ಕರ್ನಾಟಕ

karnataka

ETV Bharat / bharat

ಇಂದು 'ಆತ್ಮ ನಿರ್ಭರ ಭಾರತ್ ಸಪ್ತಾಹ' ಪ್ರಾರಂಭ: ರಾಜನಾಥ್​ ಸಿಂಗ್​​​​​​ರಿಂದ​ ಚಾಲನೆ - ಆತ್ಮ ನಿರ್ಭರ ಭಾರತ್ ಸಪ್ತಾಹಕ್ಕೆ ರಾಜನಾಥ್​ ಸಿಂಗ್​ ಚಾಲನೆ

'ಆತ್ಮ ನಿರ್ಭರ ಭಾರತ್ ಸಪ್ತಾಹ'ಕ್ಕೆ ಇಂದು ಚಾಲನೆ ಸಿಗಲಿದೆ. 101 ವಸ್ತುಗಳ ಮೇಲೆ ಆಮದು ನಿರ್ಬಂಧ ವಿಧಿಸುವುದಾಗಿ ರಕ್ಷಣಾ ಇಲಾಖೆ ನಿನ್ನೆಯಷ್ಟೇ ಘೋಷಣೆ ಮಾಡಿತ್ತು.

Rajnath Singh to launch 'Atma Nirbhar Bharat Saptah' today
ರಾಜನಾಥ್​ ಸಿಂಗ್

By

Published : Aug 10, 2020, 7:53 AM IST

ನವದೆಹಲಿ:ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು 'ಆತ್ಮ ನಿರ್ಭರ ಭಾರತ್ ಸಪ್ತಾಹ'ಕ್ಕೆ ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ 3.30 ಕ್ಕೆ ಈ ಕಾರ್ಯಕ್ರಮ ನಡೆಯಲಿದೆ ಎಂದು ರಕ್ಷಣಾ ಇಲಾಖೆ ಸಚಿವಾಲಯ ತಿಳಿಸಿದೆ.

ರಕ್ಷಣಾ ಸಚಿವಾಲಯ ದೇಶೀಯ ಉತ್ಪಾದನೆ ಹೆಚ್ಚಿಸಲು, 101 ವಸ್ತುಗಳ ಮೇಲೆ ಆಮದು ನಿರ್ಬಂಧ ವಿಧಿಸುವುದಾಗಿ ರಕ್ಷಣಾ ಇಲಾಖೆ ನಿನ್ನೆಯಷ್ಟೇ ಘೋಷಣೆ ಮಾಡಿತ್ತು. ಈ ಮೂಲಕ ಆತ್ಮ ನಿರ್ಭರ ಯೋಜನೆಯ ಸಕ್ಸಸ್​ಗೆ ನಿರ್ಧರಿಸಲಾಗಿತ್ತು.

ದೇಶೀಯ ಮತ್ತು ವಿದೇಶಿ ಖರೀದಿಗಳ ನಡುವೆ ಬಜೆಟ್​​ಅನ್ನು ರಕ್ಷಣಾ ಸಚಿವಾಲಯ ವಿಭಜಿಸಿದೆ ಎಂದು ಸಚಿವರು ಸರಣಿ ಟ್ವೀಟ್‌ಗಳ ಮೂಲಕ ಮನನ ಮಾಡಿಸಿದ್ದಾರೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶೀಯ ಬಂಡವಾಳ ಸಂಗ್ರಹಕ್ಕಾಗಿ ಸುಮಾರು 52,000 ಕೋಟಿ ರೂ.ಗಳ ವಿನಿಯೋಗದೊಂದಿಗೆ ಪ್ರತ್ಯೇಕ ಬಜೆಟ್ ರೂಪಿಸಲಾಗಿದೆ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.

"ರಕ್ಷಣಾ ಸಚಿವಾಲಯವು ಈಗ ಆತ್ಮ ನಿರ್ಭರ ಭಾರತ್ ಯೋಜನೆ ಅಂಗವಾಗಿ ಸೂಕ್ತ ಉಪಕ್ರಮ ಕೈಗೊಳ್ಳಲು ಸಿದ್ಧವಾಗಿದೆ. ರಕ್ಷಣಾ ಉತ್ಪಾದನೆಯ ದೇಶೀಕರಣವನ್ನು ಹೆಚ್ಚಿಸಲು ನಿಗದಿತ ಸಮಯವನ್ನು ಮೀರಿ 101 ವಸ್ತುಗಳ ಮೇಲೆ ಆಮದು ನಿರ್ಬಂಧವನ್ನು ಹೇರಲಾಗುವುದು ಎಂದು ರಾಜನಾಥ್ ಸಿಂಗ್​ ಟ್ವೀಟ್ ಮಾಡಿದ್ದಾರೆ.

"ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದಂತೆ ಐದು ಸ್ತಂಭಗಳಾದ ಆರ್ಥಿಕತೆ, ಮೂಲಸೌಕರ್ಯ, ವ್ಯವಸ್ಥೆ, ಜನಸಂಖ್ಯೆ ನಿಯಂತ್ರಣ ಮತ್ತು ಬೇಡಿಕೆಯ ಆಧಾರದ ಮೇಲೆ ಸ್ವಾವಲಂಬಿ ಭಾರತ ನಿರ್ಮಾಣವೇ ಪ್ರಧಾನಿ ಕನಸು. ಈ ಹಿನ್ನೆಲೆಯಲ್ಲಿ ಸ್ವಾವಲಂಬಿ ಭಾರತಕ್ಕಾಗಿ ಪ್ರಧಾನಿ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದಾರೆ ಎಂದು ಮತ್ತೊಂದು ಟ್ವೀಟ್​​​ನಲ್ಲಿ ರಕ್ಷಣಾ ಸಚಿವರು ಹೇಳಿದ್ದಾರೆ.

ABOUT THE AUTHOR

...view details