ಜೈಪುರ:ತಾನು ಸಾವನ್ನಪ್ಪಿದ್ರೆ ತನ್ನ ಕುಟುಂಬಕ್ಕೆ 50 ಲಕ್ಷ ರೂ ಇನ್ಸೂರೆನ್ಸ್ ಹಣ ಸಿಗುವುದೆಂಬ ಉದ್ದೇಶದಿಂದ ವ್ಯಕ್ತಿ ತನ್ನನ್ನು ಕೊಲೆಗೈಯ್ಯಲು ಸುಪಾರಿ ಕೊಟ್ಟ ವಿಲಕ್ಷಣ ಘಟನೆ ರಾಜಸ್ಥಾನದ ಬಿಲ್ವಾರ್ ಎಂಬಲ್ಲಿ ನಡೆದಿದೆ.
50 ಲಕ್ಷ ರೂ ಇನ್ಸೂರೆನ್ಸ್ ಆಸೆ, ತನ್ನನ್ನು ತಾನೇ ಕೊಲೆ ಮಾಡಿಸಿಕೊಂಡ ರಾಜಸ್ಥಾನದ ವ್ಯಕ್ತಿ! - ಆತ್ಮಹತ್ಯೆಗೆ ಶರಣು
ಇನ್ಸೂರೆನ್ಸ್ ಹಣದಿಂದ ತನ್ನ ಕುಟುಂಬ ಯಾವುದೇ ರೀತಿ ತೊಂದರೆ ಇಲ್ಲದೇ ಜೀವನ ನಡೆಸಬಹುದು ಎಂಬ ಉದ್ದೇಶದಿಂದ ವ್ಯಕ್ತಿಯೋರ್ವ ತನ್ನನ್ನು ಕೊಲೆ ಮಾಡಿಸಲು ಇಲ್ಲೊಬ್ಬ ವ್ಯಕ್ತಿ ಸುಪಾರಿ ಕೊಟ್ಟಿದ್ದಾನೆ.
38 ವರ್ಷದ ಬಲ್ಬಿರ್ ಕಾರೋಲ್ ಬಡ್ಡಿ ವ್ಯಾಪಾರ ನಡೆಸುತ್ತಿದ್ದ. ತಾನು ನೀಡಿದ್ದ ಹಣ ವಾಪಸ್ ಬರದ ಕಾರಣ ಕುಟುಂಬಸ್ಥರು ಬೀದಿಗೆ ಬೀಳಬಾರದು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದಾಗಿ ತಿಳಿದು ಬಂದಿದೆ. 20 ಲಕ್ಷ ರೂ ಹಣವನ್ನು ಈತ ಬೇರೆಯವರಿಗೆ ಸಾಲದ ರೂಪದಲ್ಲಿ ನೀಡಿದ್ದನಂತೆ. ಅವರು ಕಳೆದ ಆರು ತಿಂಗಳಿಂದ ಹಣ ವಾಪಸ್ ನೀಡದೇ ಸತಾಯಿಸುತ್ತಿದ್ದರು. ಹೀಗಾಗಿ ತಾನು ಕೊಲೆ ಮೂಲಕ ಸಾವಿಗೀಡಾದ್ರೆ ತನ್ನ ಕುಟುಂಬಸ್ಥರಿಗೆ ಇನ್ಸೂರೆನ್ಸ್ ಹಣ ಬರಬಹುದು ಎಂದು ಆತ ನಿರ್ಧರಿಸಿರುವುದಾಗಿ ತಿಳಿದುಬಂದಿದೆ.
ಖಾಸಗಿ ಬ್ಯಾಂಕ್‌ನಲ್ಲಿ ಇನ್ಸೂರೆನ್ಸ್!
ಖಾಸಗಿ ಬ್ಯಾಂಕ್‌ನಲ್ಲಿ 50 ಲಕ್ಷ ರೂಪಾಯಿ ಇನ್ಸೂರೆನ್ಸ್ ಮಾಡಿದ್ದ ಈತ ಮೊದಲ ಕಂತಿನಲ್ಲಿ 80 ಸಾವಿರ ರೂ ಹಣ ಕಟ್ಟಿದ್ದಾನೆ. ಈ ಹಣ ತನ್ನ ಕುಟುಂಬಕ್ಕೆ ಸೇರುತ್ತದೆ ಎಂಬ ಲೆಕ್ಕಾಚಾರ ಆತನದ್ದಾಗಿತ್ತು.
ಕೊಲೆಗೆ ಹೇಗೆ ಪ್ಲಾನ್?
ಬಲ್ಬಿರ್ ಸೆಪ್ಟೆಂಬರ್ 2ರಂದು ಇಬ್ಬರು ಕೊಲೆಗಾರರಿಗೆ 10 ಸಾವಿರ ಹಣ ನೀಡಿದ್ದು, ತನ್ನ ಕೊಲೆ ಮಾಡುವಂತೆ ತಿಳಿಸಿದ್ದಾನೆ. ಅದರ ಪ್ರಕಾರ ರಾಜೀವ್ ಸಿಂಗ್ ಹಾಗೂ ಸುನಿಲ್ ಯಾದವ್ ಈತನ ಕೊಲೆ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರಿಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ವಿಚಾರಣೆ ನಡೆಸಲು ಮುಂದಾದಾಗ ಆತನ ದೂರವಾಣಿ ಕರೆಗಳ ಆಧಾರ ಹಾಗೂ ಸಿಸಿಟಿವಿ ದೃಶ್ಯಾವಳಿ ನೋಡಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಈ ವೇಳೆ ನಡೆದ ಸಂಗತಿ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ.