ಕರ್ನಾಟಕ

karnataka

ETV Bharat / bharat

ಗಂಡನ ಕೊಲೆ ಮಾಡಿ, ಸಿಮೆಂಟ್​​ ಕಾರ್ಖಾನೆಯಲ್ಲಿ ಬಚ್ಚಿಟ್ಟ ಪತ್ನಿ... ಕಾಣೆಯಾಗಿರುವ ನಾಟಕ! - ಹೆಂಡತಿಯಿಂದ ಗಂಡನ ಕೊಲೆ

ಗಂಡನ ಕೊಲೆ ಮಾಡಿರುವ ಪತ್ನಿ ಆತನ ಮೃತದೇಹ ಬಚ್ಚಿಟ್ಟು, ಕಾಣೆಯಾಗಿದ್ದಾನೆಂದು ನಾಟಕವಾಡಿರುವ ಘಟನೆ ನಡೆದಿದೆ.

Woman chops hubbys body
Woman chops hubbys body

By

Published : Aug 14, 2020, 5:14 AM IST

Updated : Aug 14, 2020, 6:57 AM IST

ಜೋಧಪುರ(ರಾಜಸ್ಥಾನ):ಗಂಡನ ಕೊಲೆ ಮಾಡಿ, ಸಿಮೆಂಟ್​ ಫ್ಯಾಕ್ಟರಿಯಲ್ಲಿ ಆತನ ಮೃತದೇಹ ಬಚ್ಚಿಟ್ಟಿರುವ ಮಹಿಳೆ, ಕಾಣೆಯಾಗಿದ್ದಾನೆಂದು ನಾಟಕವಾಡಿ ಕೊನೆಗೆ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.

ರಾಜಸ್ಥಾನದ ಜೋಧಪುರ್​ದಲ್ಲಿ ಈ ಘಟನೆ ನಡೆದಿದ್ದು, ಪತಿಯ ಕೊಲೆ ಮಾಡಿ, ಆತನ ದೇಹ ತುಂಡು ತುಂಡಾಗಿ ಕತ್ತರಿಸಿರುವ ಹೆಂಡತಿ ಅವುಗಳನ್ನ ಸಿಮೆಂಟ್​​ ಫ್ಯಾಕ್ಟರಿಯಲ್ಲಿ ಬಚ್ಚಿಟ್ಟಿದ್ದಾಳೆ. ಇದಾದ ಬಳಿಕ ಆತ ಕಾಣೆಯಾಗಿದ್ದಾನೆಂದು ನಾಟಕವಾಡಿದ್ದಾಳೆ.

ಕಳೆದ ಏಳು ವರ್ಷಗಳ ಹಿಂದೆ ಸಿಂಗ್​ ಮತ್ತು ಸೀಮಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದಾದ ಬಳಿಕ ಇಬ್ಬರ ನಡುವೆ ಮೇಲಿಂದ ಮೇಲೆ ಜಗಳವಾಗುತ್ತಿತ್ತು. ಜುಲೈ 11ರ ರಾತ್ರಿ ಸೀಮಾ ಹಾಗೂ ಆಕೆಯ ಸೋದರಿ, ಗಂಡನನ್ನ ಬನಾಡ್​ ಪ್ರದೇಶದಲ್ಲಿನ ಖಾಲಿ ಫ್ಲ್ಯಾಟ್​​ಗೆ ಕರೆದಿದ್ದಾರೆ. ಅಲ್ಲಿ ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ನೀಡಿದ್ದಾರೆ. ಆತ ಪ್ರಜ್ಞೆ ತಪ್ಪುತ್ತಿದ್ದಂತೆ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಇದಾದ ಬಳಿಕ ಆತನ ದೇಹ ತುಂಡು ತುಂಡಾಗಿ ಕತ್ತರಿಸಿದ್ದಾರೆ. ತದನಂತರ ಪಕ್ಕದ ಸಿಮೆಂಟ್​ ಕಾರ್ಖಾನೆಯಲ್ಲಿ ಮೃತದೇಹ ಬಚ್ಚಿಟ್ಟಿದ್ದಾರೆ.

ತಿಂಗಳ ನಂತರ ಕಾಣೆಯಾಗಿರುವ ಪ್ರಕರಣ ದಾಖಲಾಗುತ್ತಿದ್ದಂತೆ ಹೆಂಡತಿ ವಿಚಾರಣೆಗೊಳಪಡಿಸಿದಾಗ ನಿಜ ಒಪ್ಪಿಕೊಂಡಿದ್ದಾಳೆ. ಜತೆಗೆ ಮೃತದೇಹ ಬಚ್ಚಿಟ್ಟಿರುವ ಜಾಗ ತೋರಿಸಿದ್ದಾಳೆ. ಇದೀಗ ಕೃತ್ಯದಲ್ಲಿ ಭಾಗಿಯಾಗಿರುವ ಮೂವರ ಬಂಧನ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Last Updated : Aug 14, 2020, 6:57 AM IST

ABOUT THE AUTHOR

...view details