ಕರ್ನಾಟಕ

karnataka

ETV Bharat / bharat

ತೇಜಸ್ ಯುದ್ಧವಿಮಾನದಲ್ಲಿ ಹಾರಿದ ಮೊದಲ ರಕ್ಷಣಾ ಸಚಿವ ಸಿಂಗ್​... ಹೆಗ್ಗಳಿಕೆಗೆ ಪಾತ್ರರಾದ ರಾಜನಾಥ್​ - Tejas combat Aircraft

"ನನ್ನ ಪಾಲಿಗೆ ಇದು ಒಂದು ಹೊಸ ಅನುಭವ. ಈ ಅನುಭವ ತುಂಬಾ ಅದ್ಭುತವಾಗಿತ್ತು. ನಮ್ಮ ವಾಯು ಪಡೆ ಹಾಗೂ ಎಲ್ಲಾ ಸೇನಾಪಡೆಯ ಚಾಣಾಕ್ಷತನವನ್ನು ನಾನು ಮೆಚ್ಚಿದ್ದೇನೆ. ತೇಜಸ್ ನಾಲ್ಕನೇ ತಲೆಮಾರಿನ ಯುದ್ಧ ವಿಮಾನ ಮತ್ತು ಇದು ಸಂಪೂರ್ಣ ಸ್ವದೇಶಿ ನಿರ್ಮಿತ. ಮೊದಲ ಬಾರಿಗೆ ನಾನು ಇದರಲ್ಲಿ ಕುಳಿತು ಹಾರಿದ್ದೇನೆ. ವಿಮಾನವು ತುಂಬಾ ಆರಾಮದಾಯಕವಾಗಿತ್ತು. ನಾನು ಈ ಪ್ರಯಾಣವನ್ನು ಆನಂದಿಸಿದ್ದೇನೆ" ಎಂದು ರಕ್ಷಣಾ ಸಚಿವ ವರಾಜನಾಥ್​ ಸಿಂಗ್ ಸಂತಸ ವ್ಯಕ್ತಪಡಿಸಿದ್ದಾರೆ.

ತೇಜಸ್ ಯುದ್ಧವಿಮಾನದಲ್ಲಿ ಹಾರಿದ ದೇಶದ​ ಮೊದಲ ರಕ್ಷಣಾ ಸಚಿವ

By

Published : Sep 19, 2019, 6:04 PM IST

ಬೆಂಗಳೂರು/ನವದೆಹಲಿ:ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಇಂದು ಸ್ವದೇಶಿ ನಿರ್ಮಿತ ತೇಜಸ್​ ಯುದ್ಧ ವಿಮಾನದಲ್ಲಿ ಹಾರುವ ಮೂಲಕ, ಈ ವಿಮಾನದಲ್ಲಿ ಹಾರಿದ ದೇಶದ ಮೊದಲ ರಕ್ಷಣಾ ಸಚಿವ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಉದ್ಯಾನ ನಗರಿಗೆ ಬಂದಿರುವ ರಕ್ಷಣಾ ಸಚಿವರು ಇಂದು ನಗರದ ಹೆಚ್​ಎಎಲ್​ ವಿಮಾನ ನಿಲ್ದಾಣದಿಂದ ಸ್ವದೇಶಿ ನಿರ್ಮಾಣದ, ಹೆಮ್ಮೆಯ ತೇಜಸ್​ ಯುದ್ಧ ವಿಮಾನದಲ್ಲಿ ಕುಳಿತು ಹಾರಿದರು. ಇವರಿಗೆ ಏರ್ ವೈಸ್ ಮಾರ್ಷಲ್ ಹಾಗೂ ನ್ಯಾಷನಲ್ ಫ್ಲೈಟ್ ಟೆಸ್ಟ್ ಸೆಂಟರ್, ಎಡಿಎ (ಏರೋನಾಟಿಕಲ್ ಡೆವಲಪ್ಮೆಂಟ್ ಏಜೆನ್ಸಿ) ಇದರ ಯೋಜನಾ ನಿರ್ದೇಶಕರಾದ ಎನ್​ ಥಿವಾರಿ ಸಚಿವರಿಗೆ ಸಾಥ್​ ನೀಡಿದ್ರು.

ವಿಶೇಷ ಸೂಟ್ ಧರಿಸಿದ್ದ ಸಚಿವರು ವಿಮಾನದಲ್ಲಿ ಪೈಲಟ್‌ನ ಹಿಂಬದಿ ಸೀಟ್​ನಲ್ಲಿ ಕುಳಿತು, ಸ್ವತಃ ತಾವೇ ಸಿಟ್​ ಬೆಲ್ಟ್​ ಹಾಕಿಕೊಂಡರು.

ತೇಜಸ್ ಯುದ್ಧ ವಿಮಾನದಲ್ಲಿ ಹಾರಿದ ದೇಶದ​ ಮೊದಲ ರಕ್ಷಣಾ ಸಚಿವ ರಾಜನಾಥ್​ ಸಿಂಗ್​

ಸ್ವದೇಶಿ ನಿರ್ಮಿತ ತೇಜಸ್ ಯುದ್ಧ ವಿಮಾನದ ಅಭಿವೃದ್ಧಿಯಲ್ಲಿ ಭಾಗಿಯಾಗಿರುವ ಅಧಿಕಾರಿಗಳ ಮನೋಸ್ಥೈರ್ಯವನ್ನು ಹೆಚ್ಚಿಸುವ ಸಲುವಾಗಿ ಸಚಿವರು ವಿಮಾನದಲ್ಲಿ ವಿಹರಿಸುತ್ತಿದ್ದಾರೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿವೋರ್ವ ತಿಳಿಸಿದ್ದಾರೆ.

ಯುದ್ಧ ವಿಮಾನದಲ್ಲಿ ಹಾರಿದ ಬಳಿಕ ತಮ್ಮ ಅನುಭವ ಹಂಚಿಕೊಂಡ ರಕ್ಷಣಾ ಸಚಿವರು, ಇದು ನನ್ನ ಪಾಲಿಗೆ ಒಂದು ಹೊಸ ಅನುಭವ, ಮತ್ತು ಇದು ಅದ್ಭುತವಾಗಿತ್ತು. ನಮ್ಮ ವಾಯು ಪಡೆ ಹಾಗೂ ಎಲ್ಲಾ ಸೇನಾಪಡೆಯ ಚಾಣಾಕ್ಷತನವನ್ನು ನಾನು ಮೆಚ್ಚಿದ್ದೇನೆ. ತೇಜಸ್ ನಾಲ್ಕನೇ ತಲೆಮಾರಿನ ಯುದ್ಧ ವಿಮಾನ ಮತ್ತು ಇದು ಸಂಪೂರ್ಣ ಸ್ವದೇಶಿ ನಿರ್ಮಿತ. ಮೊದಲ ಬಾರಿಗೆ ನಾನು ಇದರಲ್ಲಿ ಕುಳಿತು ಹಾರಿದ್ದೇನೆ. ವಿಮಾನವು ತುಂಬಾ ಆರಾಮದಾಯಕವಾಗಿತ್ತು. ನಾನು ಈ ಪ್ರಯಾಣವನ್ನು ಆನಂದಿಸಿದೆ ಎಂದು ಹೇಳಿದರು.

ಇನ್ನು ತಮ್ಮ ಅಧಿಕೃತ ಟ್ವಿಟ್ಟರ್​​ ಖಾತೆಯಲ್ಲೂ, ರಕ್ಷಣಾ ಸಚಿವರು ಯುದ್ಧ ವಿಮಾನದಲ್ಲಿನ ತಮ್ಮ ಹಾರಾಟದ ಅನುಭವವನ್ನು ಹಂಚಿಕೊಂಡಿದ್ದಾರೆ.

ABOUT THE AUTHOR

...view details