ಕರ್ನಾಟಕ

karnataka

ETV Bharat / bharat

ಹೊಸ ವರ್ಷಕ್ಕೆ ರೈಲ್ವೆಯಿಂದ ದರ ಏರಿಕೆ ಶಾಕ್​​: ಇದು ನ್ಯೂ ಇಯರ್​ ಉಡುಗೊರೆ - ರೈಲ್ವೆ ದರ ಏರಿಕೆ

ಭಾರತೀಯ ರೈಲ್ವೆ ಇಲಾಖೆ ಬಹಳ ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ರೈಲು ಪ್ರಯಾಣ ದರವನ್ನ ಏರಿಕೆ ಮಾಡಿ ಆದೇಶ ಹೊರಡಿಸಿದೆ.

Railways announces fare hike effective from Jan 1
ಹೊಸ ವರ್ಷಕ್ಕೆ ರೈಲ್ವೆಯಿಂದ ದರ ಏರಿಕೆ ಶಾಕ್

By

Published : Dec 31, 2019, 8:35 PM IST

ನವದೆಹಲಿ: ಭಾರತೀಯ ರೈಲ್ವೆ ಇಲಾಖೆ ಬಹಳ ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ರೈಲು ಪ್ರಯಾಣ ದರವನ್ನ ಏರಿಕೆ ಮಾಡಿ ಆದೇಶ ಹೊರಡಿಸಿದೆ.

ಪ್ರತಿ ಕಿಲೋಮೀಟರ್​ಗೆ 1 ಪೈಸೆ ಹೆಚ್ಚಳವಾಗಿದೆ. ಅಂದರೆ 100 ಕಿ.ಮೀಟರ್​ಗೆ 1 ರೂ. ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಇದು ದ್ವಿತೀಯ ದರ್ಜೆ ಹಾಗೂ ಸ್ಲೀಪರ್​ ಕ್ಲಾಸ್​ ಹಾಗೂ ನಾನ್​ ಎಸಿ ಫಸ್ಟ್​ ಕ್ಲಾಸ್​​ ಪ್ರಯಾಣ ದರ ಕಿ.ಮೀ. ಗೆ 1 ಪೈಸೆ ಏರಿಕೆ ಮಾಡಲಾಗಿದೆ.

ಹೊಸ ವರ್ಷಕ್ಕೆ ರೈಲ್ವೆಯಿಂದ ದರ ಏರಿಕೆ ಶಾಕ್

ಇನ್ನು ಎಸಿ ಚೇರ್​​​​​​ ಕಾರ್​​​​​​​​, ಎಸಿ 3 ಟೈರ್​​​​, ಎಸಿ -2 ಟೈರ್​ ಹಾಗೂ ಫಸ್ಟ್​ ಕ್ಲಾಸ್​ ಚೇರ್​ ಕಾರ್​ ಪ್ರಯಾಣ ದರ ಪ್ರತಿ ಕಿ.ಮೀಗೆ ನಾಲ್ಕು ಪೈಸೆ ಅಂದರೆ 100 ಕಿಲೋ ಮೀಟರ್​ಗೆ 4 ರೂ. ಹೆಚ್ಚಳವಾಗಿದೆ.

ಬಹಳ ವರ್ಷಗಳ ನಂತರ ಈ ಹೆಚ್ಚಳ ಮಾಡಲಾಗಿದೆ. ಈ ಮೂಲಕ ರೈಲ್ವೆ ಇಲಾಖೆ ಹೊಸ ವರ್ಷಕ್ಕೆ ಶಾಕ್​ ನೀಡಿದೆ.

ABOUT THE AUTHOR

...view details