ಕರ್ನಾಟಕ

karnataka

ETV Bharat / bharat

ಅನರ್ಹತೆ ನೋಟಿಸ್ ವಿರುದ್ಧ ಕೋರ್ಟ್​​​​​​​​ ಮೆಟ್ಟಿಲೇರಿದ ಪೈಲಟ್:  ಮನವಿ ಆಲಿಸಲಿರುವ ಹೈಕೋರ್ಟ್ - ಸಚಿನ್ ಪೈಲಟ್

ಅನರ್ಹಗೊಳಿಸುವ ಕಾಂಗ್ರೆಸ್ ಕ್ರಮಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಸ್ಪೀಕರ್ ನೀಡಿದ ನೋಟಿಸ್‌ಗಳನ್ನು ಪ್ರಶ್ನಿಸಿ ಸಚಿನ್ ಪೈಲಟ್ ಮತ್ತು ಇತರ 18 ಭಿನ್ನಮತೀಯ ನಾಯಕರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ವಿಷಯವನ್ನು ಇಂದು ಮಧ್ಯಾಹ್ನ 1 ಗಂಟೆಗೆ ರಾಜಸ್ಥಾನ ಹೈಕೋರ್ಟ್‌ನ ವಿಭಾಗೀಯ ಪೀಠದ ಅರ್ಜಿ ವಿಚಾರಣೆಗೆ ಬರಲಿದೆ.

rajasthan
rajasthan

By

Published : Jul 17, 2020, 12:20 PM IST

ಜೈಪುರ (ರಾಜಸ್ಥಾನ): ರಾಜ್ಯ ವಿಧಾನಸಭೆಯಿಂದ ಅನರ್ಹಗೊಳಿಸುವ ಕಾಂಗ್ರೆಸ್ ನಿರ್ಧಾರಕ್ಕೆ ಸಂಬಂಧಿಸಿದಂತೆ ರಾಜಸ್ಥಾನದ ಸ್ಪೀಕರ್ ನೀಡಿದ ನೋಟಿಸ್‌ ಪ್ರಶ್ನಿಸಿ ಸಚಿನ್ ಪೈಲಟ್ ಮತ್ತು ಇತರ 18 ಭಿನ್ನಮತೀಯ ನಾಯಕರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ಈ ವಿಷಯವನ್ನು ಇಂದು ಮಧ್ಯಾಹ್ನ 1 ಗಂಟೆಗೆ ರಾಜಸ್ಥಾನ ಹೈಕೋರ್ಟ್‌ನ ವಿಭಾಗೀಯ ಪೀಠ ವಿಚಾರಣೆ ನಡೆಸಲಿದೆ. ಇದೇ ಸಮಯಕ್ಕೆ ನೋಟಿಸ್‌ಗಳಿಗೆ ಪ್ರತ್ಯುತ್ತರ ಸಲ್ಲಿಸಲು ಸ್ಪೀಕರ್ ಕಚೇರಿ ಶಾಸಕರಿಗೆ ಗಡುವು ನೀಡಿದೆ.

ಈ ಹಿಂದೆ, ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವನ್ನು ಪ್ರತಿನಿಧಿಸಿದ್ದ ಹರೀಶ್ ಸಾಳ್ವೆ ಮತ್ತು ಮುಕುಲ್ ರೋಹ್ಟಗಿ ಅವರು ಸಚಿನ್ ಪೈಲಟ್ ಹಾಗೂ ಅವರ ಬೆಂಬಲಿಗ ಶಾಸಕರ ಪರ ವಕಾಲತ್ತು ಮಾಡಲಿದ್ದಾರೆ. ಕಾಂಗ್ರೆಸ್ ನಾಯಕರಾಗಿರುವ ಅಭಿಷೇಕ್ ಮನು ಸಿಂಘ್ವಿ ಅವರು ಸ್ಪೀಕರ್ ಕಚೇರಿಯನ್ನು ಪ್ರತಿನಿಧಿಸಲಿದ್ದಾರೆ.

ಮತ್ತೊಂದು ಕಡೆ ಸ್ಪೀಕರ್ ಸಿ ಪಿ ಜೋಶಿ ಅವರು ಇಂದು ಮಧ್ಯಾಹ್ನ 1 ಗಂಟೆಗೆ ಶಾಸಕರ ಅನರ್ಹತೆ ಬಗ್ಗೆ ಶಾಸಕರಿಂದ ಖುದ್ದು ಉತ್ತರ ಪಡೆಯಲು ಸಮಯ ನಿಗದಿ ಮಾಡಿದ್ದಾರೆ.

ABOUT THE AUTHOR

...view details