ಕರ್ನಾಟಕ

karnataka

ETV Bharat / bharat

ಟ್ರ್ಯಾಕ್ಟರ್ ರ‍್ಯಾಲಿ ವೇಳೆ ​ಹಿಂಸಾಚಾರ: ರೈಲು ತಪ್ಪಿಸಿಕೊಂಡ ಪ್ರಯಾಣಿಕರಿಗೆ ಹಣ ಮರುಪಾವತಿ! - ಟ್ರ್ಯಾಕ್ಟರ್ ರ‍್ಯಾಲಿ ವೇಳೆ ​ಹಿಂಸಾಚಾರ

ಕೇಂದ್ರ ಸರ್ಕಾರದ ಕೃಷಿ ಕಾನೂನುಗಳ ವಿರುದ್ಧ ರೈತರು ಹಮ್ಮಿಕೊಂಡಿದ್ದ ಟ್ರ್ಯಾಕ್ಟರ್ ಪರೇಡ್​ ವೇಳೆ ಅಪಾರ ಪ್ರಮಾಣದ ಆಸ್ತಿ ಹಾನಿಯಾಗಿದ್ದು, ಕೆಲ ಸಾರ್ವಜನಿಕರು ಸಂಕಷ್ಟಕ್ಕೊಳಗಾಗಿದ್ದಾರೆ.

Railways announces refund
Railways announces refund

By

Published : Jan 26, 2021, 7:41 PM IST

ನವದೆಹಲಿ: ಕೇಂದ್ರ ಜಾರಿಗೊಳಿಸಲು ಮುಂದಾಗಿರುವ ಕೃಷಿ ಕಾನೂನುಗಳ ವಿರುದ್ಧ ಇಂದು ರೈತರು ಟ್ರ್ಯಾಕ್ಟರ್​ ರ‍್ಯಾಲಿ ನಡೆಸಿದ್ದು, ಇದು ಹಿಂಸಾಚಾರ ರೂಪ ಪಡೆದುಕೊಂಡಿರುವ ಕಾರಣ ಹಲವು ಮಂದಿ ತೊಂದರೆ ಅನುಭವಿಸಿದ್ದಾರೆ.

ಓದಿ: ಕೆಂಪುಕೋಟೆಗೆ ಹಾನಿ, ಅಪಾರ ಪ್ರಮಾಣದ ಸಾರ್ವಜನಿಕ ಆಸ್ತಿ ಧ್ವಂಸ; 18 ಪೊಲೀಸರಿಗೆ ಗಾಯ

ಪ್ರತಿಭಟನೆ ಹಿಂಸಾಚಾರ ರೂಪ ಪಡೆದುಕೊಂಡ ಕಾರಣ ದೆಹಲಿಯ ಅನೇಕ ಸ್ಥಳಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಮೆಟ್ರೋ ಸಂಚಾರ ಕೂಡ ಬಂದ್ ಮಾಡಲಾಗಿತ್ತು. ಹೀಗಾಗಿ ಬೇರೆ ಬೇರೆ ಸ್ಥಗಳಿಗೆ ಹೋಗಬೇಕಾದ ಪ್ರಮಾಣಿಕರು ರೈಲು ತಪ್ಪಿಸಿಕೊಂಡಿದ್ದಾರೆ.

ರೈಲ್ವೆ ಪ್ರಯಾಣ ತಪ್ಪಿಸಿಕೊಂಡಿರುವ ಪ್ರಯಾಣಿಕರಿಗೆ ಇದೀಗ ರೈಲ್ವೆ ಇಲಾಖೆ ಹಣ ಮರುಪಾವತಿ ಮಾಡಲು ನಿರ್ಧರಿಸಿದ್ದು, ಆದಷ್ಟು ಬೇಗ ಹಣ ಹಿಂದಿರುಗಿಸುವುದಾಗಿ ಹೇಳಿದೆ. ರೈತರ ಪ್ರತಿಭಟನೆ ಹಿಂಸಾಚಾರ ಪಡೆದುಕೊಂಡ ಕಾರಣ GTK ರಸ್ತೆ, ಔಟರ್ ರಿಂಗ್ ರೋಡ್​, ಮಧುಬನ್ ಚೌಕ್​, ಪಲ್ಲಾ ರೋಡ್​, ವಜೀರಾಬಾದ್ ರೋಡ್​, ವಿಕಾಸ್ ಮಾರ್ಗ್​ ನೋಯ್ಡಾ ರೋಡ್​ಗಳಲ್ಲಿ ರಸ್ತೆ ಸಂಚಾರದಲ್ಲಿ ವ್ಯತ್ಯಯವಾಗಿತ್ತು.

ABOUT THE AUTHOR

...view details