ಚೆನ್ನೈ:ರಾಜೀವ್ ಗಾಂಧಿ ಹತ್ಯೆ ಘಟನೆಯಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ನಳಿನಿ ಶ್ರೀಹರನ್ ಮಗಳ ಮದುವೆ ಹಿನ್ನೆಲೆಯಲ್ಲಿ ಪೆರೋಲ್ ಮೇಲೆ ಹೊರಬಂದಿದ್ದಾರೆ.
ವೆಲ್ಲೂರು ಜೈಲಿನಲ್ಲಿರುವ ನಳಿನಿ, ರಾಜೀವ್ ಗಾಂಧಿ ಹತ್ಯೆಯ ಪ್ರಮುಖ ರೂವಾರಿ. ಮಗಳು ಮೆಗಾರ ಮದುವೆ ಹಿನ್ನೆಲೆಯಲ್ಲಿ ಒಂದು ತಿಂಗಳ ಪೆರೋಲ್ ನೀಡಲಾಗಿದ್ದು, ಇಂದು ಜೈಲಿನಿಂದ ಹೊರಬಂದಿದ್ದಾರೆ.
ನಳಿನಿ ಪುತ್ರಿ ಮೆಗಾರ ಲಂಡನ್ನಲ್ಲಿ ವೈದ್ಯಕೀಯ ಕೋರ್ಸ್ ಮಾಡುತ್ತಿದ್ದು, ಮುಂದಿನ ವಾರ ಭಾರತಕ್ಕೆ ಬರುವ ಸಾಧ್ಯತೆ ಇದೆ. ಸದ್ಯ ನಳಿನಿಗೆ ಷರತ್ತುಬದ್ಧ ಪೆರೋಲ್ ನೀಡಲಾಗಿದ್ದು, ಅದರಂತೆ ನಳಿನಿ ವೆಲ್ಲೂರು ಬಿಟ್ಟು ತೆರಳಬಾರದು ಮತ್ತು ಯಾವುದೇ ರಾಜಕೀಯ ನಾಯಕರೊಂದಿಗೆ ಮಾಧ್ಯಮದ ಜೊತೆಗೆ ಮಾತನಾಡಬಾರದು ಎಂದು ಕಟ್ಟಪ್ಪಣೆ ಹೊರಡಿಸಲಾಗಿದೆ.
ಕಳೆದ ತಿಂಗಳು ಪೆರೋಲ್ ಸಂಬಂಧ ವಿಚಾರಣೆ ನಡೆದಿದ್ದು, ನಳಿನಿ ಸ್ವತಃ ವಾದ ಮಂದಿಸಿದ್ದಳು. ವಾದ ಮಂಡನೆ ವೇಳೆ ಆರು ತಿಂಗಳ ಪೆರೋಲ್ ಅವಶ್ಯಕತೆ ಇದೆ ಎಂದಿದ್ದಳು. ಕಳೆದ ವರ್ಷದ ತನ್ನ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಒಂದು ದಿನ ಪೆರೋಲ್ ದೊರೆತಿತ್ತು.