ಕರ್ನಾಟಕ

karnataka

ETV Bharat / bharat

ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ನಳಿನಿ ಶ್ರೀಹರನ್​ಗೆ ಒಂದು ತಿಂಗಳ ರಿಲೀಫ್ - ಶರತ್ತುಬದ್ದ ಪೆರೋಲ್

ಲಂಡನ್​ನಲ್ಲಿ ನೆಲೆಸಿರುವ ತನ್ನ ಮಗಳ ಮದುವೆಗೆ ವ್ಯವಸ್ಥೆ ಮಾಡಲು ತೆರಳುವ ಸಲುವಾಗಿ ಮದ್ರಾಸ್ ಹೈಕೋರ್ಟ್‌ ನಳಿನಿ ಶ್ರೀಹರನ್​ಗೆ ಒಂದು ತಿಂಗಳ ಕಾಲ ಸಾಮಾನ್ಯ ಪೆರೋಲ್ ನೀಡಿದೆ.

ರಾಜೀವ್ ಗಾಂಧೀ ಹತ್ಯೆ ಅಪರಾಧಿ ನಳಿನಿಗೆ ಪೆರೋಲ್

By

Published : Jul 5, 2019, 7:07 PM IST

ಚೆನ್ನೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಅಪರಾಧಿ ಎಸ್.ನಳಿನಿ ಶ್ರೀಹರನ್​ಗೆ ಮದ್ರಾಸ್ ಹೈಕೋರ್ಟ್​ನಿಂದ​ ಒಂದು ತಿಂಗಳ ಪೆರೋಲ್ ದೊರೆತಿದೆ.

ಲಂಡನ್​ನಲ್ಲಿ ನೆಲೆಸಿರುವ ತನ್ನ ಮಗಳ ಮದುವೆಗೆ ವ್ಯವಸ್ಥೆ ಮಾಡಲು ತೆರಳುವ ಸಲುವಾಗಿ ಮದ್ರಾಸ್ ಹೈಕೋರ್ಟ್‌ನಳಿನಿ ಶ್ರೀಹರನ್​ಗೆಒಂದು ತಿಂಗಳ ಕಾಲ ಸಾಮಾನ್ಯ ಪೆರೋಲ್ ನೀಡಿದೆ.

ನ್ಯಾಯಮೂರ್ತಿಗಳಾದ ಎಂ.ಎಂ.ಸುಂದ್ರೆಶ್ ಮತ್ತು ಎಂ.ನಿರ್ಮಲ್ ಕುಮಾರ್ ನೇತೃತ್ವದ ವಿಭಾಗೀಯ ಪೀಠ ನಳಿನಿಗೆ 30 ದಿನಗಳ ಷರತ್ತುಬದ್ದ ಪೆರೋಲ್ ನೀಡಿದ್ದು, ಈ ಅವಧಿಯಲ್ಲಿ ಯಾವುದೇ ಮಾಧ್ಯಮಗಳಿಗೆ ಸಂದರ್ಶನ ನೀಡಬಾರದು, ರಾಜಕಾರಣಿಗಳ ಜೊತೆ ಸಂಪರ್ಕ ಹೊಂದಬಾರದು ಮತ್ತು ತಮಿಳುನಾಡು ಜೈಲು ಕೈಪಿಡಿಯಲ್ಲಿ ಪಟ್ಟಿ ಮಾಡಲಾದ ಇತರ ಎಲ್ಲಾ ನಿಯಮಗಳನ್ನು ಪಾಲಿಸಬೇಕು ಎಂಬ ಷರತ್ತುಗಳನ್ನು ವಿಧಿಸಿದೆ.


ಕಳೆದ 27 ವರ್ಷಗಳ ಸುಧೀರ್ಘ ಅವಧಿ ಜೈಲಿನಲ್ಲಿದ್ದ ಕಾರಣ ಅಪರಾಧಿ ನಳಿನಿಗೆ ಖರ್ಚು ವೆಚ್ಚ ಭರಿಸಲು ಯಾವುದೇ ಮಾರ್ಗವಿಲ್ಲ. ಆದ್ದರಿಂದ ಆಕೆ ಲಂಡನ್​ಗೆ ತೆರಳಿ ಮರಳಿ ಬರುವರೆಗಿನ ಭದ್ರತೆ ಸೇರಿದಂತೆ ಇತರ ಎಲ್ಲಾ ಖರ್ಚುವೆಚ್ಚಗಳನ್ನು ಭರಿಸುವಂತೆ ತಮಿಳುನಾಡು ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶನ ನೀಡಿದೆ.

ಒಂದು ವಾರದೊಳಗೆ ಜಾಮೀನುದಾರರ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು, 10 ದಿನಗಳೊಳಗೆ ಜಾಮೀನುದಾರರ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು ಎಂದು ನ್ಯಾಯಾಧೀಶರು ಆದೇಶ ನೀಡಿದ್ದು. ಈ ಎಲ್ಲಾ ಪ್ರಕ್ರಿಯೆಗಳು ಮುಗಿದ ಬಳಿಕ ಪೆರೋಲ್ ಅವಧಿ ಪ್ರಾರಂಭವಾಗಲಿದೆ.

6 ತಿಂಗಳ ಸಾಮಾನ್ಯ ಪೆರೋಲ್ ನೀಡುವಂತೆ ಅಪರಾಧಿ ನಳಿನಿ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದರು. ಅರ್ಜಿಯನ್ನು ಪರಿಶೀಲಿಸಿದ ರಾಜ್ಯ ಸಾರ್ವಜನಿಕ ಅಭಿಯೋಜಕ ಎ.ನಟರಾಜನ್ ನಿಯಮದ ಪ್ರಕಾರ ಗರಿಷ್ಠ 30 ದಿನಗಳವರೆಗೆ ರಜೆ ನೀಡಲು ಸಾಧ್ಯ ಎಂದು ತಿಳಿಸಿದ್ದರು. ಇದರನ್ವಯ ನ್ಯಾಯಾಲಯ ಇಂದು ಒಂದು ತಿಂಗಳ ರಜೆಯನ್ನು ನೀಡಿ ಆದೇಶ ಹೊರಡಿಸಿದೆ.

ABOUT THE AUTHOR

...view details