ ಕಾಪಾಡಿಕೊಳ್ಳುವುದು ಅತ್ಯಗತ್ಯ. ಪಕ್ಷವು ಸಾಧ್ಯವಾದಷ್ಟು ಕಠಿಣ ರೀತಿಯಲ್ಲಿ ಇದನ್ನು ಸಾಧ್ಯವಾಗುವಂತೆ ನೋಡಿಕೊಳ್ಳಬೇಕು. ಇದನ್ನು ಉಪ ರಾಷ್ಟ್ರಪತಿ ಅನೇಕ ಸಂದರ್ಭಗಳಲ್ಲಿ ಪುನರುಚ್ಚರಿಸಿದ್ದಾರೆ.

ಸದನದ ಸದಸ್ಯರು ಅನುಸರಿಸಬೇಕಾದ ನೀತಿ ಸಂಹಿತೆಯನ್ನು ರಾಜ್ಯಸಭೆಯವರು ಮುಂದಿಡುತ್ತಾರೆ. ಚಾಲ್ತಿಯಲ್ಲಿರುವ ನಂಬಿಕೆಯ ಅಂಶದಿಂದ ಸರ್ಕಾರದ ಅಸ್ತಿತ್ವವನ್ನು ಲೋಕಸಭೆಯ ಮೂಲಕ ಅಳೆಯಲಾಗಿದ್ದರೂ, ರಾಷ್ಟ್ರವನ್ನು ಪ್ರಧಾನ ಮಂತ್ರಿಗಳಾಗಿ ಮುನ್ನಡೆಸಿದ ಇಂದಿರಾ, ದೇವೇಗೌಡ, ಗುಜ್ರಾಲ್ ಮತ್ತು ಮನಮೋಹನ್ ಸಿಂಗ್ ಅವರಂತಹ ಹಲವಾರು ದೂರದೃಷ್ಟಿಯ ನಾಯಕರನ್ನು ರಾಜ್ಯಸಭೆಯಿಂದಲೇ ಆಯ್ಕೆ ಮಾಡಲಾಗಿದೆ.

2005 ರಲ್ಲಿ ಮನೆಯ ಕೆಲವು ಸದಸ್ಯರು ಭ್ರಷ್ಟಾಚಾರದ ಆರೋಪವನ್ನು ಹೊತ್ತಿದ್ದರು ಇದರಿಂದಾಗಿ ಒಂದು ಪ್ರಶ್ನೆಯನ್ನು ಹುಟ್ಟುತ್ತದೆ ಇದರಿಂದ ಸದನದ ಕಾರ್ಯಚಟುವಟಿಕೆಗಳು ಅಡ್ಡಿಗೊಳಗಾಗುತ್ತವೆ ಮತ್ತು ಆ ಮೂಲಕ ಪ್ರಸ್ತಾವಿತ ಮಸೂದೆ / ಕಾನೂನು ಅಪಾಯಕ್ಕೊಳಗಾಗುತ್ತವೆ. ಅದಾಗ್ಯೂ, ಎರಡೂ ಸದನಗಳು ಅಂತಹ ವಿಷಯದ ಮೇಲೆ ಬಹಳ ಸೌಹಾರ್ದಯುತವಾಗಿ ನಡೆದುಕೊಂಡಿವೆ ಮತ್ತು ಅಂತಹ ಸದಸ್ಯರನ್ನು ಸದನದ ನಡಾವಳಿಯಿಂದ ಯಶಸ್ವಿಯಾಗಿ ಅಮಾನತುಗೊಳಿಸಲಾಗಿದೆ. ಅಲ್ಲದೆ, ಅಂತಹ ಸಂದರ್ಭಗಳಲ್ಲಿ, ಬ್ರಿಟನ್‌ನಂತಹ ದೇಶಗಳಲ್ಲಿ ಅನುಸರಿಸುತ್ತಿರುವಂತೆಯೇ ಅದೇ ರೀತಿಯ ಕ್ರಿಯಾ ತಂತ್ರವನ್ನು ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ, ಇದರಿಂದ ವ್ಯವಸ್ಥೆಯನ್ನು ಬಲಪಡಿಸಬಹುದು.

ಪಕ್ಷಗಳು ಮೇಲ್ಮನೆಗೆ ರಾಷ್ಟ್ರೀಯ ಅಭಿವೃದ್ಧಿಯನ್ನು ಬಯಸುವವರ ಜೊತೆಗೆ ಮನೆಯಲ್ಲಿ ಶಾಂತಿ ಮತ್ತು ಸೌಹಾರ್ದತೆಯ ದೀಪಧಾರಿಗಳಾಗಿ ಕಾರ್ಯನಿರ್ವಹಿಸಬಲ್ಲ ಪ್ರತಿನಿಧಿಗಳನ್ನು ಮಾತ್ರ ನಾಮನಿರ್ದೇಶನ ಮಾಡುವುದು ಅಷ್ಟೇ ಮುಖ್ಯ. ಅಲ್ಲದೆ, ವ್ಯಕ್ತಿಗಳು ತಮ್ಮ ಸ್ವಯಂ-ಶಿಸ್ತಿನ ಮೇಲೆ ಕೆಲಸ ಮಾಡುವುದು ಮುಖ್ಯ ಮತ್ತು ಆ ಮೂಲಕ ರಾಜ್ಯಸಭೆಯು ಗೌರವಕ್ಕೆ ಅರ್ಹವಾಗಿದೆ ಎಂಬ ಮಾತನ್ನು ಎತ್ತಿಹಿಡಿಯುತ್ತದೆ !!

ಪ್ರಧಾನಿ ಮೋದಿ ಅವರು ಮನೆಯ 250 ನೇ ಅಧಿವೇಶನದಲ್ಲಿ ಭಾಗವಹಿಸಿ ಹೇಳಿದಂತೆ -"ರಾಜ್ಯಸಭೆ ಶಾಶ್ವತವಾದುದು!, ಸಂಸದರು ಮಾತ್ರ ಒಳಗೆ ಬಂದವರು ಶಾಶ್ವತವಾಗಿ ಹೊರಗೆ ಹೋಗುತ್ತಾರೆ!"

ABOUT THE AUTHOR

...view details