ನವದೆಹಲಿ:ದೇಶಾದ್ಯಂತ ಹೇರಿಕೆ ಮಾಡಲಾಗಿದ್ದ ಲಾಕ್ಡೌನ್ ಸಡಿಲಿಕೆ ಮಾಡಿದ ಬಳಿಕ ಕೊರೊನಾ ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಕಾರಣ ರೈಲ್ವೆ ಇಲಾಖೆ ಇದೀಗ ಮಹತ್ವದ ನಿರ್ಧಾರ ಕೈಗೊಂಡಿದೆ.
ಹೆಚ್ಚಾಗುತ್ತಲೇ ಇರುವ ಕೊರೊನಾ: ಜು. 1ರಿಂದ ಆ. 12ರವರೆಗಿನ ನಿಗದಿತ ರೈಲುಗಳ ಎಲ್ಲಾ ಟಿಕೆಟ್ ರದ್ದು! - ರೈಲ್ವೆ ಇಲಾಖೆ
ದೇಶದಲ್ಲಿ ಲಾಕ್ಡೌನ್ ಸಡಲಿಕೆ ಮಾಡಿದ ಬಳಿಕ ಅತಿ ಹೆಚ್ಚು ಕೊರೊನಾ ಕೇಸ್ ಕಾಣಿಸಿಕೊಳ್ಳುತ್ತಿರುವ ಕಾರಣ ಇದೀಗ ರೈಲ್ವೆ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ.
Railways Cancels All Tickets
ಜುಲೈ 1ರಿಂದ ಆಗಸ್ಟ್ 12ರವರೆಗೆ ದೈನಂದಿನ ನಿಗದಿತ ರೈಲುಗಳ ಎಲ್ಲಾ ಟಿಕೆಟ್ ರದ್ದುಗೊಳಿಸಿ ಆದೇಶ ಹೊರಡಿಸಲಾಗಿದೆ. ಕೇಂದ್ರ ಸರ್ಕಾರ ಹೇರಿಕೆ ಮಾಡಿದ್ದ ಕೆಲವೊಂದು ನಿರ್ಬಂಧ ಸಡಿಲಿಕೆ ಮಾಡಿದ ಬಳಿಕ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ರೈಲಿನಲ್ಲಿ ಸಂಚಾರ ಮಾಡುವವರ ಸಂಖ್ಯೆ ಕೂಡ ಹೆಚ್ಚಾಗಿತ್ತು. ಹೀಗಾಗಿ ಸಾಮಾನ್ಯ ರೈಲುಗಳಲ್ಲಿ ಕಾಯ್ದಿರಿಸಿರುವ ಎಲ್ಲಾ ಟಿಕೆಟ್ ರದ್ದುಗೊಳಿಸಿ ರೈಲ್ವೆ ಇಲಾಖೆ ಮಾಹಿತಿ ನೀಡಿದೆ.
ಈ ದಿನಾಂಕದಲ್ಲಿ ಕಾಯ್ದಿರಿಸಿದ ಎಲ್ಲಾ ಟಿಕೆಟ್ಗಳ ಪೂರ್ಣ ಹಣ ಮರುಪಾವತಿ ಮಾಡಲಾಗುವುದು ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.