ಕರ್ನಾಟಕ

karnataka

ETV Bharat / bharat

₹2200ಗೆ ಖಾಸಗಿ ಲ್ಯಾಬ್​ಗಳಲ್ಲಿ ಕೊರೊನಾ ಪರೀಕ್ಷೆ.. ದರ ನಿಗದಿಪಡಿಸಿದ ರಾಜಸ್ಥಾನ ಸರ್ಕಾರ - ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್

ಖಾಸಗಿ ಆಸ್ಪತ್ರೆಗಳು ಅತಿಯಾದ ಶುಲ್ಕ ವಿಧಿಸದಂತೆ ನೋಡಿಕೊಳ್ಳಬೇಕೆಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದರು. ಸರ್ಕಾರದ ಆದೇಶ ಉಲ್ಲಂಘನೆಯಾದ್ರೆ, ಕಾನೂನಿನ ಅಡಿ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದರು.

Rajasthan govt caps Covid-19 testing charge at Rs 2,200
.2200 ರೂ. ನಿಗಧಿಪಡಿಸಿದ ರಾಜಸ್ಥಾನ ಸರ್ಕಾರ

By

Published : Jun 20, 2020, 3:06 PM IST

ಜೈಪುರ :ರಾಜಸ್ಥಾನ ಸರ್ಕಾರ ಕೋವಿಡ್-19 ಪರೀಕ್ಷಾ ಶುಲ್ಕವನ್ನು ಖಾಸಗಿ ಲ್ಯಾಬ್‌ಗಳಿಗೆ 2,200 ರೂ.ಗೆ ನಿಗದಿಪಡಿಸಿದೆ. ಈ ಹಿಂದೆ ವಿಧಿಸಲಾಗಿದ್ದ 3,500 ರಿಂದ 4,500 ರೂ. ಬದಲಾಗಿ ಈ ಹೊಸ ಶುಲ್ಕ ಇನ್ಮೇಲೆ ಜಾರಿಯಾಗಲಿದೆ.

ರಾಜ್ಯದಲ್ಲಿ ಕೊರೊನಾ ವಿರುದ್ಧ ಹೋರಾಡಲು ಕೈಗೊಂಡ ಕ್ರಮಗಳನ್ನು ಪರಿಶೀಲಿಸಲು ಶುಕ್ರವಾರ ತಡರಾತ್ರಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಈ ನಿರ್ಧಾರ ಕೈಗೊಂಡಿದ್ದಾರೆ.

ಎರಡು ಗಂಟೆಗಳ ಸಭೆಯಲ್ಲಿ ಗೆಹ್ಲೋಟ್, ಖಾಸಗಿ ಆಸ್ಪತ್ರೆಯ ಪ್ರತಿ ಹಾಸಿಗೆಗೆ ಗರಿಷ್ಠ ಶುಲ್ಕ 2,000 ರೂ. ಮತ್ತು ವೆಂಟಿಲೇಟರ್ ಹೊಂದಿರುವ ಹಾಸಿಗೆ 4,000 ರೂ. ನಿಗದಿಪಡಿಸುವಂತೆ ಸೂಚಿಸಿದರು. ರೋಗಿಗಳಿಗೆ ಹೆಚ್ಚಿನ ಶುಲ್ಕ ವಿಧಿಸುವ ಮೂಲಕ ಸುಲಿಗೆಗಿಳಿದ್ರೆ ಸರ್ಕಾರ ಸಹಿಸುವುದಿಲ್ಲ ಎಂದು ಗೆಹ್ಲೋಟ್ ಎಚ್ಚರಿಸಿದ್ದಾರೆ.

ಖಾಸಗಿ ಆಸ್ಪತ್ರೆಗಳು ಅತಿಯಾದ ಶುಲ್ಕ ವಿಧಿಸದಂತೆ ನೋಡಿಕೊಳ್ಳಬೇಕೆಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದರು. ಸರ್ಕಾರದ ಆದೇಶ ಉಲ್ಲಂಘನೆಯಾದ್ರೆ, ಕಾನೂನಿನ ಅಡಿ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದರು. ಲಾಕ್​ಡೌನ್​ ಕೊನೆಗೊಂಡಿದ್ದರೂ ಕೊರೊನಾ ಬಿಕ್ಕಟ್ಟು ಹೆಚ್ಚುತ್ತಿದೆ. ಆದ್ದರಿಂದ ಎಲ್ಲರೂ ಜಾಗರೂಕರಾಗಿರಬೇಕು ಮತ್ತು ಹೊರಗೆ ಹೋಗುವಾಗ ಮುಖವಾಡಗಳನ್ನು ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ABOUT THE AUTHOR

...view details