ನವದೆಹಲಿ:ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಹೋಗಲು ವಿಶೇಷ ರೈಲುಗಳ ಸೌಲಭ್ಯ ಕಲ್ಪಿಸಿರುವ ರೈಲ್ವೆ ಇಲಾಖೆ ಇದೀಗ ಮತ್ತೊಂದು ನಿರ್ಧಾರವನ್ನು ಕೈಗೊಂಡಿದೆ. ಎಲ್ಲ ವಿಶೇಷ ರೈಲುಗಳಿಗೆ ಮುಂಗಡವಾಗಿ ಟಿಕೆಟ್ ಕಾಯ್ದಿರಿಸುವ ಅವಧಿಯನ್ನು 30 ರಿಂದ 120 ದಿನಗಳಿಗೆ ಹೆಚ್ಚಿಸಿದೆ. ಈ ಮೊದಲು ಕೇವಲ 30ದಿನಗಳಿಗೆ ಮಾತ್ರ ಅವಕಾಶ ನೀಡಿತ್ತು.
ಈ ವಿಶೇಷ ರೈಲುಗಳು ಮೇ 12 ರಿಂದಲೇ ರಾಷ್ಟ್ರ ರಾಜಧಾನಿ ಸೇರಿದಂತೆ ದೇಶದ ವಿವಿಧ ನಗರಗಳಿಗೆ ಸಂಚಾರ ಮಾಡುತ್ತಿವೆ. ಜೂನ್ 1 ರಿಂದ 100 ವಿಶೇಷ ರೈಲುಗಳ ಸಂಚಾರ ಆರಂಭವಾಗಲಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.