ನವದೆಹಲಿ: ಸರ್ದಾರ್ ವಲ್ಲಭಬಾಯಿ ಪಟೇಲ್ರ 182 ಮೀಟರ್ ಎತ್ತರದ ಏಕತಾ ಪ್ರತಿಮೆಯನ್ನು ಲೋಕಾರ್ಪಣೆ ಮಾಡುವ ಮೂಲಕ ಭಾರತ, ಇಡೀ ವಿಶ್ವ ತನ್ನತ್ತ ತಿರುಗಿನೋಡುವಂತೆ ಮಾಡಿತ್ತು. ಆದರೆ, ಪ್ರತಿಮೆಯೊಳಗಿನ ವೀಕ್ಷಣಾ ಗ್ಯಾಲರಿಯ ಮೇಲ್ಛಾವಳಿ ಮಳೆಯಿಂದ ಸೋರುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಳೆಯಿಂದ ಪ್ರತಿಮೆಯ ಗ್ಯಾಲರಿ ಸೋರುತ್ತಿರುವುದು, ನೆಲದ ಮೇಲೆ ನೀರು ನಿಂತಿರುವುದು, ಅಲ್ಲಿಯೇ ಜನರು ನಿಂತಿರುವ ವೀಡಿಯೋವನ್ನು ಪ್ರವಾಸಿಗನೊಬ್ಬ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದ. ಅದರಡಿ 3000 ಕೋಟಿ ರೂ.ಗಳ ಪ್ರತಿಮೆಯ ಗ್ಯಾಲರಿಯಲ್ಲಿ ಮಳೆ ನೀರು ಸೋರುತ್ತಿದೆ. ಅಷ್ಟೊಂದು ಮೊತ್ತದ ಪ್ರತಿಮೆಯೊಳಗೆ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ ಎಂದು ಟೀಕಿಸಿದ್ದಾರೆ.