ಕರ್ನಾಟಕ

karnataka

ETV Bharat / bharat

ರಫೇಲ್​ ಕುರಿತಂತೆ ಫ್ರಾನ್ಸ್​ ರಕ್ಷಣಾ ಸಚಿವರೊಂದಿಗೆ ರಾಜನಾಥ್​ ಸಿಂಗ್ ಮಾತುಕತೆ.. - ರಕ್ಷಣಾ ಸಚಿವ ರಾಜನಾಥ್​ ಸಿಂಗ್ ಟ್ವೀಟ್​

ಕೋವಿಡ್​-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿರುವ ಭಾರತ ಮತ್ತು ಫ್ರಾನ್ಸ್‌ನ ಸಶಸ್ತ್ರ ಪಡೆಗಳ ಪ್ರಯತ್ನಕ್ಕೆ ಉಭಯ ನಾಯಕರಿಂದ ಶ್ಲಾಘನೆ.

Rajnath Singh
ರಾಜನಾಥ್​ ಸಿಂಗ್

By

Published : Jun 2, 2020, 5:48 PM IST

ನವದೆಹಲಿ:ಫ್ರಾನ್ಸ್​ನ ಸಶಸ್ತ್ರ ಪಡೆಗಳ ಸಚಿವ ಎಂ ಎಸ್ ಫ್ಲಾರೆನ್ಸ್ ಪಾರ್ಲಿಯೊಂದಿಗೆ ಇಂದು ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ದೂರವಾಣಿ ಸಂಭಾಷಣೆ ನಡೆಸಿದರು.

ಈ ವೇಳೆ ಕೊರೊನಾ ವೈರಸ್​ ಸೃಷ್ಟಿಸಿರುವ ಪರಿಸ್ಥಿತಿ, ಪ್ರಾದೇಶಿಕ ಭದ್ರತೆ ಸೇರಿ ಉಭಯ ರಾಷ್ಟ್ರಗಳ ಪರಸ್ಪರ ಕಾಳಜಿಯ ವಿಷಯಗಳ ಬಗ್ಗೆ ಚರ್ಚೆ ನಡೆದಿದೆ. ಅಲ್ಲದೇ ಭಾರತ ಮತ್ತು ಫ್ರಾನ್ಸ್ ನಡುವಿನ ದ್ವಿಪಕ್ಷೀಯ ರಕ್ಷಣಾ ಸಹಕಾರವನ್ನು ಬಲಪಡಿಸಲು ಒಪ್ಪಿದ್ದೇವೆ ಎಂದು ಸಿಂಗ್​ ತಮ್ಮ ಟ್ವಿಟರ್​ ಖಾತೆ ಮೂಲಕ ತಿಳಿಸಿದ್ದಾರೆ.

ಕೋವಿಡ್​-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿರುವ ಭಾರತ ಮತ್ತು ಫ್ರಾನ್ಸ್‌ನ ಸಶಸ್ತ್ರ ಪಡೆಗಳ ಪ್ರಯತ್ನವನ್ನೂ ನಾವು ಪರಸ್ಪರ ಶ್ಲಾಘಿಸಿದ್ದೇವೆ. ಈ ಸಾಂಕ್ರಾಮಿಕ ರೋಗದಿಂದ ಎದುರಾದ ಸವಾಲುಗಳ ನಡುವೆಯೂ ರಫೇಲ್​ ಯುದ್ಧ ವಿಮಾನವನ್ನು ಸಕಾಲಿಕವಾಗಿ ತಲುಪಿಸುವುದನ್ನು ಖಚಿತಪಡಿಸಿಕೊಳ್ಳಲು ಫ್ರಾನ್ಸ್ ತನ್ನ ಬದ್ಧತೆಯನ್ನು ದೃಢಪಡಿಸಿದೆ ಎಂದು ಸಿಂಗ್​ ತಿಳಿಸಿದ್ದಾರೆ.

ABOUT THE AUTHOR

...view details