ಕರ್ನಾಟಕ

karnataka

ETV Bharat / bharat

ಬಸ್​​-ಟ್ರಕ್​ ನಡುವೆ ಭೀಕರ ಅಪಘಾತ... ಸ್ಥಳದಲ್ಲೇ 13 ಜನರ ದುರ್ಮರಣ - ಭೀಕರ ಅಪಘಾತ

ಭೀಕರ ರಸ್ತೆ ಅಪಘಾತವೊಂದರಲ್ಲಿ 13 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದ್ದು, ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಭೀಕರ ರಸ್ತೆ ಅಪಘಾತ

By

Published : Sep 27, 2019, 5:00 PM IST

Updated : Sep 27, 2019, 9:36 PM IST

ಜೋಧಪುರ್​(ರಾಜಸ್ಥಾನ): ಜೋಧ್‌ಪುರದ ಧಧನಿಯಾ ಗ್ರಾಮದ ಸಮೀಪ ಜೈಸಲ್‌ಮೇರ್ - ಜೋಧ್‌ಪುರ ರಸ್ತೆಯಲ್ಲಿ ಬಸ್​- ಟ್ರಕ್​ ನಡುವೆ ಭೀಕರ ರಸ್ತೆ ಅಪಘಾತ ನಡೆದಿದೆ. ಪರಿಣಾಮ ಸ್ಥಳದಲ್ಲೇ 13 ಮಂದಿ ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡಿದ್ದಾರೆ.

ಭೀಕರ ರಸ್ತೆ ಅಪಘಾತ

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ 8 ಮಂದಿಯನ್ನ ಜೋಧಪುರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಘಟನಾ ಸ್ಥಳಕ್ಕೆ ದಾವಿಸಿರುವ ಪೊಲೀಸರು ಮಾಹಿತಿ ಕಲೆ ಹಾಕಿ, ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾಗಿ ತಿಳಿದು ಬಂದಿದೆ.ಬಸ್​ನ ಟೈರ್​ ಬಸ್ಟ್​ ಆಗಿ ಏಕಾಏಕಿಯಾಗಿ ಮುಂದೆ ಚಲಿಸುತ್ತಿದ್ದ ಟ್ರಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ನಡೆದಿದೆ. ಘಟನೆಯಲ್ಲಿ ಸಾವನ್ನಪ್ಪಿರುವ ಸದಸ್ಯರ ಕುಟುಂಬಕ್ಕೆ ರಾಜಸ್ಥಾನ ಸರ್ಕಾರ ತಲಾ 1ಲಕ್ಷ ರೂ ಪರಿಹಾರ ಘೋಷಣೆ ಮಾಡಿದೆ.

ಭೀಕರ ರಸ್ತೆ ಅಪಘಾತ
Last Updated : Sep 27, 2019, 9:36 PM IST

ABOUT THE AUTHOR

...view details