ಜೋಧಪುರ್(ರಾಜಸ್ಥಾನ):ದೇಶದಲ್ಲಿ ಕೋವಿಡ್-19 ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರಾಜಸ್ಥಾನದಲ್ಲಿ ಕೊರೊನಾ ವೈರಸ್ಗೆ 60 ವರ್ಷದ ಮಹಿಳೆ ಸೇರಿದಂತೆ ಇಂದು ದೇಶದಲ್ಲಿ ಮೂವರು ಬಲಿಯಾಗಿದ್ದಾರೆ. ಜತೆಗೆ 22 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ.
ರಾಜಸ್ಥಾನದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 201ಕ್ಕೆ ಏರಿಕೆಯಾಗಿದೆ. ಹೊಸದಾಗಿ ಕಾಣಿಸಿಕೊಂಡಿರುವ 22 ಪ್ರಕರಣದಲ್ಲಿ ಅನೇಕರು ದೆಹಲಿಯಲ್ಲಿ ನಡೆದ ತಬ್ಲಿಘಿ ಧಾರ್ಮಿಕ ಸಭೆಯಲ್ಲಿ ಭಾಗಿಯಾದವರು ಎಂದು ತಿಳಿದು ಬಂದಿದೆ.