ಕರ್ನಾಟಕ

karnataka

ETV Bharat / bharat

ರಾಜಸ್ಥಾನ ಬಿಜೆಪಿ ಅಧ್ಯಕ್ಷ, ರಾಜ್ಯಸಭೆ ಸದಸ್ಯ ಮದನ್​ ಲಾಲ್​ ಸೈನಿ ನಿಧನ - ಜೋಧಪುರ್​​

ಕಳೆದ ಕೆಲ ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ರಾಜಸ್ಥಾನ ಬಿಜೆಪಿ ಅಧ್ಯಕ್ಷ ಹಾಗೂ ರಾಜ್ಯಸಭೆ ಸದಸ್ಯ ಮದನ್​ ಲಾಲ್​ ಸೈನಿ ಸಾವನ್ನಪ್ಪಿದ್ದಾರೆ.

ಮದನ್​ ಲಾಲ್​ ಸೈನಿ ನಿಧನ

By

Published : Jun 24, 2019, 8:29 PM IST

ಜೋಧಪುರ್​:ಆಲ್​​ ಇಂಡಿಯಾ ಇನ್ಸ್​ಟ್ಯೂಟ್​​​ನಲ್ಲಿ(ಏಮ್ಸ್​​​) ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ರಾಜಸ್ಥಾನ ಬಿಜೆಪಿ ಅಧ್ಯಕ್ಷ ಹಾಗೂ ರಾಜ್ಯಸಭೆ ಸಂಸದ ಮದನ್ ಲಾಲ್ ಸೈನಿ(76) ಸಾವನ್ನಪ್ಪಿದ್ದಾರೆ.

ಕಳೆದ ಕೆಲ ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮದಲ್​ ಲಾಲ್​ ಸೈನಿ ಏಮ್ಸ್​​ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಅವರ ನಿಧನಕ್ಕೆ ರಾಜಸ್ಥಾನ ಸಿಎಂ ಅಶೋಕ್​ ಗೆಹ್ಲೊಟ್​ ಸಂತಾಪ ಸೂಚಿಸಿದ್ದಾರೆ.

ಅವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ವೇಳೆ ರಾಜಸ್ಥಾನ ಮಾಜಿ ಸಿಎಂ ವಸುಧರೆ ರಾಜೇ ಆಸ್ಪತ್ರೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿದ್ದರು. ರಜಪೂತ್​ ಸಮುದಾಯಕ್ಕೆ ಸೇರಿದ ಮದನ್​ ಲಾಲ್​ ಸೈನಿ, ರಾಜಸ್ಥಾನ ವಿಧಾನಸಭೆ ಚುನಾವಣೆಗೂ ಮುನ್ನ ಅಲ್ಲಿನ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಮಹಾರಾಣಾ ಪ್ರತಾಪ್​ ದಿನಾಚರಣೆ ಸಂದರ್ಭದಲ್ಲಿ ಮಾತನಾಡಿದ್ದ ಮದನ್​ ಲಾಲ್​,ಚಾರಿತ್ರ್ಯಹೀನ ಅಕ್ಬರ್ ಸ್ತ್ರೀವೇಷ ಧರಿಸಿ ಮೀನಾ ಬಜಾರ್​ಗೆ ಬಂದು ಅಲ್ಲಿಗೆ ಆಗಮಿಸುತ್ತಿದ್ದ ಹೆಣ್ಣು ಮಕ್ಕಳೊಂದಿಗೆ ಅನುಚಿತವಾಗಿ ವರ್ತನೆ ಮಾಡ್ತಿದ್ದನು ಎಂದು ವಿವಾದಿತ ಹೇಳಿಕೆ ನೀಡಿದ್ದರು.

ABOUT THE AUTHOR

...view details