ಕರ್ನಾಟಕ

karnataka

ETV Bharat / bharat

ಸರ್ಕಾರ ಉಳಿಸಿಕೊಳ್ಳಲು ಗೆಹ್ಲೋಟ್​ ಸರ್ಕಸ್​​​​: ಇಂದು ಮತ್ತೆ ಶಾಸಕಾಂಗ ಪಕ್ಷದ ಸಭೆ

ಸಿಎಂ ಅಶೋಕ್​ ಗೆಹ್ಲೋಟ್​​ ಅಧಿಕಾರ ಉಳಿಸಿಕೊಳ್ಳಲು ಕಸರತ್ತು ಮುಂದುವರೆಸಿದ್ದಾರೆ. ರಾಜ್ಯದ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮೂರನೆ ಬಾರಿ ಸಿಎಲ್​ಪಿ ಸಭೆ ನಡೆಯುತ್ತಿದೆ. ನಿನ್ನೆಯೇ ಶಾಸಕಾಂಗ ಪಕ್ಷದ ಸಭೆ ನಡೆಯಬೇಕಿತ್ತು. ಆದರೆ, ಅನಿವಾರ್ಯ ಕಾರಣಗಳಿಂದಾಗಿ ಸಭೆ ಇಂದಿಗೆ ಮುಂದೂಡಲ್ಪಟ್ಟಿದೆ. ಈ ಸಭೆಯಲ್ಲಿ ಸಿಎಂ ತಮ್ಮ ಮುಂದಿನ ಕಾರ್ಯತಂತ್ರದ ಕುರಿತು ಸಮಾಲೋಚಿಸಲಿದ್ದಾರೆ.

Rajasthan Congress Legislature Party meeting today
ಸರ್ಕಾರ ಉಳಿಸಿಕೊಳ್ಳಲು ಗೆಹ್ಲೋಟ್​ ಸರ್ಕಸ್​​​​

By

Published : Jul 21, 2020, 8:24 AM IST

ಜೈಪುರ:ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು ಕೊನೆಗೊಳ್ಳುವ ಯಾವುದೇ ಲಕ್ಷಣಗಳು ಕಂಡು ಬರುತ್ತಿಲ್ಲ. ಸಿಎಂ ಅಶೋಕ್​ ಗೆಹ್ಲೋಟ್​​ ಅಧಿಕಾರ ಉಳಿಸಿಕೊಳ್ಳಲು ಕಸರತ್ತು ಮುಂದುವರೆಸಿದ್ದಾರೆ. ಇಂದು ಕೂಡಾ ಸಿಎಂ ಅಶೋಕ್​ ಗೆಹ್ಲೋಟ್​ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ.

ಹೋಟೆಲ್ ಫೇರ್​​ಮೌಂಟ್​​​​​ನಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ರಾಜ್ಯದ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮೂರನೆ ಬಾರಿ ಸಿಎಲ್​ಪಿ ಸಭೆ ನಡೆಯುತ್ತಿದೆ. ನಿನ್ನೆಯೇ ಶಾಸಕಾಂಗ ಪಕ್ಷದ ಸಭೆ ನಡೆಯಬೇಕಿತ್ತು. ಆದರೆ, ಅನಿವಾರ್ಯ ಕಾರಣಗಳಿಂದಾಗಿ ಸಭೆ ಇಂದಿಗೆ ಮುಂದೂಡಲ್ಪಟ್ಟಿದೆ. ಈ ಸಭೆಯಲ್ಲಿ ಸಿಎಂ ತಮ್ಮ ಮುಂದಿನ ಕಾರ್ಯತಂತ್ರದ ಕುರಿತು ಸಮಾಲೋಚಿಸಲಿದ್ದಾರೆ.

ಸಭೆಗೆ ಕಾಂಗ್ರೆಸ್​ ಹಲವು ಉನ್ನತ ನಾಯಕರು ಹಾಜರಾಗುವ ಸಾಧ್ಯತೆಗಳಿವೆ. ಈ ಹಿಂದೆ ಕಾಂಗ್ರೆಸ್ ಜುಲೈ 13 ಮತ್ತು 14 ರಂದು ಶಾಸಕಾಂಗ ಪಕ್ಷದ ಸಭೆ ಕರೆದಿತ್ತು. ಈ ಸಭೆಯಲ್ಲಿ ಸಚಿನ್ ಪೈಲಟ್​ ಸೇರಿದಂತೆ 19 ಶಾಸಕರು ಭಾಗವಹಿಸಿರಲಿಲ್ಲ. ಜುಲೈ 13 ರಂದು ನಡೆದ ಸಭೆಯ ಬಳಿಕ ಎಲ್ಲ ಶಾಸಕರನ್ನ ಫೇರ್​​ಮೌಂಟ್ ಹೋಟೆಲ್​ಗೆ ಸ್ಥಳಾಂತರ ಮಾಡಲಾಗಿತ್ತು. ಅಲ್ಲಿಯೇ 2ನೇ ಬಾರಿ ಶಾಸಕಾಂಗ ಸಭೆ ನಡೆಸಿ, ಬಂಡಾಯಗಾರರಿಗೆ ಎಚ್ಚರಿಕೆ ನೀಡಲಾಗಿತ್ತು. ಸಚಿನ್ ಪೈಲಟ್​ ಅವರನ್ನ ಡಿಸಿಎಂ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಅಲ್ಲದೇ,ಅವರನ್ನ ಕಾಂಗ್ರೆಸ್​ ಅಧ್ಯಕ್ಷ ಸ್ಥಾನದಿಂದಲೂ ಕಿತ್ತೊಗೆಯಲಾಗಿತ್ತು.

ಇಂದಿನ ಸಭೆಯಲ್ಲಿ ಏನು ನಿರ್ಧಾರ ಕೈಗೊಳ್ಳಬಹುದು?

ಇಂದಿನ ಸಭೆಯಲ್ಲಿ ಸದದನಲ್ಲಿ ಬಹುಮತ ಸಾಬೀತಿಗೆ ಬದಲು ಹಲವು ವಿಧೇಯಕಗಳನ್ನ ಮಂಡಿಸಿ, ಅಂಗೀಕಾರ ಪಡೆಯಲು ವಿಶೇಷ ಅಧಿವೇಶನ ಕರೆಯುವ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಮೂಲಕ ತಮಗೆ ಬಹುಮತ ಇದೆ ಎಂಬುದನ್ನ ತೋರಿಸಲು ಸಿಎಂ ಅಶೋಕ್​ ಗೆಹ್ಲೋಟ್​​ ಮುಂದಾಗುವ ಸಾಧ್ಯತೆಗಳಿವೆ. ಅಂತಿಮವಾಗಿ ಏನಾಗುತ್ತೆ ಅನ್ನೋದನ್ನ ಕಾದು ನೋಡಬೇಕಷ್ಟೇ.

ABOUT THE AUTHOR

...view details