ಕರ್ನಾಟಕ

karnataka

ETV Bharat / bharat

ರಾಜನಾಥ್ ಸಿಂಗ್​​ರಿಂದ ಬಿಆರ್​ಒ ನಿರ್ಮಿಸಿದ 44 ಬ್ರಿಡ್ಜ್​ಗಳ ಲೋಕಾರ್ಪಣೆ

ಗಡಿ ರಸ್ತೆಗಳ ಸಂಸ್ಥೆ (ಬಿಆರ್‌ಒ) ನಿರ್ಮಿಸಿದ 44 ಸೇತುವೆಗಳನ್ನು ವಿಡಿಯೋ ಕಾನ್ಫರೆನ್ಸ್​ ಮೂಲಕ ಲೋಕಾರ್ಪಣೆಗೊಳಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಅರುಣಾಚಲ ಪ್ರದೇಶದ ತವಾಂಗ್‌ಗೆ ಸಂಪರ್ಕಿಸುವ 'ನೆಚಿಫು ಸುರಂಗ'ಕ್ಕೆ ಕೂಡ ಇದೇ ವೇಳೆ ಶಿಲಾನ್ಯಾಸ ನೆರವೇರಿಸಿದರು.

Rajnath Singh
ರಾಜನಾಥ್ ಸಿಂಗ್​​

By

Published : Oct 12, 2020, 1:47 PM IST

ನವದೆಹಲಿ: ಐದು ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಗಡಿ ರಸ್ತೆಗಳ ಸಂಸ್ಥೆ (ಬಿಆರ್‌ಒ) ನಿರ್ಮಿಸಿರುವ 44 ಸೇತುವೆಗಳನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ವಿಡಿಯೋ ಕಾನ್ಫರೆನ್ಸ್​ ಮೂಲಕ ಲೋಕಾರ್ಪಣೆಗೊಳಿಸಿದ್ದಾರೆ.

ಲಡಾಖ್​, ಅರುಣಾಚಲ ಪ್ರದೇಶ, ಸಿಕ್ಕಿಂ, ಹಿಮಾಚಲ ಪ್ರದೇಶ, ಉತ್ತರಾಖಂಡ್​​, ಪಂಜಾಬ್​ ಹಾಗೂ ಜಮ್ಮು-ಕಾಶ್ಮೀರದ ಗಡಿ ಪ್ರದೇಶಗಳಲ್ಲಿ ನಿರ್ಮಾಣ ಮಾಡಲಾಗಿರುವ ಈ ಬ್ರಿಡ್ಜ್​ಗಳನ್ನು ಇಡೀ ರಾಷ್ಟ್ರಕ್ಕೆ ಅರ್ಪಿಸಿರುವುದಾಗಿ ರಾಜನಾಥ್ ಸಿಂಗ್ ಹೇಳಿದ್ದಾರೆ.

ಅರುಣಾಚಲ ಪ್ರದೇಶದ ತವಾಂಗ್‌ಗೆ ಸಂಪರ್ಕಿಸುವ 'ನೆಚಿಫು ಸುರಂಗ'ಕ್ಕೆ ಕೂಡ ಇದೇ ವೇಳೆ ಶಿಲಾನ್ಯಾಸ ನೆರವೇರಿಸಿದರು. ಈ ಸಂದರ್ಭದಲ್ಲಿ ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್, ಸೇನಾ ಮುಖ್ಯಸ್ಥ ಎಂ.ಎಂ.ನರವನೆ ಮತ್ತು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಉಪಸ್ಥಿತರಿದ್ದರು.

ಅಕ್ಟೋಬರ್​ 3ರಂದು ಲೋಕಾರ್ಪಣೆಗೊಂಡ ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗವಾದ 'ಅಟಲ್​ ಟನಲ್' ಕುರಿತು ಮಾತನಾಡಿದ್ದ ರಾಜನಾಥ್ ಸಿಂಗ್, ಇದನ್ನು ಭಾರತದ ಗಡಿಗಳನ್ನು ರಕ್ಷಿಸುವ ಸಶಸ್ತ್ರ ಪಡೆಗಳಿಗೆ ಮತ್ತು ದೂರದ ಭೂ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಸಮರ್ಪಿಸಲಾಗಿದೆ ಎಂದು ಹೇಳಿದ್ದರು.

ABOUT THE AUTHOR

...view details