ಜೈಪುರ (ರಾಜಸ್ತಾನ):2019-20ರ ಆರ್ಥಿಕ ವರ್ಷದಲ್ಲಿ ಬುಡಕಟ್ಟು ಪ್ರಾದೇಶಿಕ ಇಲಾಖೆಯಿಂದ (ಟಿಎಡಿ) ಬುಡಕಟ್ಟು ಸಮುದಾಯದ 6,000 ಹೆಣ್ಣುಮಕ್ಕಳಿಗೆ ಸ್ಕೂಟರ್ ವಿತರಿಸುವುದಾಗಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪ್ರಕಟಿಸಿದ್ದಾರೆ.
ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸರ್ಕಾರ ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ಮೊದಲು 4000 ಸ್ಕೂಟರ್ ವಿತರಿಸುವುದಾಗಿ ಸರ್ಕಾರ ತಿಳಿಸಿತ್ತು. ಅದೀಗ 6 ಸಾವಿರಕ್ಕೆ ಏರಿಸಿ ಅನುಮೋದನೆ ನೀಡಿದೆ.
ದೇವನಾರಾಯಣ ಸ್ಕೂಲ್ ಸ್ಕೂಟಿ ಯೋಜನೆಯಡಿ ಅರ್ಹ ವಿದ್ಯಾರ್ಥಿಗಳಿಗೆ ನೀಡಬೇಕಾದ ಸ್ಕೂಟಿಗಳ ಸಂಖ್ಯೆಯನ್ನು 1,000 ದಿಂದ 1,500ಕ್ಕೆ ಹೆಚ್ಚಿಸಲು ಸಿಎಂ ಗೆಹ್ಲೋಟ್ ಅನುಮೋದನೆ ನೀಡಿದ್ದಾರೆ.
ಕಾಲಿಬಾಯಿ ಬಿಲ್ ಮೆರಿಟೋರಿಯಸ್ ವಿದ್ಯಾರ್ಥಿಗಳ ಸ್ಕೂಟಿ ಯೋಜನೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಅಲ್ಪಸಂಖ್ಯಾತರಿಗೆ ಸೇರಿದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಈ ಪಟ್ಟಿಗೆ ಸೇರಿಸಲು ಸಿಎಂ ಅನುಮೋದನೆ ನೀಡಿದ್ದಾರೆ. ಈ ನಿರ್ಧಾರದಿಂದ ಪರಿಶಿಷ್ಟ ಜಾತಿ ಮತ್ತು ಅಲ್ಪಸಂಖ್ಯಾತರ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸ್ಕೂಟರ್ ಸಿಗಲಿದೆ.