ಕರ್ನಾಟಕ

karnataka

ETV Bharat / bharat

ಕೋವಿಡ್​​-19 ಬಿಕ್ಕಟ್ಟು: ರೈಲ್ವೆ ನಿಲ್ದಾಣದಲ್ಲೂ ಲಭ್ಯವಾಗಲಿವೆ ಸೋಂಕು ತಡೆಯುವ ಅಗತ್ಯ ವಸ್ತುಗಳು! - ರೈಲ್ವೆ ನಿಲ್ದಾಣದಲ್ಲಿ ಸ್ಯಾನಿಟೈಸರ್​ ಮಾರಾಟ

ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ರೈಲ್ವೆ ನಿಲ್ದಾಣದ ಸ್ಟಾಲ್​ಗಳಲ್ಲೂ ಅಗತ್ಯವಾಗಿ ಬೇಕಾದ ಮಾಸ್ಕ್, ಸ್ಯಾನಿಟೈಸರ್​, ಕೈಗವಸುಗಳು ಮತ್ತು ಬೆಡ್​ರೋಲ್​ ಕಿಟ್​​ಗಳ ಮಾರಾಟಕ್ಕೆ ಅನುಮತಿ ನೀಡಲಾಗಿದೆ.

Railway stalls to sell coronavirus essentials
ಸೋಂಕು ತಡೆಯುವ ಅಗತ್ಯ ವಸ್ತುಗಳು

By

Published : Jun 25, 2020, 5:37 PM IST

ನವದೆಹಲಿ:ಸಾಂಕ್ರಾಮಿಕ ರೋಗದ ಬಿಕ್ಕಟ್ಟಿನ ಸಮಯದಲ್ಲಿ ಅಗತ್ಯವಾಗಿ ಬೇಕಾದ ಮಾಸ್ಕ್, ಸ್ಯಾನಿಟೈಸರ್​, ಕೈಗವಸುಗಳು ಮತ್ತು ಬೆಡ್​ರೋಲ್​ ಕಿಟ್​ಗಳನ್ನು ರೈಲ್ವೆ ಅಂಕಣಗಳಲ್ಲಿನ ಬಹುಪಯೋಗಿ ಸ್ಟಾಲ್‌ಗಳಲ್ಲಿ ಮಾರಾಟ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಖಾಸಗಿ ಗುತ್ತಿಗೆದಾರರು ನಡೆಸುವ ಸ್ಟಾಲ್‌ಗಳಲ್ಲಿ ಪ್ರಯಾಣಿಕರಿಗೆ ಅಗತ್ಯವಿರುವ ಪುಸ್ತಕಗಳು, ಔಷಧಿಗಳು ಮತ್ತು ಪ್ಯಾಕ್ ಮಾಡಿದ ತಿನ್ನಬಹುದಾದ ವಸ್ತುಗಳನ್ನು ಮಾರಾಟ ಮಾಡುತ್ತಿವೆ. ರೈಲ್ವೆ ಮಂಡಳಿಯ ಸೂಚನೆಗಳ ಪ್ರಕಾರ, ಸೋಂಕಿನಿಂದ ಪ್ರಯಾಣಿಕರನ್ನು ರಕ್ಷಿಸಲು ಅಗತ್ಯವಾದ ವಸ್ತುಗಳನ್ನು ಸ್ಟಾಲ್​ಗಳು ಮಾರಾಟ ಮಾಡಲಿವೆ ಎಂದಿದ್ದಾರೆ.

ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಕೆಲವು ವಸ್ತುಗಳು ಅಗತ್ಯವಾಗಿ ಬೇಕಾಗುತ್ತವೆ. ಅವರು ಮನೆಯಿಂದ ಬರುವಾಗ ತರುವುದನ್ನು ಮರೆತರೂ ರೈಲು ನಿಲ್ದಾಣಗಳಲ್ಲಿ ಅವುಗಳನ್ನು ಖರೀದಿಸಬೇಕಾಗುತ್ತದೆ. ಹೀಗಾಗಿ ಪ್ರಯಾಣಿಕರ ಅನುಕೂಲಕ್ಕೋಸ್ಕರ ರೈಲ್ವೆ ಫ್ಲಾಟ್​ಪಾರ್ಮ್​ನಲ್ಲಿನ ಸ್ಟಾಲ್​ಗಳಲ್ಲೂ ಮಾರಾಟ ಮಾಡಲು ನಿರ್ದೇಶನ ನೀಡಿದ್ದೇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಅಗತ್ಯ ವಸ್ತುಗಳನ್ನು ಎಂಆರ್‌ಪಿ ದರದಲ್ಲಿ ಮಾರಾಟ ಮಾಡಲು ಸೂಚಿಸಲಾಗಿದೆ. ಅದರ ಮೂಲಕ ಯಾವುದೇ ಲಾಭ ಗಳಿಸುವುದನ್ನು ಅನುಮತಿಸಲಾಗುವುದಿಲ್ಲ ಎಂದು ರೈಲ್ವೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೊರೊನಾ ವೈರಸ್ ಹರಡುವ ಭೀತಿಯಿಂದ ರೈಲುಗಳಲ್ಲಿ ಬೆಡ್‌ರೋಲ್ ಕಿಟ್‌ಗಳನ್ನು ನೀಡುತ್ತಿಲ್ಲ. ಆದರೆ ಸ್ಟಾಲ್‌ಗಳಲ್ಲಿ ಅಂತಾ ಕಿಟ್​ಗಳು ಲಭ್ಯವಿರುತ್ತವೆ ಎಂದು ಅಧಿಕಾರಿ ತಿಳಿಸಿದ್ದಾರೆ. ಅವುಗಳನ್ನು ಕಿಟ್‌ನಂತೆ ಮಾರಾಟ ಮಾಡಲಾಗುತ್ತದೆ. ಪ್ರಯಾಣಿಕರು ಸಂಪೂರ್ಣ ಕಿಟ್ ಅಥವಾ ಯಾವುದೇ ವಸ್ತುವನ್ನು ಪ್ರತ್ಯೇಕವಾಗಿ ಖರೀದಿಸಬಹುದು ಎಂದು ಹೇಳಿದ್ದಾರೆ.

ABOUT THE AUTHOR

...view details