ಜೈಪುರ: ರಾಜಸ್ಥಾನದಲ್ಲಿ ಕೋವಿಡ್ -19 ರೋಗಿಗಳ ಸಂಖ್ಯೆ 10,000 ದಾಟಿದೆ. ಶುಕ್ರವಾರ ರಾತ್ರಿಯವರೆಗೆ 218 ಸಾವುಗಳು ವರದಿಯಾಗಿವೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಇಂದು ತಿಳಿಸಿದ್ದಾರೆ.
ಮಹಾರಾಷ್ಟ್ರ, ತಮಿಳುನಾಡು, ದೆಹಲಿ ಮತ್ತು ಗುಜರಾತ್ ನಂತರದಲ್ಲಿ 10,000 ರ ಗಡಿಯನ್ನು ದಾಟಿದ ರಾಜ್ಯ ರಾಜಸ್ಥಾನ, ಈಗ ದೇಶದಲ್ಲಿ ಐದನೇ ಸ್ಥಾನಕ್ಕೆ ಏರಿದೆ. ರಾಜ್ಯದಲ್ಲಿ ಒಟ್ಟು 10,084 ಕೊರೊನಾ ಪ್ರಕರಣಗಳ ಪೈಕಿ 7,359 ಮಂದಿ ಚೇತರಿಸಿಕೊಂಡಿದ್ದಾರೆ. ಒಟ್ಟು 6,818 ಜನರನ್ನು ಬಿಡುಗಡೆ ಮಾಡಲಾಗಿದ್ದು, 2,507 ಸಕ್ರಿಯ ಪ್ರಕರಣಗಳು ಉಳಿದಿವೆ.