ಕರ್ನಾಟಕ

karnataka

ETV Bharat / bharat

ರಾಜಸ್ಥಾನ ರಾಜಕೀಯ ಪ್ರಕ್ಷುಬ್ಧತೆ: ಸಿಎಂ ಗೆಹ್ಲೋಟ್ ನಿವಾಸದಲ್ಲಿ ಸಚಿವರ ಸಭೆ - Congress

ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಹಲವು ಕೈ ಶಾಸಕರು ರಾಜ್ಯ ಸರ್ಕಾರವನ್ನು ಉರುಳಿಸಲು ಬಿಜೆಪಿ ಸಂಚು ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಆದರೆ, ಬಿಜೆಪಿ ಈ ಆರೋಪಗಳನ್ನು ನಿರಾಕರಿಸಿ, 'ಇದು ಆಡಳಿತಾರೂಢ ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ಸಂಘರ್ಷಗಳನ್ನು ಎತ್ತಿ ತೋರಿಸುತ್ತಿದೆ' ಎಂದು ಪ್ರತ್ಯುತ್ತರ ನೀಡಿದೆ.

Rajasthan politics
ರಾಜಸ್ಥಾನ ರಾಜಕೀ

By

Published : Jul 11, 2020, 11:34 PM IST

ಜೈಪುರ್​(ರಾಜಸ್ಥಾನ): ಬಿಜೆಪಿ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಿ ಉರುಳಿಸುವ ಹುನ್ನಾರ ಮಾಡುತ್ತಿದೆ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆರೋಪಿಸಿದ್ದಾರೆ.

ಆಪಾದನೆಯ ಬಳಿಕ ಗೆಹ್ಲೋಟ್ ತಮ್ಮ ನಿವಾಸದಲ್ಲಿ ಎಲ್ಲ ಮಂತ್ರಿಗಳನ್ನು ಕರೆದು ರಾತ್ರಿ ಸಭೆ ನಡೆಸಿದರು. ಪಕ್ಷದ ಮೂಲಗಳ ಪ್ರಕಾರ ರಾತ್ರಿ 9:30 ಸಭೆ ನಡೆದಿದ್ದು, ಇದಕ್ಕೂ ಮೊದಲು ರಾತ್ರಿ 8:30ಕ್ಕೆ ಸಭೆ ನಿಗದಿಯಾಗಿತ್ತು.

ಈ ಹಿಂದೆ ಕಾಂಗ್ರೆಸ್ ಶಾಸಕರು ಜಂಟಿ ಹೇಳಿಕೆಯಲ್ಲಿ ಕಾಂಗ್ರೆಸ್ ಅನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಪಕ್ಷದ ಶಾಸಕರನ್ನು ವಿವಿಧ ನಮೂನೆಗಳಲ್ಲಿ ಸಂಪರ್ಕಿಸಿ ಆಮಿಷ ಒಡ್ಡುವ ಮೂಲಕ ಬೆಂಬಲಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

ವಿವಿಧ ರಾಜ್ಯಗಳಲ್ಲಿ ಶಾಸಕರನ್ನು ಸಂಪರ್ಕಿಸಿರುವ ಬಿಜೆಪಿಯ ಮೇಲೆ ವಿರುದ್ಧ ಹರಿಹಾಯ್ದ ಗೆಹ್ಲೋಟ್, ಅವರು ಪ್ರತಿ ರಾಜ್ಯದಲ್ಲೂ ತಮ್ಮ ಅಧಿಕಾರವನ್ನು ಚಲಾಯಿಸುತ್ತಾರೆ. ವಿವಿಧ ರಾಜ್ಯಗಳಲ್ಲಿ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಮುಖಂಡ ದೇವೇಂದ್ರ ಫಡ್ನವೀಸ್ ಪ್ರಮಾಣವಚನ ಸ್ವೀಕರಿಸಿದರು ಬಳಿಕ ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿದರು. ಈ ಬಳಿಕ ಕರ್ನಾಟಕ, ಗೋವಾ ಮತ್ತು ಮಣಿಪುರದಲ್ಲೂ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದರು.

ABOUT THE AUTHOR

...view details