ಜೈಪುರ:ಸಂಸತ್ತಿನ ಮುಂಗಾರು ಅಧಿವೇಶನ ಪ್ರಾರಂಭವಾಗುವ ಮೊದಲು ದೆಹಲಿಯಲ್ಲಿ ಕೋವಿಡ್ -19 ಪಾಸಿಟಿವ್ ಎಂದು ಘೋಷಿಸಲ್ಪಟ್ಟ ನಾಗೌರ್ ಸಂಸದ ಹನುಮಾನ್ ಬೆನಿವಾಲ್ ಅವರಿಗೆ ರಾಜಸ್ಥಾನದಲ್ಲಿ ಕೋವಿಡ್ -19 ಮಾದರಿಯ ಫಲಿತಾಂಶ ನೆಗೆಟಿವ್ ಬಂದಿದೆ.
ಇದು ನನ್ನ ಐದನೇ ಪರೀಕ್ಷೆ, ಈ ಬಾರಿ ಇದನ್ನು ಖಾಸಗಿ ಪ್ರಯೋಗಾಲಯದಲ್ಲಿ ಮಾಡಲಾಗಿದೆ. ಕೋವಿಡ್ -19 ನೆಗೆಟಿವ್ ಎಂದು ಪ್ರಮಾಣೀಕರಿಸಿದೆ. ಆದರೆ ದೆಹಲಿಯಲ್ಲಿ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಎಂದು ಘೋಷಿಸಲಾಗಿದೆ. ಈ ಬಗ್ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸ್ಪಷ್ಟಪಡಿಸಬೇಕು ಎಂದು ಬೆನಿವಾಲ್ ಒತ್ತಾಯಿಸಿದ್ದಾರೆ.