ಕರ್ನಾಟಕ

karnataka

ETV Bharat / bharat

ಪ್ರತ್ಯೇಕ ರಸ್ತೆ ಅಪಘಾತದಲ್ಲಿ 7 ಜನ ಸಾವು, 32 ಮಂದಿಗೆ ಗಾಯ.. - ರಸ್ತೆ ಅಪಘಾತದಲ್ಲಿ 7 ಜನ ಸಾವು

ಅಜ್ಮೀರ್-ಜೈಪುರ ಹೆದ್ದಾರಿಯಲ್ಲಿ ಬಸ್ ಪಲ್ಟಿಯಾಗಿ ಮೂವರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಮಹಿಳೆಯರು ಸೇರಿದಂತೆ 18 ಮಂದಿ ಗಾಯಗೊಂಡಿದ್ದಾರೆ. ಬಸ್ ಅಹಮದಾಬಾದ್‌ನಿಂದ ಜೈಪುರಕ್ಕೆ ತೆರಳುತ್ತಿದ್ದಾಗ ಚಾಲಕನ ನಿಯಂತ್ರ ಕಳೆದುಕೊಂಡು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಉರುಳಿದೆ ಎಂದು ಪೊಲೀಸರು ತಿಳಿಸಿದ್ದಾರೆ.

7 Killed, 32 injured in two separate road mishaps,ಪ್ರತ್ಯೇಕ ರಸ್ತೆ ಅಪಘಾತದಲ್ಲಿ 7 ಜನ ಸಾವು
ಪ್ರತ್ಯೇಕ ರಸ್ತೆ ಅಪಘಾತದಲ್ಲಿ 7 ಜನ ಸಾವು

By

Published : Mar 8, 2020, 7:16 PM IST

Updated : Mar 8, 2020, 7:42 PM IST

ಜೋಧ್​ಪುರ(ರಾಜಸ್ಥಾನ): ರಾಜಸ್ಥಾನದಲ್ಲಿ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತದಲ್ಲಿ 7 ಮಂದಿ ಸಾವಿಗೀಡಾಗಿದ್ದು, 32 ಜನ ಗಾಯಗೊಂಡಿದ್ದಾರೆ.

ಜೋಧ್‌ಪುರ ಜಿಲ್ಲೆಯ ಬಿನಾವಾಸ್ ಗ್ರಾಮದಲ್ಲಿ ಅಜ್ಮೀರ್‌ನಿಂದ ಹೊರಟ ಬಸ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಹಿಳಾ ಪ್ರಯಾಣಿಕರು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ರೆ, 14 ಮಂದಿ ಗಾಯಗೊಂಡಿದ್ದಾರೆ ಎಂದು ಜೋಧ್‌ಪುರ ಗ್ರಾಮೀಣ ಎಸ್‌ಪಿ ರಾಹುಲ್ ಬರ್ಹತ್ ತಿಳಿಸಿದ್ದಾರೆ. ಜೋಧಪುರ-ಜೈಪುರ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಅಪಘಾತದ ಸ್ಥಳದಲ್ಲಿ ಸೇತುವೆ ನಿರ್ಮಿಸಲಾಗಿದ್ದು, ಮೃತರ ಗುರುತು ಪತ್ತೆ ಹಚ್ಚುವ ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಅಜ್ಮೀರ್-ಜೈಪುರ ಹೆದ್ದಾರಿಯಲ್ಲಿ ಬಸ್ ಪಲ್ಟಿಯಾಗಿ ಮೂವರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಮಹಿಳೆಯರು ಸೇರಿದಂತೆ 18 ಮಂದಿ ಗಾಯಗೊಂಡಿದ್ದಾರೆ. ಬಸ್ ಅಹಮದಾಬಾದ್‌ನಿಂದ ಜೈಪುರಕ್ಕೆ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಉರುಳಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಜೈಪುರದ ಯೋಗೇಶ್, ಅಹಮದಾಬಾದ್‌ನ ಮಗನ್ ಭಾಯ್ ಪಟೇಲ್ ಮತ್ತು ಮಹಾರಾಷ್ಟ್ರದ ನಿವಾಸಿ ಬಸ್ ಚಾಲಕ ಕೃಷ್ಣಕಾಂತ್ ದುಬೆ ಎಂದು ಗುರುತಿಸಲಾಗಿದೆ.

Last Updated : Mar 8, 2020, 7:42 PM IST

ABOUT THE AUTHOR

...view details