ನವದೆಹಲಿ:ಜೂನ್ 30ರವರೆಗೆ ಕಾಯ್ದಿರಿಸಲಾಗಿದ್ದ ಎಲ್ಲ ಸಾಮಾನ್ಯ ರೈಲ್ವೆ ಟಿಕೆಟ್ ರದ್ದುಗೊಳಿಸಿ ರೈಲ್ವೆ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಮುಂಗಡ ಟಿಕೆಟ್ಗಳ ಹಣ ಮರುಪಾವತಿಯಾಗಲಿದೆ ಎಂದು ಪ್ರಯಾಣಿಕರಿಗೆ ತಿಳಿಸಲಾಗಿದೆ.
ಜೂನ್ 30ರವರೆಗೆ ಸಂಚರಿಸಲ್ಲ ರೈಲು: ಎಲ್ಲ ಸಾಮಾನ್ಯ ರೈಲು ಟಿಕೆಟ್ ರದ್ದುಗೊಳಿಸಿದ ಇಲಾಖೆ - ರೈಲು ಟಿಕೆಟ್ ಬುಕ್ಕಿಂಗ್ ರದ್ಧು
ಜೂನ್ 30ರವರೆಗೆ ಬುಕ್ಕಿಂಗ್ ಆಗಿದ್ದ ಎಲ್ಲ ರೈಲು ಟಿಕೆಟ್ ರದ್ದುಗೊಳಿಸಿ ರೈಲ್ವೆ ಇಲಾಖೆ ಮಾಹಿತಿ ಹೊರಹಾಕಿದ್ದು, ಇದರಿಂದ ಮುಂದಿನ ಜೂನ್ 30ರವರೆಗೆ ರೈಲು ಸಂಚಾರವಿರಲ್ಲ ಎನ್ನುವುದು ಖಚಿತವಾಗಿದೆ.
![ಜೂನ್ 30ರವರೆಗೆ ಸಂಚರಿಸಲ್ಲ ರೈಲು: ಎಲ್ಲ ಸಾಮಾನ್ಯ ರೈಲು ಟಿಕೆಟ್ ರದ್ದುಗೊಳಿಸಿದ ಇಲಾಖೆ Railways cancels all train tickets](https://etvbharatimages.akamaized.net/etvbharat/prod-images/768-512-7190428-thumbnail-3x2-wdfddfd.jpg)
Railways cancels all train tickets
ದೇಶದಲ್ಲಿ ಈಗಾಗಲೇ ಕೆಲವು ಪ್ರಮುಖ ನಗರಗಳಿಗೆ ವಿಶೇಷ ರೈಲು ಸಂಚಾರ ಆರಂಭವಾಗಿದೆ. ಇದರ ಬೆನ್ನಲ್ಲೇ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಮುಂಗಡ ಬುಕ್ಕಿಂಗ್ ಟಿಕೆಟ್ಗಳ ಹಣ ಮಾರ್ಚ್ 21ರಿಂದ ಈ ಟಿಕೆಟ್ ಬುಕ್ಕಿಂಗ್ ರದ್ಧತಿ ಅನ್ವಯವಾಗಲಿದೆ ಎಂದು ಇಲಾಖೆ ತಿಳಿಸಿದೆ. ಹೀಗಾಗಿ ದೇಶದಲ್ಲಿ ಜೂನ್ 30ರವರೆಗೆ ಹೆಚ್ಚುವರಿ ರೈಲು ಓಡಾಡುವುದು ಅನುಮಾನ.
ಈಗಾಗಲೇ ಸಂಚರಿಸುತ್ತಿರುವ ವಿಶೇಷ ರೈಲು ಹಾಗೂ ಶ್ರಮಿಕ್ ರೈಲುಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಇನ್ನು ಮೇಲ್,ಎಕ್ಸ್ಪ್ರೆಸ್ ರೈಲು ಹಾಗೂ ಪ್ಯಾಸೇಂಜರ್ ಮತ್ತು ಲೋಕಲ್ ರೈಲುಗಳು ರದ್ದಾಗಿವೆ.
Last Updated : May 14, 2020, 11:57 AM IST