ಕರ್ನಾಟಕ

karnataka

ETV Bharat / bharat

ರಾಜಸ್ಥಾನದಲ್ಲಿ ಎದುರಾಯ್ತಾ ಹಕ್ಕಿ ಜ್ವರದ ಭೀತಿ?: ಹಠಾತ್ತನೇ ಸಾವಿಗೀಡಾಗಿವೆ ನೂರಾರು ಕಾಗೆಗಳು ! - ರಾಜಸ್ಥಾನ

ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಪ್ರಕಾರ, ಈ ವೈರಸ್‌ಗಳು ವಿಶ್ವಾದ್ಯಂತ ಕಾಡು, ಜಲವಾಸಿ ಪಕ್ಷಿಗಳಲ್ಲಿ ಸ್ವಾಭಾವಿಕವಾಗಿ ಸಂಭವಿಸುತ್ತವೆ ಹಾಗೆ ದೇಶೀಯ ಕೋಳಿ ಮತ್ತು ಇತರ ಪಕ್ಷಿ ಮತ್ತು ಪ್ರಾಣಿ ಪ್ರಭೇದಗಳಿಗೂ ಸೋಂಕು ತಗಲುತ್ತದೆ. ಏವಿಯನ್ ಫ್ಲೂ ವೈರಸ್​ಗಳು ಸಾಮಾನ್ಯವಾಗಿ ಮನುಷ್ಯರಿಗೆ ಹೆಚ್ಚಾಗಿ ಹರಡುವುದಿಲ್ಲ . ಆದಾಗ್ಯೂ ಕೆಲವರಲ್ಲಿ ಈ ವೈರಸ್‌ ಪತ್ತೆಯಾಗುತ್ತದೆ ಎಂದು ತಿಳಿಸಿದೆ.

rajasthan-many-crows-died-due-to-avian-influenza-in-jhalawar
ರಾಜಸ್ಥಾನದಲ್ಲಿ ಎದುರಾಯ್ತಾ ಹಕ್ಕಿ ಜ್ವರದ ಭೀತಿ

By

Published : Dec 31, 2020, 10:55 PM IST

ಹಲಾವರ್ (ರಾಜಸ್ಥಾನ): ರಾಜಸ್ಥಾನದಲ್ಲಿ ಕೊರೊನಾ ಮಧ್ಯೆ ಈಗ ಹಕ್ಕಿ ಜ್ವರದ ಭೀತಿ ಎದುರಾಗಿದೆ. ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಕಾಗೆಗಳು ಸಾವಿಗೀಡಾಗಿದ್ದು, ಅಲ್ಲಿನ ಆಡಳಿತವು 1 ಕಿ.ಮೀ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿ ಮಾಡಿದೆ. ಝಲಾವರ್ ಮತ್ತು ಜೋಧ್ಪುರ್ ಜಿಲ್ಲೆಗಳಲ್ಲಿ ನೂರಕ್ಕೂ ಹೆಚ್ಚು ಕಾಗೆಗಳು ಸತ್ತ ಸ್ಥಿತಿಯಲ್ಲಿ ಪತ್ತೆಯಾಗಿವೆ. ಈ ಹಿನ್ನೆಲೆ ಎಚ್ಚೆತ್ತ ಜಿಲ್ಲಾಡಳಿತ ಕಾಗೆಗಳ ಕಳೆಬರದ ಮಾದರಿಯನ್ನು ಭೋಪಾಲ್‌ನ ರಾಷ್ಟ್ರೀಯ ಹೈ-ಸೆಕ್ಯುರಿಟಿ ಅನಿಮಲ್ ಡಿಸೀಸ್ ಲ್ಯಾಬೊರೇಟರಿಗೆ ಪರೀಕ್ಷೆಗೆ ಕಳುಹಿಸಿದೆ.

ಏವಿಯನ್ ಶೀತಜ್ವರ (avian influenza) ದಿಂದ ಕಾಗೆಗಳ ಸಾವು ಸಂಭವಿಸಿರಬಹುದು ಎಂದು ಎನ್‌ಎಚ್‌ಎಸ್‌ಎಡಿಎಲ್ ತನ್ನ ವರದಿಯಲ್ಲಿ ಖಚಿತಪಡಿಸಿದೆ. ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಪ್ರಕಾರ, ಈ ವೈರಸ್‌ಗಳು ವಿಶ್ವಾದ್ಯಂತ ಕಾಡು, ಜಲವಾಸಿ ಪಕ್ಷಿಗಳಲ್ಲಿ ಸ್ವಾಭಾವಿಕವಾಗಿ ಸಂಭವಿಸುತ್ತವೆ ಹಾಗೆ ದೇಶೀಯ ಕೋಳಿ ಮತ್ತು ಇತರ ಪಕ್ಷಿ ಮತ್ತು ಪ್ರಾಣಿ ಪ್ರಭೇದಗಳಿಗೂ ಸೋಂಕು ತಗಲುತ್ತದೆ. ಏವಿಯನ್ ಫ್ಲೂ ವೈರಸ್​ಗಳು ಸಾಮಾನ್ಯವಾಗಿ ಮನುಷ್ಯರಿಗೆ ಹೆಚ್ಚಾಗಿ ಹರಡುವುದಿಲ್ಲ . ಆದಾಗ್ಯೂ ಕೆಲವರಲ್ಲಿ ಈ ವೈರಸ್‌ ಪತ್ತೆಯಾಗುತ್ತದೆ ಎಂದು ತಿಳಿಸಿದೆ.

ರಾಜಸ್ಥಾನದಲ್ಲಿ ಎದುರಾಯ್ತಾ ಹಕ್ಕಿ ಜ್ವರದ ಭೀತಿ?

ಡಿಸೆಂಬರ್ 25 ರಂದು ಝಲಾವರ್ ಪಟ್ಟಣದ ರಾಡಿ ಕೆ ಬಾಲಾಜಿ ದೇವಸ್ಥಾನದಲ್ಲಿ ನೂರಾರು ಕಾಗೆಗಳು ಅನಿರೀಕ್ಷಿತವಾಗಿ ಸಾವಿಗೀಡಾದ ಬಗ್ಗೆ ಜಿಲ್ಲಾಧಿಕಾರಿ ಎನ್‌ಜಿಕಾ ಗೋಹೈನ್ ಅವರನ್ನು ಈಟಿವಿ ಭಾರತ ಪ್ರಶ್ನಿಸಿದಾಗ, ವನ್ಯಜೀವಿ ಇಲಾಖೆ ಮತ್ತು ಜಂಟಿ ತಂಡ ಪಶುಸಂಗೋಪನಾ ಇಲಾಖೆಯನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಏವಿಯನ್ ಇನ್ಫ್ಲುಯೆನ್ಸದಿಂದಾಗಿ ಕಾಗೆಗಳು ಹಠಾತ್ತನೆ ಸಾವಿಗೀಡಾಗಿವೆ ಎಂದು ಪರೀಕ್ಷಾ ಫಲಿತಾಂಶಗಳು ತೋರಿಸಿವೆ ಎಂದು ಹೇಳಲಾಗಿದೆ.

ABOUT THE AUTHOR

...view details