ಜೈಪುರ್: ಹೊಸ ಮೋಟಾರು ವಾಹನ ಕಾಯ್ದೆ ಜಾರಿ ಬಂದಾಗಿನಿಂದಲೂ ಪ್ರತಿದಿನ ವಾಹನ ಸವಾರರು ಸಾವಿರಾರು ರೂಪಾಯಿ ದಂಡ ಕಟ್ಟುತ್ತಿದ್ದಾರೆ. ರಸ್ತೆ ನಿಯಮ ಉಲ್ಲಂಘನೆ ಮಾಡಿದಾಕ್ಷಣ ಸಂಚಾರ ಪೊಲೀಸರು ದಂಡ ಕಟ್ಟಿಸಿಕೊಳ್ಳುತ್ತಿದ್ದಾರೆ.
ಇದೀಗ ರಾಜಸ್ಥಾನದಲ್ಲಿ ಲಾರಿ ಚಾಲಕನೋರ್ವ ರಸ್ತೆ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಬರೋಬ್ಬರಿ ರೂ.1,41,700 ರೂಪಾಯಿ ದಂಡದ ರೂಪದಲ್ಲಿ ಕಟ್ಟಿದ್ದು, ಹೊಸ ನಿಯಮ ಜಾರಿ ಆದಾಗಿನಿಂದಲೂ ಇದು ಅತಿ ಹೆಚ್ಚು ವೈಯಕ್ತಿಕ ದಂಡವಾಗಿದೆ.
ವಾಹನದಲ್ಲಿ ಓವರ್ಲೋಡ್ ಹಾಕಿಕೊಂಡು ತೆರಳುತ್ತಿದ್ದಾಗ ಟ್ರಾಫಿಕ್ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಕಾರಣ, ಇಷ್ಟೊಂದು ಹಣ ತುಂಬುವಂತೆ ಪೊಲೀಸರು ರಶೀದಿ ನೋಡಿದ್ದಾರೆ. ಅದರಂತೆ ಸೆಪ್ಟೆಂಬರ್ 9ರಂದು ಅಂದರೆ ಇಂದು ಕೋರ್ಟ್ನಲ್ಲಿ ದಂಡ ತುಂಬಿ ಪಾವತಿ ತೆಗೆದುಕೊಂಡಿದ್ದಾರೆ. ಇದಕ್ಕೂ ಮೊದಲು ಒಡಿಶಾದಲ್ಲಿ ಲಾರಿವೊಂದಕ್ಕೆ ಟ್ರಾಫಿಕ್ ಪೊಲೀಸ್ ರೂ 86,500 ದಂಡ ಕಟ್ಟುವಂತೆ ತಿಳಿಸಿದ್ದರು.
ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುತ್ತಿರುವ ಆರೋಪದ ಮೇಲೆ ಪ್ರತಿದಿನ ಸಾವಿರಾರು ರೂಪಾಯಿ ದಂಡ ಹಾಕಲಾಗುತ್ತಿದ್ದು, ಪ್ರತಿದಿನ ವಾಹನ ಸವಾರರ ಜೇಬಿಗೆ ಕತ್ತರಿ ಬೀಳುತ್ತಿದೆ.