ಕೋಟಾ: ಸ್ಕ್ರಾಪ್ ಕದ್ದಿದ್ದಕ್ಕಾಗಿ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ಬಂಧಿಸಿರುವ ಇಬ್ಬರು ಕಳ್ಳರು ಸೇರಿದಂತೆ 13 ಹೊಸ ಕೊರೊನಾ ವೈರಸ್ ಪ್ರಕರಣಗಳು ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿ ವರದಿಯಾಗಿವೆ.
ಆರ್‌ಪಿಎಫ್ ಬಂಧಿಸಿದ್ದ ಮೂವರು ಕಳ್ಳರ ಪೈಕಿ ಇಬ್ಬರಿಗೆ ಕೊರೊನಾ! - ಮೂವರು ಕಳ್ಳರ ಪೈಕಿ ಇಬ್ಬರಲ್ಲಿ ಕೊರೊನಾ ದೃಢ
ಆರ್‌ಪಿಎಫ್ ಶನಿವಾರ ಮೂವರು ಕಳ್ಳರನ್ನು ಬಂಧಿಸಿತ್ತು. ಇದರಲ್ಲಿ ಇಬ್ಬರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ.
![ಆರ್‌ಪಿಎಫ್ ಬಂಧಿಸಿದ್ದ ಮೂವರು ಕಳ್ಳರ ಪೈಕಿ ಇಬ್ಬರಿಗೆ ಕೊರೊನಾ! ಮೂವರು ಕಳ್ಳರ ಪೈಕಿ ಇಬ್ಬರಲ್ಲಿ ಕೊರೊನಾ ದೃಢ](https://etvbharatimages.akamaized.net/etvbharat/prod-images/768-512-7526993-102-7526993-1591618114192.jpg)
ಮೂವರು ಕಳ್ಳರ ಪೈಕಿ ಇಬ್ಬರಲ್ಲಿ ಕೊರೊನಾ ದೃಢ
ಆರ್‌ಪಿಎಫ್ ಶನಿವಾರ ಮೂವರು ಕಳ್ಳರನ್ನು ಬಂಧಿಸಿತ್ತು. ಇದರಲ್ಲಿ ಇಬ್ಬರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಜೈಲಿಗೆ ಕಳುಹಿಸುವ ಮೊದಲು ಆರೋಪಿಗಳಿಗೆ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇವರ ವರದಿ ಪಾಸಿಟಿವ್ ಬಂದ ಕಾರಣ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಎಲ್ಲಾ ಸಿಬ್ಬಂದಿಯ ಕೋವಿಡ್-19 ಪರೀಕ್ಷೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.