ಕರ್ನಾಟಕ

karnataka

ETV Bharat / bharat

'ನನಗೆ ದಯಾಮರಣ ನೀಡಿ'... ಪ್ರಧಾನಿಗೆ ಪತ್ರ ಬರೆದ ರಾಜೀವ್ ಗಾಂಧಿ ಹಂತಕಿ - ದಯಾಮರಣಕ್ಕೆ ಅರ್ಜಿ ಸಲ್ಲಿಸಿದ ನಳಿನಿ

ಜೈಲುವಾಸಿಯಾಗಿರುವ ನಳಿನಿ ಸದ್ಯ ಪ್ರಧಾನಿ ಮೋದಿ ಹಾಗೂ ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಮ್ರೇಶ್ವರ್​​ ಪ್ರತಾಪ್ ಸಾಹಿಗೆ ದಯಾಮರಣ ಕೋರಿ ಪತ್ರ ಬರೆದಿದ್ದಾರೆ.

Rajiv Gandhi murder convicts plead for mercy killing
ನಳಿನಿ

By

Published : Dec 2, 2019, 11:46 AM IST

ವೆಲ್ಲೂರು(ತ.ನಾಡು): ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯ ಪ್ರಮುಖ ಆರೋಪಿ ನಳಿನಿ ಹಾಗೂ ಆಕೆಯ ಪತಿ ವಿ.ಶ್ರೀಹರನ್​​​ ಅಲಿಯಾಸ್ ಮುರುಗನ್​​​ ದಯಾಮರಣ ಕೋರಿ ಪತ್ರ ಬರೆದಿದ್ದಾರೆ.

ಇದೇ ವರ್ಷದ ಆರಂಭದಲ್ಲಿ ಎಲ್ಲ ಏಳು ಆರೋಪಿಗಳನ್ನು ಬಿಡುಗಡೆ ಮಾಡಬೇಕು ಎಂದು ನಳಿನಿ ಮದ್ರಾಸ್ ಹೈಕೋರ್ಟ್​ಗೆ ಪತ್ರ ಮುಖೇನ ಮನವಿ ಮಾಡಿದ್ದಳು. 2018ರಲ್ಲಿ ತಮಿಳುನಾಡು ಸರ್ಕಾರ ತನ್ನ ಸಂಪುಟ ಸಭೆಯಲ್ಲಿ ರಾಜೀವ್ ಗಾಂಧಿ ಹಂತಕರ ಬಿಡುಗಡೆಗೆ ಶಿಫಾರಸು ಮಾಡಿತ್ತು. ಇದರ ಆಧಾರದಲ್ಲಿ ನಳಿನಿ ಬಿಡುಗಡೆ ಕೋರಿ ಮದ್ರಾಸ್ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಳು. ಆದರೆ ಈ ಅರ್ಜಿಯನ್ನು ಕೋರ್ಟ್​ ವಜಾಗೊಳಿಸಿತ್ತು.

ವೆಲ್ಲೂರಿನ ವಿಶೇಷ ಮಹಿಳಾ ಜೈಲಿನಲ್ಲಿ ಬಂಧಿಯಾಗಿರುವ ನಳಿನಿ, ರಾಜೀವ್ ಗಾಂಧಿ ಹತ್ಯೆಯ ಏಳು ಆರೋಪಿಗಳಲ್ಲಿ ಓರ್ವರು. ಜೈಲುವಾಸಿಯಾಗಿರುವ ನಳಿನಿ ಸದ್ಯ ಪ್ರಧಾನಿ ಮೋದಿ ಹಾಗೂ ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಮ್ರೇಶ್ವರ್​​ ಪ್ರತಾಪ್ ಸಾಹಿಗೆ ದಯಾಮರಣ ಕೋರಿ ಪತ್ರ ಬರೆದಿದ್ದಾಳೆ.

ಎ.ಜಿ. ಪೆರಾರಿವಾಲನ್​​, ವಿ.ಶ್ರೀಹರನ್​ ಅಲಿಯಾಸ್ ಮುರುಗನ್​​, ಟಿ. ಸುತೇಂದ್ರರಾಜ ಅಲಿಯಾಸ್ ಸಂತನ್​, ಜಯಕುಮಾರ್, ರಾಬರ್ಟ್​ ಪಯಾಸ್, ರವಿಚಂದ್ರನ್​​ ಹಾಗೂ ನಳಿನಿ ಶ್ರೀಹರನ್​​ 1991ರಿಂದ ಜೈಲುಶಿಕ್ಷೆ ಅನುಭವಿಸುತ್ತಿದ್ದಾರೆ. 21 ಮೇ 1991ರಂದು ಆತ್ಮಾಹುತಿ ಮಹಿಳಾ ಬಾಂಬರ್​​ ರಾಜೀವ್ ಗಾಂಧಿ ಅವರನ್ನ ಚೆನ್ನೈ ಸಮೀಪದ ಪೆರಂಬದೂರಿನಲ್ಲಿ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಿದ್ದ ವೇಳೆ ಸ್ಫೋಟಿಸಿಕೊಂಡು ಹತ್ಯೆ ಮಾಡಿಕೊಂಡಿದ್ದಳು.

ABOUT THE AUTHOR

...view details