ನವದೆಹಲಿ: ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ನಾರಾಯಣ್ ಸಿಂಗ್ ಅವರು ತಮ್ಮ ಏಕದಿನ ಉಪವಾಸ ಸತ್ಯಗ್ರಹವನ್ನು ಕೈಬಿಟ್ಟಿದ್ದಾರೆ. ಸೆಪ್ಟೆಂಬರ್ 20ರಂದು ಕೃಷಿ ಮಸೂದೆಗಳ ಅಂಗೀಕಾರದ ಸಂದರ್ಭದಲ್ಲಿ ಪ್ರತಿಪಕ್ಷಗಳ ಸಂಸದರು ಸದನದಲ್ಲಿ ತೋರಿದ ಅಶಿಸ್ತಿನ ವರ್ತನೆ ವಿರುದ್ಧ ಈ ಸತ್ಯಗ್ರಹ ನಡೆಸುತ್ತಿದ್ದರು.
ಒಂದು ದಿನದ ಉಪವಾಸ ನಿರಶನ ಅಂತ್ಯಗೊಳಿಸಿದ ರಾಜ್ಯಸಭೆ ಉಪಸಭಾಪತಿ
ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ನಾರಾಯಣ್ ಸಿಂಗ್ ಅವರು ತಮ್ಮ ಏಕದಿನ ಉಪವಾಸ ಸತ್ಯಗ್ರಹವನ್ನು ಕೈಬಿಟ್ಟಿದ್ದಾರೆ.
ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ನಾರಾಯಣ್ ಸಿಂಗ್
ಕೃಷಿ ಮಸೂದೆಗಳ ಅಂಗೀಕಾರದ ಸಮಯದಲ್ಲಿ ಪ್ರತಿಪಕ್ಷಗಳ ಸಂಸದರ ವರ್ತನೆಯಿಂದ ಬೇಸತ್ತ ರಾಜ್ಯಸಭಾ ಉಪಸಭಾಧ್ಯಕ್ಷ ಹರಿವಂಶ್ ನಾರಾಯಣ್ ಸಿಂಗ್ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರಿಗೆ ಭಾವನಾತ್ಮಕ ಪತ್ರ ಬರೆದಿದ್ದರು.
ರಾಜ್ಯಸಭೆಯ ಸಭಾಪತಿಗೆ ಬರೆದ ಪತ್ರದಲ್ಲಿ ಪ್ರಜಾಪ್ರಭುತ್ವದ ಹೆಸರಿನಲ್ಲಿ ಸಂಸದರು ಅಶಿಸ್ತು ತೋರಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದ ಅವರು, ಒಂದು ದಿನದ ಉಪವಾಸ ಸತ್ಯಗ್ರಹ ಮಾಡುವುದಾಗಿ ಹೇಳಿದ್ದರು.