ನವದೆಹಲಿ:ಹೈದಾರಾಬಾದ್ ಪಶುವೈದ್ಯೆ ಅತ್ಯಾಚಾರ ಹಾಗೂ ಬರ್ಬರ ಹತ್ಯೆಯ ವಿಚಾರ ರಾಷ್ಟ್ರಾದ್ಯಂತ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಸದ್ಯ ಇದೇ ವಿಷಯ ಸಂಸತ್ತಿನ ಕೆಳಮನೆ ಲೋಕಸಭೆಯಲ್ಲೂ ಪ್ರತಿಧ್ವನಿಸಿದೆ.
ಮಹಿಳಾ ರಕ್ಷಣೆ ನಿಟ್ಟಿನಲ್ಲಿ ಯಾವುದೇ ಕಾನೂನು ರಚನೆಗೆ ನಾವು ಸಿದ್ಧ: ರಾಜನಾಥ್ ಸಿಂಗ್ - ಹೈದಾರಾಬಾದ್ ಪಶುವೈದ್ಯೆಯ ಅತ್ಯಾಚಾರ ಖಂಡಿಸಿದ ರಾಜನಾಥ್ ಸಿಂಗ್
ಪಶುವೈದ್ಯೆಯ ಅತ್ಯಾಚಾರ ಹಾಗೂ ಹತ್ಯೆಯನ್ನು ಲೋಕಸಭೆಯಲ್ಲಿ ಖಂಡಿಸಿರುವ ರಕ್ಷಣಾ ಸಚಿವ, ಈ ಘಟನೆಯಿಂದ ಇಡೀ ದೇಶವೇ ತಲೆತಗ್ಗಿಸುವಂತಾಗಿದೆ. ಆರೋಪಿಗಳಿಗೆ ಅತ್ಯಂತ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ರಾಜನಾಥ್ ಸಿಂಗ್
ಹೈದರಾಬಾದ್ ಪಶುವೈದ್ಯೆ ಅತ್ಯಾಚಾರ ಘಟನೆಯನ್ನು ಖಂಡಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಪಶುವೈದ್ಯೆಯ ಅತ್ಯಾಚಾರ ಹಾಗೂ ಹತ್ಯೆಯನ್ನು ಲೋಕಸಭೆಯಲ್ಲಿ ಖಂಡಿಸಿರುವ ರಕ್ಷಣಾ ಸಚಿವ, ಈ ಘಟನೆಯಿಂದ ಇಡೀ ದೇಶವೇ ತಲೆತಗ್ಗಿಸುವಂತಾಗಿದೆ. ಆರೋಪಿಗಳಿಗೆ ಅತ್ಯಂತ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಇದೇ ವಿಚಾರವಾಗಿ ಮಾತು ಮುಂದುವರೆಸಿದ ರಕ್ಷಣಾ ಸಚಿವರು, ಇಂತಹ ಘಟನೆಗಳು ಮರುಕಳಿಸದಂತೆ ಮಾಡಲು ಸಂಸತ್ತು ಸಮ್ಮತಿಸಿದರೆ ಕಾನೂನು ಜಾರಿಗೊಳಿಸಲು ನಾವು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.