ಲೇಹ್:ನೂತನ ಕೇಂದ್ರಾಡಳಿತ ಪ್ರದೇಶವಾದ ಲಡಾಖ್ಗೆ ಇಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ ನೀಡಿದ್ದು, 26ನೇ 'ಲಡಾಖಿ ಕಿಸಾನ್ ಜವಾನ್ ವಿಜ್ಞಾನ್ ಮೇಳ'ದ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ್ದಾರೆ.
ಭಾರತ ನೆರೆಯ ರಾಷ್ಟ್ರ ಪಾಕಿಸ್ತಾನದೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಬಯಸುತ್ತದೆ. ಆದರೆ, ಪಾಕಿಸ್ತಾನ ಉಗ್ರರರನ್ನು ಭಾರತಕ್ಕೆ ರಫ್ತು ಮಾಡುವ ಕೆಟ್ಟ ಚಾಳಿಯನ್ನು ನಿಲ್ಲಿಸಬೇಕು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಖಡಕ್ಕಾಗಿ ವಾರ್ನ್ ಮಾಡಿದ್ದಾರೆ.