ಕರ್ನಾಟಕ

karnataka

ETV Bharat / bharat

ರಾಜಸ್ಥಾನ ರಾಜಕೀಯ.. ಹೈಕೋರ್ಟ್​​ ವಿರುದ್ಧ ಸುಪ್ರೀಂ ಮೊರೆ ಹೋಗಲು ಸ್ಪೀಕರ್ ಸಜ್ಜು.. - Pilot's petition

ಜುಲೈ 24ರಂದು ತೀರ್ಪು ಹೊರಬೀಳಲಿದೆ. ಆನಂತರ ಸಚಿನ್​ ಪೈಲಟ್​ ಹಾಗೂ ಕಾಂಗ್ರೆಸ್ ಶಾಸಕರ ಭವಿಷ್ಯ ಏನಾಗಲಿದೆ ಎಂಬುದು ಗೊತ್ತಾಗಲಿದೆ. ಕಳೆದ ಶುಕ್ರವಾರದಿಂದ ಮಂಗಳವಾರದವರೆಗೆ ಅನರ್ಹ ಶಾಸಕರ ವಿಚಾರಣೆಯನ್ನು ಹೈಕೋರ್ಟ್​ ನಡೆಸುತ್ತಿತ್ತು..

Rajasthan Political Crisis
ರಾಜಸ್ಥಾನ ರಾಜಕೀಯ

By

Published : Jul 22, 2020, 2:17 PM IST

ಜೈಪುರ (ರಾಜಸ್ಥಾನ):ಸಚಿನ್ ಪೈಲಟ್​ ಹಾಗೂ ಇತರ 18 ಕಾಂಗ್ರೆಸ್ ಶಾಸಕರ ವಿರುದ್ಧ ಸದ್ಯಕ್ಕೆ ಯಾವುದೇ ಕ್ರಮ ಕೈಗೊಳ್ಳಬಾರದೆಂದು ರಾಜಸ್ಥಾನ ಹೈಕೋರ್ಟ್​ ಸೂಚಿಸಿದ ಹಿನ್ನೆಲೆ ಸುಪ್ರೀಂಕೋರ್ಟ್​ಗೆ ಮೊರೆ ಹೋಗುವುದಾಗಿ ಸ್ಪೀಕರ್ ಸಿ ಪಿ ಜೋಷಿ ಸ್ಪಷ್ಟನೆ ನೀಡಿದ್ದಾರೆ.

ಶಾಸಕರ ಅನರ್ಹತೆ ವಿಚಾರಕ್ಕೆ ಸಂಬಂಧಪಟ್ಟ ತೀರ್ಪನ್ನು ರಾಜಸ್ಥಾನ ಹೈಕೋರ್ಟ್​ ಕಾಯ್ದಿದಿರಿಸಿದೆ. ತೀರ್ಪು ನೀಡುವವರಿಗೆ ಶಾಸಕರ ವಿರುದ್ಧ ಸದ್ಯ ಯಾವುದೇ ಕ್ರಮ ಕೈಗೊಳ್ಳಬಾರದೆಂದು ಸ್ಪೀಕರ್​ಗೆ ನೋಟಿಸ್ ನೀಡಿತ್ತು.

ಜುಲೈ 24ರಂದು ತೀರ್ಪು ಹೊರಬೀಳಲಿದೆ. ಆನಂತರ ಸಚಿನ್​ ಪೈಲಟ್​ ಹಾಗೂ ಕಾಂಗ್ರೆಸ್ ಶಾಸಕರ ಭವಿಷ್ಯ ಏನಾಗಲಿದೆ ಎಂಬುದು ಗೊತ್ತಾಗಲಿದೆ. ಕಳೆದ ಶುಕ್ರವಾರದಿಂದ ಮಂಗಳವಾರದವರೆಗೆ ಅನರ್ಹ ಶಾಸಕರ ವಿಚಾರಣೆಯನ್ನು ಹೈಕೋರ್ಟ್​ ನಡೆಸುತ್ತಿತ್ತು. ಬಂಡಾಯ ಶಾಸಕರಿಗೆ ಸ್ವೀಕರ್‌ ನೀಡಿರುವ ನೋಟಿಸ್‌ನ ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶವೇ ಇಲ್ಲ ಎಂದು ಸ್ಪೀಕರ್ ಪರ ವಕೀಲ ಅಭಿಷೇಕ್ ಮನು ಸಿಂಗ್ವಿ ವಾದ ಮಂಡಿಸಿದ್ದರು.

ಸಚಿನ್ ಪೈಲಟ್ ಅವರನ್ನು ರಾಜಸ್ಥಾನದ ಉಪಮುಖ್ಯಮಂತ್ರಿ ಸ್ಥಾನದಿಂದ ಕಳೆದ ವಾರ ವಜಾ ಮಾಡಲಾಗಿತ್ತು. ಸಚಿನ್‌ ಪೈಲಟ್‌ರೊಂದಿಗೆ ಕಾಂಗ್ರೆಸ್‌ನ 18 ಶಾಸಕರು ಗುರುತಿಸಿಕೊಂಡಿದ್ದಾರೆ. ಇವರ ಭವಿಷ್ಯ ಜುಲೈ 24ಕ್ಕೆ ಗೊತ್ತಾಗಲಿದೆ. ಸುಪ್ರೀಂಕೋರ್ಟ್​ಗೆ ಸ್ಪೀಕರ್ ಮೇಲ್ಮನವಿ ಸಲ್ಲಿಸಲಿದ್ದಾರೆ.

ABOUT THE AUTHOR

...view details