ನವದೆಹಲಿ: ಸಿಎಸ್‌ಡಿ ಕ್ಯಾಂಟೀನ್ ಸಹ ಇನ್ನು ಮುಂದೆ ಆನ್ಲೈನ್ ಆಗಲಿದೆ. ಸಿಎಸ್‌ಡಿ ಕ್ಯಾಂಟೀನ್ನಲ್ಲಿ ಮಾರಾಟ ಮಾಡಲಾಗುವ ದುಬಾರಿ ವಸ್ತುಗಳಾದ ವಾಶಿಂಗ್ ಮಶೀನ್, ಮೈಕ್ರೊವೇವ್ ಓವನ್, ರೆಫ್ರಿಜರೇಟರ್, ಏರ್ ಕಂಡಿಷನರ್, ಟಿವಿ ಮತ್ತು ಲ್ಯಾಪ್ ಟಾಪ್ ಮುಂತಾದ ವಸ್ತುಗಳ ಆನ್ಲೈನ್ ಮಾರಾಟಕ್ಕಾಗಿ ಆರಂಭಿಸಲಾಗಿರುವ ಹೊಸ ವೆಬ್ ಪೋರ್ಟಲ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಚಾಲನೆ ನೀಡಿದರು.
ಸುಮಾರು 45 ಲಕ್ಷ ಸಿಎಸ್‌ಡಿ (ಕ್ಯಾಂಟೀನ್ ಸ್ಟೋರ್ಸ್ ಡಿಪಾರ್ಟ್ಮೆಂಟ್) ಫಲಾನುಭವಿಗಳು ಇನ್ನು ಮುಂದೆ ಕೆಲ ದುಬಾರಿ ವಸ್ತುಗಳನ್ನು ಆನ್ಲೈನ್ ಮೂಲಕವೇ ಆರ್ಡರ್ ಮಾಡಿ ಖರೀದಿಸಬಹುದಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.