ಕರ್ನಾಟಕ

karnataka

ETV Bharat / bharat

ತಿರುಪತ್ತೂರು ಎಸ್ಪಿ ಫೀಡ್​ಬ್ಯಾಕ್​ ಐಡಿಯಾಗೆ ಕ್ರಿಕೆಟಿಗ ಸುರೇಶ್ ರೈನಾ ಕ್ಲೀನ್ ಬೌಲ್ಡ್ - Raina lauds Tirupattur SP Vijay Kumar

ಫೀಡ್​ಬ್ಯಾಕ್​ ಸೆಲ್ ತೆರದ ಬಗ್ಗೆ ತಮಿಳುನಾಡಿನ ತಿರುಪತ್ತೂರು ಎಸ್ಪಿ ವಿಜಯ್ ಕುಮಾರ್​ಗೆ ಕ್ರಿಕೆಟಿಗ ಸುರೇಶ್ ರೈನಾ ಅವರು ಅಭಿನಂದನೆ ಸಲ್ಲಿಸಿ, 'ಇದು ಖಂಡಿತವಾಗಿಯೂ ಪ್ರಕ್ರಿಯೆಗಳನ್ನು ಮತ್ತಷ್ಟು ಪರಿಷ್ಕರಿಸುವ ಕೆಲಸ ಮಾಡಲು ಮತ್ತು ನಾಗರಿಕರ ಮೇಲೆ ಹೆಚ್ಚು ಪರಿಣಾಮಕಾರಿಯಾಗಲು ಪೊಲೀಸರಿಗೆ ಅನುವು ಮಾಡಿಕೊಡುತ್ತದೆ' ಎಂದು ಶ್ಲಾಘಿಸಿದ್ದಾರೆ.

ಫೀಡ್​ಬ್ಯಾಕ್​ ಸೆಲ್
ಫೀಡ್​ಬ್ಯಾಕ್​ ಸೆಲ್

By

Published : Jun 1, 2020, 11:35 PM IST

ತಿರುಪತ್ತೂರು (ತಮಿಳುನಾಡು):ತಿರುಪತ್ತೂರು ಎಸ್ಪಿ ವಿಜಯ್ ಕುಮಾರ್ ಅವರು ಟ್ವಿಟ್ಟರ್​ ಖಾತೆಯಲ್ಲಿ ಫೀಡ್​ಬ್ಯಾಕ್​ ಸೆಲ್​ ತೆರೆದಿರುವ ಕುರಿತು ಭಾರತೀಯ ಕ್ರಿಕೆಟಿಗ ಸುರೇಶ್ ರೈನಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಿರುಪತ್ತೂರು ಎಸ್ಪಿ ವಿಜಯ್ ಕುಮಾರ್ ಅವರ ಈ ಕ್ರಮವು ಅತ್ಯದ್ಭುತವಾಗಿದೆ. ಇದು ಖಂಡಿತವಾಗಿಯೂ ಪ್ರಕ್ರಿಯೆಗಳನ್ನು ಮತ್ತಷ್ಟು ಪರಿಷ್ಕರಿಸುವ ಕೆಲಸ ಮಾಡಲು ಮತ್ತು ನಾಗರಿಕರ ಮೇಲೆ ಹೆಚ್ಚು ಪರಿಣಾಮಕಾರಿಯಾಗಲು ಪೊಲೀಸರಿಗೆ ಅನುವು ಮಾಡಿಕೊಡುತ್ತದೆ ಎಂದು ಜಿಲ್ಲಾ ಪೊಲೀಸರ ಈ ಕ್ರಮಕ್ಕೆ ಟ್ವೀಟ್​ ಮೂಲಕ ರೈನಾ ಅಭಿನಂದನೆ ಸಲ್ಲಿಸಿದ್ದಾರೆ.

ಈ ಹಿಂದೆ ತಿರುಪತ್ತೂರು ಎಸ್ಪಿ ವಿಜಯ್ ಕುಮಾರ್, ಜಿಲ್ಲಾ ಪೊಲೀಸರು ಸ್ಥಾಪಿಸಿದ ಫೀಡ್​ಬ್ಯಾಕ್​ ಸೆಲ್​ ಬಗ್ಗೆ ಮಾತನಾಡಿ, ಈ ಕಾರ್ಯವಿಧಾನವು ಸ್ಪಂದಿಸುವಿಕೆಯನ್ನು ಹೆಚ್ಚಿಸುತ್ತಿದೆ. ಐಪಿಎಸ್ ಅಸೋಸಿಯೇಷನ್ ಟ್ವಿಟರ್ ಪುಟದಲ್ಲಿ ನಾಗರಿಕರ ಬಗ್ಗೆ ಪೊಲೀಸರ ಹೊಣೆಗಾರಿಕೆಯನ್ನು ಇದು ಎತ್ತಿಹಿಡಿಯುತ್ತಿದೆ ಎಂದು ಹೇಳಿದ್ದರು.

ABOUT THE AUTHOR

...view details