ಚೆನ್ನೈ (ತಮಿಳುನಾಡು):ಮಾಜಿ ಪ್ರಧಾನಿ, ದಿವಂಗತ ರಾಜೀವ್ ಗಾಂಧಿ ಹತ್ಯೆಯ ಅಪರಾಧಿ ನಳಿನಿ ಶ್ರೀಹರನ್ ಸೋಮವಾರ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಆಕೆಯ ವಕೀಲರು ಸ್ಪಷ್ಟನೆ ನೀಡಿದ್ದಾರೆ.
ಸುಮಾರು 29 ವರ್ಷಗಳಿಂದ ವೆಲ್ಲೂರು ಕಾರಾಗೃಹದಲ್ಲಿರುವ ನಳಿನಿ ಶ್ರಿಹರನ್ ತನ್ನದೇ ಕೋಣೆಯಲ್ಲಿದ್ದ ಇನ್ನೊಬ್ಬ ಕೈದಿಯೊಂದಿಗೆ ಜಗಳವಾಡಿದ್ದರು. ಈ ವಿಚಾರವನ್ನು ಇತರ ಕೈದಿಗಳು ಜೈಲರ್ಗೆ ತಿಳಿಸಿದಾಗ ನಳಿನಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಆಕೆಯ ವಕೀಲರು ಹೇಳಿದ್ದಾರೆ.