ಉದಯ್ಪುರ್: ಮಹಿಳೆವೋರ್ವಳನ್ನು ಕಾಮುಕರು ಅಪಹರಿಸಿ, ಚಲಿಸುವ ಕಾರಿನಲ್ಲೇ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ರಾಜಸ್ಥಾನದ ಉದಯ್ಪುರ್ ಜಿಲ್ಲೆಯಲ್ಲಿ ಭಾನುವಾರ ರಾತ್ರಿ ನಡೆದಿದೆ.
ಸಹೋದ್ಯೋಗಿಯನ್ನು ಕಾರಿನಲ್ಲೇ ಕಟ್ಟಿ ಹಾಕಿ ಆತನ ಮುಂದೆಯೇ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿ, ಬಳಿಕ ಥೋಕರ್ ಸರ್ಕಲ್ ಬಳಿ ಬೆಳಗ್ಗೆ 8ಕ್ಕೆ ಬಿಟ್ಟು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.