ಕರ್ನಾಟಕ

karnataka

ETV Bharat / bharat

ರಾಜ್ಯಸಭೆಯಲ್ಲಿ ಗದ್ದಲ, ಕೋಲಾಹಲ: ನಾಳೆಗೆ ಮುಂದೂಡಿಕೆಯಾದ ಕಲಾಪ - ವಿಪಕ್ಷಗಳಿಂದ ಸಭಾತ್ಯಾಗ

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆ ವಿಚಾರವಾಗಿ ಸದನದಲ್ಲಿ ಕೋಲಾಹಲ ಉಂಟಾಗಿದ್ದು, ಇದೇ ಕಾರಣಕ್ಕಾಗಿ ಲೋಕಸಭೆ ಕಲಾಪ ನಾಳೆಗೆ ಮುಂದೂಡಿಕೆಯಾಗಿದೆ.

Rajya Sabha
Rajya Sabha

By

Published : Feb 3, 2021, 4:37 PM IST

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನೂತನ ಕೃಷಿ ಕಾಯ್ದೆಗಳು, ರೈತರ ಪ್ರತಿಭಟನೆ ಹಾಗೂ ಜಮ್ಮು - ಕಾಶ್ಮೀರ ವಿಚಾರ ಇಂದಿನ ರಾಜ್ಯಸಭೆ ಕಲಾಪದಲ್ಲಿ ಪ್ರತಿಧ್ವನಿಸಿದ್ದು, ವಿಪಕ್ಷ ನಾಯಕರಿಂದ ಗದ್ದಲ, ಕೋಲಾಹಲ ಉಂಟಾಗಿರುವ ಕಾರಣ ಮೇಲ್ಮನೆ ಕಲಾಪವನ್ನು ನಾಳೆಗೆ ಮುಂದೂಡಿಕೆಯಾಗಿದೆ.

ಕೃಷಿ ಕಾಯ್ದೆ ಮೇಲೆ ಚರ್ಚೆ ನಡೆಸಲು ಪಟ್ಟು ಹಿಡಿದಿರುವ ಕಾರಣ ವಿಪಕ್ಷಗಳು ಸಭಾತ್ಯಾಗ ಮಾಡಿದವು. ಸದನದಲ್ಲಿ ಕೆಲ ಸದಸ್ಯರು ಮೊಬೈಲ್ ಬಳಕೆ ಮಾಡುತ್ತಿರುವ ವಿಚಾರ ಕಂಡು ಬಂದಿರುವ ಕಾರಣ ಸಭಾಧ್ಯಕ್ಷರು ಅವರ ವಿರುದ್ಧ ಚಾಟಿ ಬೀಸಿದರು.

ರೈತರ ಪ್ರತಿಭಟನೆ, ಕೇಂದ್ರ ಸರ್ಕಾರದ ಬಜೆಟ್​ ಸೇರಿ ಅನೇಕ ವಿಷಯಗಳು ಸದನದಲ್ಲಿ ಪ್ರತಿಧ್ವನಿಸಿದವು. ಈ ವೇಳೆ, ಕೃಷಿ ಮಸೂದೆ ವಿಷಯವನ್ನಿಟ್ಟುಕೊಂಡು ಗದ್ದಲ ಉಂಟಾದ ಕಾರಣ ಕಲಾಪ ನಾಳೆಗೆ ಮುಂದೂಡಿಕೆಯಾಗಿದೆ.

ABOUT THE AUTHOR

...view details